ಕೊರೋನಾ ತಡಯಲು ಸರ್ಕಾರ ಹೇರಿರುವ ಲಾಕ್ಡೌನ್ ನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಜನತೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಹೌದು ಶುಕ್ರವಾರಮತ್ತೆ ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ 19 ಪೈಸೆ, ಡೀಸೆಲ್ 29 ಪೈಸೆಯಷ್ಟ ಹೆಚ್ಚಳವಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶಾದ್ಯಂತ ಮೇ 4 ರಿಂದ 11 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡಿವೆ. ಇದರಿಂದಾಗಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 2.64 ರೂ., ಡೀಸೆಲ್ ದರ 3.07 ರೂ. ಜಾಸ್ತಿಯಾಗಿದೆ.
ಶುಕ್ರವಾರ ಪೆಟ್ರೋಲ್ ದರ ಲೀಟರಿಗ 19 ಪೈಸೆ ಮತ್ತು ಡೀಸೆಲ್ ದರ 29 ಪೈಸೆ ಹೆಚ್ಚಳವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರವು ಲೀಟರಿಗೆ 100 ರ ಗಡಿ ದಾಟಿದೆ. ಶುಕ್ರವಾರದ ದರ ಏರಿಕೆಯ ಕಾರಣದಿಂದಾಗಿ ಮಹಾರಾಷ್ಟ್ರದ ಅನೇಕ ನಗರಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 93.04 ರೂ., ಡೀಸೆಲ್ 83.80 ರೂ. ಇದೆ. ಬೆಂಗಳೂರಿನಲ್ಲಿ 96.14 ಮತ್ತು ಡೀಸೆಲ್ ದರ 88.84 ರಷ್ಟಾಗಿದೆ. ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲಲ್ ಪೆಟ್ರೋಲ್ ದರವು ಲೀಟರಿಗೆ 104 ರೂಪಾಯಿ ಇದೆ.
ನಗರ |
ಪೆಟ್ರೋಲ್ |
ಡೀಸೆಲ್ |
ದೆಹಲಿ |
93.04 |
83.80 |
ಮುಂಬೈ |
99.32 |
91.01 |
ಚೆನೈ |
94.71 |
88.62 |
ಕೊಲ್ಕತ್ತಾ |
93.11 |
86.64 |
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ವಿದೇಶಿ ವಿನಿಮಯ ದರಗಳಲ್ಲಿನ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ದೇಶೀಯ ಇಂಧನದ ದರಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಹೊಂದಿಸುತ್ತದೆ. ಇಂಧನ ಬೆಲೆಯಲ್ಲಿ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ಜಾರಿಗೆ ತರಲಾಗುತ್ತದೆ.