News

ಸಾರ್ವಜನಿಕರು ಆನ್ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಸೂಚನೆ

12 May, 2021 12:22 PM IST By:

ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಎಲ್ಲಾ ಸ್ವತ್ತುಗಳ ಬಾಕಿ ಇರುವ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ವಿಧಾನ ಇಂತಿದೆ. ಸಾರ್ವಜನಿಕರು ಕಲಬುರಗಿ ಮಹಾನಗರ ಪಾಲಿಕೆಯ www.kalaburagicitycorp.orgವೆಬ್‌ಸೈಟ್‌ಗೆ ಭೇಟಿ ನೀಡಿ Property tax module ಮೇಲೆ ಕ್ಲಿಕ್ ಮಾಡಬೇಕು. ಸ್ವತ್ತಿಗೆ ಸಂಬAಧಿಸಿದ PID /Property no  ಅಥವಾ  Owner Name ನಮೂದಿಸಿ ಸರ್ಚ್ ಮಾಡಬೇಕು. ಆಸ್ತಿ ತೆರಿಗೆಯ ವಿವರ ಪಡೆಯಲು View  ಮೇಲೆ ಕ್ಲಿಕ್ ಮಾಡಬೇಕು. ನಂತರ Calculate tax ಮೇಲೆ ಕ್ಲಿಕ್ ಮಾಡಬೇಕು. ನಂತರ Click on Pay online ಮೇಲೆ ಕ್ಲಿಕ್ ಮಾಡಿ  ಕಡ್ಡಾಯವಾಗಿ ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ಕ್ಲಿಕ್ ಆನ್ ಪೇ (Click on Pay) ಮೇಲೆ ಕ್ಲಿಕ್ ಮಾಡಬೇಕು. ನಂತರ ಕ್ರೇಡಿಟ್, ಡೇಬಿಟ್ ಅಥವಾ ನೆಟ್‌ಬ್ಯಾಂಕಿAಗ್ (Credit/Debit  ಅಥವಾ Net banking) ಇದರಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ಹಣ ಪಾವತಿಸಿದ ನಂತರ ರಶೀದಿಯು ತಮ್ಮ ಮೇಲ್ ಐಡಿಗೆ ಬರುತ್ತದೆ.

ಸಾರ್ವಜನಿಕರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ಸಹಾಯವಾಣಿಗೆ ಮೊಬೈಲ್ ಸಂಖ್ಯೆ +916363544601, +916363538302 ಗಳಿಗೆ ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.

ಆಸ್ತಿ ತೆರಿಗೆ ಮೇಲೆ ಶೇ. 5 ರಷ್ಟು ವಿನಾಯಿತಿ ಅವಧಿ ವಿಸ್ತರಣೆ

 ಸರ್ಕಾರವು 2021-22 ನೇ ಸಾಲಿನ ಆಸ್ತಿ ತೆರಿಗೆಯ ಮೇಲಿನ ಶೇ. 5 ರಷ್ಟು ರಿಯಾಯಿತಿ ಅವಧಿಯನ್ನು 2021ರ ಜೂನ್ 30 ರವರೆಗೆ ವಿಸ್ತರಿಸಿದೆ. ಆದ್ದರಿಂದ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು 2021-22 ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವ ಮೂಲಕ ಈ ರಿಯಾಯಿತಿಯ ಸದುಪಯೋಗ ಪಡೆಯಲು ಕೋರಲಾಗಿದೆ.