News

ಲಂಚಕ್ಕೆ ಬೇಡಿಕೆಯಿಟ್ಟ ಜೆ.ಈ : ಎತ್ತುಗಳು ನೀಡಲು ಮುಂದಾದ ರೈತ

29 March, 2023 7:09 PM IST By: A C Shobha
the farmer is ready to give ox instead of money

ಹೌದು ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚ ಕೇಳಿದ ಗ್ರಾಮ ಪಂಚಾಯತ್ ಅಧಿಕಾರಿಗಳ ಕ್ರಮಕ್ಕೆ ಬೆಸತ್ತ ರೈತನೊಬ್ಬ ಲಂಚದ ಹಣದ ಬದಲಿಗೆ ತನ್ನ 2 ಎತ್ತುಗಳನ್ನೆ ಲಂಚದ ರೂಪದಲ್ಲಿ ನೀಡಲು ಇಲ್ಲಿಯ ತಾಲ್ಲೂಕು ಪಂಚಾಯತ್‌ಗೆ ಆಗಮಿಸಿದ ಪ್ರಸಂಗ ಜರುಗಿದೆ. 

ತಾಲೂಕಿನ ಬಗದೂರಿ ಗ್ರಾಮದ ನಿವಾಸಿ ರೈತ ಪ್ರಶಾಂತ ಬಿರಾದಾರ ತನ್ನ 2 ಎತ್ತುಗಳ ಸಹಿತ ತಾಪಂಗೆ ಆಗಮಿಸಿದ ರೈತನಾಗಿದ್ದಾನೆ. ಉದ್ಯೋಗ ಖಾತ್ರಿಯೊಜನೆಯಡಿ ಕಳೆದ ವರ್ಷ ತಮ್ಮ ಜಮೀನಿನಲ್ಲಿರುವ ಹಳ್ಳಕ್ಕೆ ತಡೆಗೊಡೆ ನಿರ್ಮಾಣ ಮಾಡಲಾಗಿದೆ.

ಈ ಕಾಮಗಾರಿಗೆ 1 ಲಕ್ಷ ರೂ. ಅನುದಾನ ಮಂಜೂರಿಯಾಗಿತ್ತು. ಕಾಮಗಾರಿಗೆ ಸಂಬAಧಿಸಿದAತೆ ರೈತನಿಗೆ 55 ಸಾವಿರ ರೂ. ಕೂಲಿ ಹಣ ಪಾವತಿ ಮಾಡಲಾಗಿದೆ. ಉಳಿದ 45 ಸಾವಿರ ರೂ. ಮಟಿರಿಯಲ್ ಹಣ ಪಾವತಿಯಾಗಿಲ್ಲ. 
 
ಮಟಿರಿಯಲ್ ಹಣ ಪಾವತಿಗೆ ಮನವಿ ಮಾಡಿದ್ದಾಗ ಯೋಜನೆಯಡಿ ಕೆಲಸ ಮಾಡುವ ಜೆಇ ಅವರು 5 ಪ್ರತಿಶತ(5 ಸಾವಿರ ರೂ.) ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಲಂಚದ ಹಣ ನೀಡಲು ತಮ್ಮಬಳಿ ಅಷ್ಟೊಂದು ಹಣ ಇಲ್ಲ ಎಂದು ರೈತ ಹೇಳಿದ ಹಿನ್ನೆಲೆಯಲ್ಲಿ ಬಿಲ್ ಪಾವತಿಗೆ ತಡೆ ಹಿಡಿಯಲಾಗಿದೆ.

ಹೀಗಾಗಿ ಅಧಿಕಾರಿಯ ವರ್ತನೆಯಿಂದ ಬೆಸರಗೊಂಡ ರೈತ ಪ್ರಶಾಂತ ಬಿರಾದಾರ ಅವರು ತಮ್ಮ 2 ಎತ್ತುಗಳು ಸಹಿತ ನಗರದ ತಾಪಂಗೆ ಆಗಮಿಸಿ ಎತ್ತುಗಳನ್ನೆ ಲಂಚದ ರೂಪದಲ್ಲಿ ಪಡೆದು ತನಗೆ ಬರಬೇಕಾದ 45 ಸಾವಿರ ರೂ. ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 

ಇದನ್ನೂ ಓದಿ -ಸರ್ಕಾರಿ ನೌಕರರಿಗೆ ಕೊನೆಗೂ ಸಿಕ್ತು ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ!
2.ಈ ಮೊದಲು ಮಾರ್ಚ್ 31 ರ ವೊಳಗೆ ಪ್ಯಾನ್‌- ಆಧಾರ್‌ ಕಾರ್ಡ್‌ ಲಿಂಕ್ ಮಾಡಬೇಕು ಎನ್ನುವ ಆದೇಶವನ್ನು ಸರ್ಕಾರ ಮುಂದೂಡಿದೆ . ಜೂನ್ ೩೦ ರವರೆಗೆ ಅವಧಿಯನ್ನು ವಿಸ್ತರಿಸಿದ್ದು , ೧೦೦೦ ರೂ ಶುಲ್ಕದೊಂದಿಗೆ ಜೂನ್ ೩೦ರ ವೊಳಗೆ ಆಧಾರ್ ಅನ್ನು ಪಾನ್ ಗೆ ಲಿಂಕ್ ಮಾಡಬಹುದಾಗಿದೆ . 
 
ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್‌ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ, ಪ್ಯಾನ್‌ ಜತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು.
 
ಪ್ಯಾನ್‌–ಆಧಾರ್ ಜೋಡಣೆಗೆ ಆಗ ಸರ್ಕಾರವು ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜೋಡಣೆ ಕಾರ್ಯಗತವಾಗಲಿಲ್ಲ. ಹೀಗಾಗಿ ಪ್ಯಾನ್‌–ಆಧಾರ್ ಜೋಡಣೆಗೆ ನೀಡಿದ್ದ ಗಡುವನ್ನು ಸರ್ಕಾರವು ಹಲವು ಬಾರಿ ವಿಸ್ತರಿಸಿತ್ತು. ಕೊನೆಯ ಹಂತದ್ದು ಎಂದು ಹೇಳಿ 2022ರ ಮಾರ್ಚ್‌ನಲ್ಲಿ ವಿಸ್ತರಿಸಿದ ಗಡುವು 2023ರ ಮಾರ್ಚ್‌ 31ಕ್ಕೆ ಕೊನೆಯಾಗಲಿದೆ ಎನ್ನಲಾಗಿತ್ತು.

3.ಪಿಎಂ-ಮಿತ್ರ ಮೆಗಾ ಜವಳಿ ಪಾರ್ಕ್ ಗೆ ಕಲಬುರಗಿಯಲ್ಲಿ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವೆ ದರ್ಶನ್ ಜರ್ದೋಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಈ ಮೆಗಾ ಪಾರ್ಕ್ ಒಟ್ಟು 1, 000 ಎಕರೆ ಪ್ರದೇಶದಲ್ಲಿ ರೂ.1, 800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಒಟ್ಟು ರೂ.10,000 ಕೋಟಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರ ಜೊತೆಗೆ 1 ಲಕ್ಷ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ ಎಂದರು ಅವರು ಹೇಳಿದರು . 
 
ಜವಳಿ ಪಾರ್ಕ್ ಸ್ಥಾಪನೆಗಾಗಿ ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.  ಈ ಪಾರ್ಕ್ ಕರ್ನಾಟಕದ ಶ್ರೀಮಂತ ಜವಳಿ ಪರಂಪರೆಯನ್ನು ಸಂಭ್ರಮಾಚರಿಸುತ್ತದೆ ಮತ್ತು ರಾಜ್ಯದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.  ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಕಲಬುರಗಿಗೆ ನಿಜಕ್ಕೂ ವಿಶೇಷ ದಿನ. ಈ ಜವಳಿ ಪಾರ್ಕ್ ಮೂಲಕ ಜಗತ್ತು ಭಾರತದ ಜವಳಿ ವೈವಿಧ್ಯತೆ ಮತ್ತು ನಮ್ಮ ಜನರ ಸೃಜನಶೀಲತೆಯ ದರ್ಶನ ಪಡೆಯುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.