News

ಪೆಟ್ರೋಲ್ ಡೀಸೆಲ್ ದರ ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಳ

08 June, 2020 12:32 PM IST By:

ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಾಗಿದ್ದು, 80 ದಿನಗಳ ಬಳಿಕ ಆಟೋ ಇಂಧನ ದರವೂ ಹೆಚ್ಚಾಗಿದೆ.

ಮಾರ್ಚ್ 16 ರಂದು ಆಟೋ ಇಂಧನ ದರವನ್ನು ಪರಿಷ್ಕರಿಸಲಾಗಿತ್ತು. ಕೆಲವು ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆಯನ್ನು ಹೇರಿದ ಹಿನ್ನೆಲೆಯಲ್ಲಿ ಆಟೋ ಇಂಧನ ದರ ಹೆಚ್ಚಾಗಿದೆ.
ಇದರೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 78.18 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 69.99
ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಪ್ರತಿ ಲೀಟರ್‌ಗೆ 71.86 ಹಾಗೂ 69.99 ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 78.91 ಆಗಿದೆ.

ಲಾಕ್‌ಡೌನ್ ವೇಳೆಯಲ್ಲಿ ಅನೇಕ ರಾಜ್ಯಗಳು ಇಂಧನ ದರದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರೂ ದೇಶದಾದ್ಯಂತ ಏರಿಕೆಯಾಗಿರುವುದು ಇದೇ ಮೊದಲಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರವು ಕ್ರಮವಾಗಿ ಕಳೆದ ತಿಂಗಳು 10 ಮತ್ತು 13ರಷ್ಟು ಹೆಚ್ಚಿಸಿತ್ತು.

ಪೆಟ್ರೋಲ್, ಡೀಸೆಲ್ ಹಾಗೂ ಆಟೋ ಇಂಧನದ ಮೇಲೆ ಅಬಕಾರಿ ಸುಂಕ, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3 ರೂ. ಹೆಚ್ಚಳವಾಗಿದೆ. ಇದರ ಜತೆಗೆ ಕೇಂದ್ರದ ಸುಂಕ 22.98 ರೂ. ಮತ್ತು 18.83 ರೂ.

ಒಟ್ಟಾರೆ ಪೆಟ್ರೋಲ್ ಸುಂಕ ಹೆಚ್ಚಾಗಿದೆ. ಡೀಸೆಲ್ ಬೆಲೆ ಮೇಲೆ ಕೇಂದ್ರ ಸುಂಕವನ್ನು ಹೇರಿಲ್ಲ. ಮಾರ್ಚ್ 16ರ ಬಳಿಕ ಹಲವು ಬಾರಿ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ.