ಭವಿಷ್ಯ ನಿಧಿ ಪಿಂಚಣಿದಾರರು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಪಿಂಚಣಿದಾರರು ಭವಿಷ್ಯ ನಿಧಿ ಕಚೇರಿ ಹಾಗೂ ಬ್ಯಾಂಕುಗಳಿಗೆ ತೆರಳುವ ಅಗತ್ಯವಿಲ್ಲ. ಇನ್ನು ಮುಂದೆ ಮನೆ ಬಾಗಿಲಿಗೆ ಟಪಾಲು ತರುವ ಪೋಸ್ಟ್ ಮ್ಯಾನ್ ಕೂಡ ಭವಿಷ್ಯ ನಿಧಿ ಪಿಂಚಣಿದಾರರ ಆಧಾರ್ ಆಧಾರಿತ ಬಯೋಮೆಟ್ರಿಕ್ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ವಿಶೇಷವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅವಶ್ಯಕ ಸೇವೆಗಳನ್ನು ಒದಗಿಸಲು ಅಂಚೆ ಇಲಾಖೆ ಸನ್ನದ್ಧವಾಗಿದ್ದು ಗ್ರಾಮೀಣ ಜನತೆ ಹತ್ತಿರದ ಅಂಚೆ ಇಲಾಖೆಗಳ ಸದುಪಯೋಗ ಪಡೆದುಕೊಳ್ಳಬೇಕು.
ಪಿಂಚಣಿದಾರರು ತಮಗೆ ಹತ್ತಿರದ ಅಂಚೆ ಕಛೇರಿಗೆ ಭೇಟಿ ನೀಡಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ತಪ್ಪದೇ ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ನಂಬರ, ಪಿ.ಪಿ.ಓ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಹೊಂದಿರಬೇಕು.
ಸರ್ಕಾರ ಗ್ರಾಮೀಣ ಜನರಿಗೆ ವಿವಿಧ ಯೋಜನೆಗಳನ್ನು ಬ್ಯಾಂಕ್ ಮುಖಾಂತರ ನೀಡುತ್ತಿದ್ದು, ಜನರು ಬ್ಯಾಂಕ್ ಗಳಲ್ಲದೇ ಗ್ರಾಮೀಣ ಪೋಸ್ಟ್ ಆಫಿಸ್ ಮೂಲಕ ಜೀವಂತ ಪ್ರಮಾಣ ಪತ್ರವನ್ನು ಪೋಸ್ಟ್ ಮುಖಾಂತರ ಅಂಚೆ ಕಛೇರಿಗೆ ಸಲ್ಲಿಸಬಹುದು..
ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯಲ್ಲಿ ಜನಸಂದಣಿಯನ್ನು ತಪ್ಪಿಸಲು ಮತ್ತು ಎಲ್ಲಾ ಪಿಂಚಣಿದಾರರು ಹಿರಿಯ ನಾಗರರೀಕರಾಗಿರುವುದರಿಂದ ಜೀವಂತ ಪ್ರಮಾಣ ಪತ್ರ ನೋಂದಾಯಿಸಲು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಬ್ಯಾಂಕ್ ಗಳಿಗೆ ಭೇಟಿ ನೀಡುವಂತೆ ಈಗಾಗಲೇ ಮಾಹಿತಿ ನೀಡಲಾಗಿದೆ.
ಸಾಮಾನ್ಯ ಸೇವಾಕೇಂದ್ರ ಮತ್ತು ಬ್ಯಾಂಕಗಳಲ್ಲದೇ, ಈಗ ಭವಿಷ್ಯ ನಿಧಿ ಪಿಂಚಣಿದಾರರು ತಮ್ಮ ಮನೆಯಿಂದಲೇ ಜೀವಂತ ಪ್ರಮಾಣ ಪತ್ರವನ್ನು ಪೋಸ್ಟಮ್ಯಾನ್/ ಡಾಕ್ ಸೇವಕರ ಮೂಲಕ ಸಲ್ಲಿಸಬಹದು. ಪಿಂಚಣಿದಾರರು ಪೋಸ್ಟಮ್ಯಾನ್/ಡಾಕ್ ಸೇವಕರನ್ನುತಮ್ಮ ಮನೆಗಳಿಗೆ ಕಳುಹಿಸುವಂತೆ ಪೋಸ್ಟ್ ಅಧಿಕಾರಿಗಳಿಗೆ ವಿನಂತಿಸಬಹುದು. ಅಥವಾ ತಮ್ಮ ಹತ್ತಿರದ ಅಂಚೆ ಕಚೇರಿಗೆಖುದ್ದಾಗಿ ಭೇಟಿ ಮಾಡಬಹುದು. ಈ ಸೇವೆಗಾಗಿ ಪಿಂಚಣಿದಾರರು ರೂ.70/-ಗಳನ್ನು ಶುಲ್ಕವಾಗಿ ಪೋಸ್ಟಮ್ಯಾನ್/ ಡಾಕ್ ಸೇವಕರು/ಅಂಚೆ ಕಚೇರಿಗೆ ಪಾವತಿಸಬೇಕು. ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಸೇವೆಯನ್ನು ಬುಕ್ ಮಾಡಲು ಟೋಲ್ ಫ್ರೀ ಸಂಖ್ಯೆ 155299 ಗೆ ಸಂಪರ್ಕಿಸಬಹುದು.
ಲೇಖಕರು: ಶಗುಪ್ತಾ ಅ ಶೇಖ