News

ದೇಶದಲ್ಲಿ ಮತ್ತೆ ಏರಿಕೆಯಾಯಿತು ಪೆಟ್ರೋಲ್ ಡಿಸೆಲ್ ದರ- ಬೆಂಗಳೂರಿನಲ್ಲಿ 90 ರುಪಾಯಿ ದಾಟಿದ ಪೆಟ್ರೋಲ್ ಬೆಲೆ

10 February, 2021 2:04 PM IST By:
Petrol

ಪೆಟ್ರೋಲ್ ಡೀಸೆಲ್ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಈಗಾಗಲೇ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದಾಗಿ ಜನರ ಜೇಬು ಸುಡುವಂತೆ ಮಾಡಿದೆ.

ಬುಧವಾರದಂದು ಪೆಟ್ರೋಲ್ 70 ಪೈಸೆ ಮತ್ತು ಡೀಸೆಲ್ ದರಗಳಲ್ಲಿ 27 ಪೈಸೆಯಷ್ಟು ಏರಿಕೆಯಾಗುವ ಮೂಲಕ ದಾಖಲೆ ಮಟ್ಟಕ್ಕೇರಿವೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಎಲ್ಲ ಮೆಟ್ರೋ ಪಾಲಿಟನ್‌ ನಗರಗಳಲ್ಲಿ ಭಾರೀ ಏರಿಕೆಯಾಗಿದೆ.

ಬ್ರೆಂಟ್  ಕಚ್ಚಾ ತೈಲ ಬೆಲೆ ಸೋಮವಾರ ಪ್ರತಿ ಬ್ಯಾರೆಲ್ ಗೆ 60 ಡಾಲರ್ ತಲುಪಿತ್ತು. ಇದು ಈ ವರ್ಷದ ಗರಿಷ್ಠವಾಗಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಯು ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ಮೇಲೆ ಪರಿಣಾಮ ಬೀರುತ್ತಿದೆ.

ಒಂದೆಡೆ ಬೆಲೆಏರಿಕೆ, ಇನ್ನೊಂದೆಂಡೆ ಎಲ್ಪಿಜಿ ಸಿಲೆಂಡರ್ ಬೆಲೆ ಏರಿಕೆ ಮತ್ತೊಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ಇನ್ನಷ್ಟು ಕಷ್ಟವಾಗುತ್ತಿದೆ. ಬೆಲೆ ನಿಯಂತ್ರಣ ಮಾಡಲು ಸಾಧ್ಯವಿಲ್ಲವೇ ಎಂಬ ಮಾತುಗಳುಕೇಳಿಬರುತ್ತಿವೆ.

ದೇಶದ ವಿವಿದ ನಗರಗಳಲ್ಲಿ ಪೆಟ್ರೋಲ್ ಡಿಸೆಲ್ ದರ

ಬೆಂಗಳೂರು: ಪೆಟ್ರೋಲ್: 90.53 ರೂ. ಡೀಸೆಲ್: 82.40 ರೂ.
ನವದೆಹಲಿ: ಪೆಟ್ರೋಲ್: 87.60 ರೂ. ಡೀಸೆಲ್: 77.73 ರೂ.
ಮುಂಬಯಿ: ಪೆಟ್ರೋಲ್: 94.12 ರೂ. ಡೀಸೆಲ್: 84.63 ರೂ.
ಚೆನ್ನೈ: ಪೆಟ್ರೋಲ್:89.96 ರೂ. ಡೀಸೆಲ್:82.90 ರೂ.