News

ಕೋವಿಡ್ ಲಾಕ್‌ಡೌನ್ ಹಿನ್ನೆಲೆ: ವಿದ್ಯುತ್ ಗ್ರಾಹಕರು ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ಲು ಪಾವತಿಸಲು ಸೂಚನೆ

21 May, 2021 5:29 PM IST By:

ಕೊವೀಡ್ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ವಿದ್ಯುತ್ ಗ್ರಾಹಕರ ಸುರಕ್ಷತೆಯ ಹಿತದೃಷ್ಟಿಯಿಂದ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು (ಜೆಸ್ಕಾಂ) ತನ್ನ ಗ್ರಾಹಕರಿಗೆ ಆನ್‌ಲೈನ್ ಮೂಲಕ ಹಾಗೂ ವಿವಿಧ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ವಿದ್ಯುತ್ ಬಿಲ್ಲ್ನ್ನು ಪಾವತಿಸಲು ಅವಕಾಶ ಕಲ್ಪಿಸಿದೆ. ವಿದ್ಯುತ್ ಗ್ರಾಹಕರು ಇದರ ಸದುಪಯೋಗಪಡೆದುಕೊಂಡು ತಮ್ಮ ವಿದ್ಯುತ್ ಬಿಲ್ಲನ್ನು ಪಾವತಿಸಬೇಕೆಂದು ಕಲಬುರಗಿ ಜೆಸ್ಕಾಂನ  ಮುಖ್ಯ ಆರ್ಥಿಕ ಅಧಿಕಾರಿ ಅಬ್ದುಲ್ ವಾಜೀದ್ ಅವರು ತಿಳಿಸಿದ್ದಾರೆ.

ನಗರ ಪ್ರದೇಶದಲ್ಲಿರುವ ಗ್ರಾಹಕರು ಜೆಸ್ಕಾಂನ https://www.gescomglb.org ವೆಬ್‌ಟೈಟ್‌ದಲ್ಲಿ ಹತ್ತು ಡಿಜಿಟಿನ ಅಕೌಂಟ್ ಐಡಿ ಬಳಸಿ ವಿದ್ಯುತ್ ಬಿಲ್ಲನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದಾಗಿದೆ. ಇದಲ್ಲದೇ ನಗರ ಪ್ರದೇಶದ ಗ್ರಾಹಕರು ಜೆಸ್ಕಾಂ https://gescom.karnataka.gov.in  ವೆಬ್‌ಸೈಟ್‌ದಲ್ಲಿನ  R-APDRP town area ಲಿಂಕ್ ಅನ್ನು ಬಳಸಿ ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ಲನ್ನು ಪಾವತಿಸಬಹುದಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯುತ್ ಗ್ರಾಹಕರು ಜೆಸ್ಕಾಂನ  http://124.153.117.120:8082/online pay.aspx ಲಿಂಕ್ ಅನ್ನು ಬಳಸಿ ಹತ್ತು ಡಿಜಿಟಿನ ಅಕೌಂಟ್ ಐಡಿಯನ್ನು ಮೊದಲು (ಜಿ/ಬಿ) ಎಂದು ನಮೂದಿಸಿ [ಕಲುಬರಗಿ ವಲಯದ ಗ್ರಾಹಕರು ಮೊದಲು ‘ಜಿ’ ನ್ನು ಮತ್ತು ಬಳ್ಳಾರಿ ವಲಯದ ಗ್ರಾಹಕರು ಮೊದಲು ‘ಬಿ’ ಯನ್ನು ನಮೂದಿಸಿ] ನಂತರ ಮುಂದಿನ 9 ಡಿಜಿಟ್‌ನ್ನು ಬಳಸಿ ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ಲನ್ನು ಪಾವತಿಸಬಹುದಾಗಿದೆ.      

ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲನ್ನು ಪೇ ಟಿಎಂ., ಫೋನ್ ಪೇ, ಅಮೇಜಾನ್, ಭೀಮ್ ಅಥವಾ ಭಾರತ ಬಿಲ್ ಪೇ      (Pay TM, Phone Pe, Amazon, BHIM ಅಥವಾ Bharat Bill Pay) ಇದರಲ್ಲಿ ಯಾವುದಾದರೊಂದು ಮೊಬೈಲ್ ಅಪ್ಲಿಕೇಶನ್ ಆ್ಯಪ್/ (ವ್ಯಾಲೆಟ್) ಬಳಸಿ GESCOM ಅನ್ನು ಆಯ್ಕೆ ಮಾಡಿಕೊಂಡು ವಿದ್ಯುತ್ ಬಿಲ್ಲಿನರುವÀ ತಮ್ಮ 10 ಡಿಜಿಟ್‌ನ ಅಕೌಂಟ್ ಐಡಿಯನ್ನು ದಾಖಲಿಸಿ ವಿದ್ಯುತ್ ಬಿಲ್ಲನ್ನು ಪಾವತಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.