News

9 ದಿನಗಳಿಂದ ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ

29 November, 2020 9:07 AM IST By:

ನವೆಂಬರ್‌ 20ರಿಂದ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳನ್ನು ಸತತವಾಗಿ ಏರಿಸುತ್ತಿದ್ದು, ಈ ತನಕ ಪೆಟ್ರೋಲ್‌ ಲೀಟರ್‌ಗೆ 1.07 ರೂಪಾಯಿ ಮತ್ತು ಡೀಸೆಲ್‌ 1.67 ರೂಪಾಯಿಗೆ ಏರಿಕೆಯಾಗಿದೆ.

ಪೆಟ್ರೋಲ್‌ ದರ ಹೊಸದಿಲ್ಲಿಯಲ್ಲಿ ಶನಿವಾರ 24 ಪೈಸೆ ಏರಿ ಲೀಟರ್‌ಗೆ 82.13  ರೂಪಾಯಿಗೆ ಮುಟ್ಟಿದೆ, ಡೀಸೆಲ್‌ 27 ಪೈಸೆ ಏರಿ 72.13 ರೂಪಾಯಿಗೆ ಮುಟ್ಟಿದೆ.ಇದೇ ರೀತಿ ಬೆಂಗಳೂರಿನಲ್ಲಿ ಲೀಟರ್‌ಗೆ 84.87 ರೂಪಾಯಿ ಹಾಗೂ ಡೀಸೆಲ್‌ ಬೆಲೆ 76.46 ರೂಪಾಯಿಗೆ ತಲುಪಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ನವೆಂಬರ್ 20 ರಿಂದ 28ರವರೆಗಿನ 9 ದಿನಗಳ ಅವಧಿಯಲ್ಲಿ 8 ದಿನಗಳು ಇಂಧನ ದರ ಹೆಚ್ಚಿಸಿವೆ. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ 1.11ರಷ್ಟು ಹಾಗೂ ಪ್ರತಿ ಲೀಟರ್‌ ಡೀಸೆಲ್‌ ದರ 1.77ರಷ್ಟು ಏರಿಕೆಯಾಗಿದೆ.

ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ   88.58ರಿಂದ  88.81ಕ್ಕೆ ಹಾಗೂ ಡೀಸೆಲ್‌ ದರ  78.38 ರಿಂದ  78.66ಕ್ಕೆ ಏರಿಕೆಯಾಗಿದೆ.

ಮುಂಬಯಿನಲ್ಲಿ ಸದ್ಯದಲ್ಲೇ 90 ರೂಪಾಯಿ!

ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಪೆಟ್ರೋಲ್‌ ದರ 88.81 ರೂಪಾಯಿಗೆ ಏರಿಕೆಯಾಗಿದ್ದು, ಸದ್ಯದಲ್ಲೇ 90 ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ಇಲ್ಲಿ ಡೀಸೆಲ್ ಬೆಲೆ‌ 78.38 ರೂಪಾಯಿಗೆ ಏರಿದೆ. ಇಂಧನ ದರಗಳು ಸ್ಥಳೀಯ ತೆರಿಗೆಗಳಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.