75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಕೊಡುಗೆ ನೀಡಿದೆ. ಪಿಂಚಣಿ ಮತ್ತು ಠೇವಣಿ ಮೇಲಿನ ಬಡ್ಡಿಯ ಮೇಲೆ ಅವಲಂಬಿತರಾಗಿರುವ 75 ವರ್ಷದ ಹಿರಿಯ ನಾಗರಿಕರು ಇನ್ನು ಮುಂದೆ ಆದಾಯ ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ.
ಹೌದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ 2021-22ನೇ ಸಾಲಿನ ಆಯವ್ಯಯದಲ್ಲಿ ಹಿರಿಯ ನಾಗಕರಿಕರು ತೆರಿಗೆ ಕಟ್ಟುವ ಅಗತ್ಯವಿಲ್ಲವೆಂದು ಘೋಷಿಸಿದ್ದಾರೆ.
ಇದರಿಂದ ಒಂದು ಪಿಂಚಣಿ ಹಾಗೂ ಒಂದೇ ಬಡ್ಡಿಯ ಯೋಜನೆ ಹೊಂದಿರುವ 75 ವರ್ಷಗಳ ಹಿರಿಯ ನಾಗರಿಕರಿಗೆ ಮಾತ್ರ ಈ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವಿನಾಯಿತಿ ಅನ್ವಯವಾಗಲಿದ್ದು, ಬಹುಮೂಲಗಳಿಂದ ಆದಾಯ ಹಾಗೂ ಬಡ್ಡಿಯ ಯೋಜನೆ ಹೊಂದಿರುವ ಹಿರಿಯ ನಾಗರಿಕರಿಗೆ ಇದು ಅನ್ವಯವಾಗುವುದಿಲ್ಲ.
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾಯವಣೆ ಮಾಡಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಮುಂದುವರೆಸಲಾಗಿದೆ.
ಆದಾಯ ತೆರಿಗೆ: 2.5 ಲಕ್ಷ ವರೆಗೆ 0%, 2.5 ಲಕ್ಷದಿಂದ 5 ಲಕ್ಷದವರೆಗೆ 5 %, 5 ಲಕ್ಷದಿಂದ 7.5 ಲಕ್ಷದವರೆಗೆ 10%, 7.5 ಲಕ್ಷದಿಂದ 10 ಲಕ್ಷದವರೆಗೆ 15 %, 10ರಿಂದ 12.5 ಲಕ್ಷದವರೆಗೆ 20 % ಮತ್ತು 12.5 ಲಕ್ಷದಿಂದ 15 ಲಕ್ಷದವರೆಗೆ 25% ಹಾಗೂ 25 ಲಕ್ಷ ರೂ ಆದಾಯ ಹೊಂದಿರುವವರಿಗೆ 30 % ಆದಾಯ ತೆರಿಗೆ ವಿಧಿಸಲಾಗಿದೆ.