News

PAN-Aadhaar linkage ಆಧಾರ್‌- ಪ್ಯಾನ್‌ ಕಾರ್ಡ್‌ ಜೋಡಣೆಗೆ ಇಂದೇ ಕೊನೆ; ನಾಳೆಯಿಂದ ಬರೋಬ್ಬರಿ 10,000 ಸಾವಿರ ದಂಡ!

30 June, 2023 11:33 AM IST By: Hitesh
PAN-Aadhaar linkage deadline ends today: 10,000 fine from tomorrow!

ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಜೋಡಣೆಗೆ ಇಂದೇ ಕೊನೆಯ ದಿನವಾಗಿದ್ದು, ಜೋಡಣೆ ಮಾಡದೆ ಇದ್ದರೆ ಬರೋಬ್ಬರಿ 10,000 ಸಾವಿರ ದಂಡ ಪಾವತಿ ಮಾಡಬೇಕಾಗುತ್ತದೆ.

ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆಗೆ ಕೇಂದ್ರ ಸರ್ಕಾರವು ಹಲವು ಬಾರಿ ಗಡುವನ್ನು ನೀಡಿತ್ತು.

ಇದೀಗ ಜೂನ್‌ 30 ಕೊನೆಯ ದಿನವಾಗಿದ್ದು, ಇಂದು ಸಹ ನೀವು ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡದೆ ಇದ್ದರೆ,

ಜುಲೈ 1ರಿಂದ ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆಗೆ ಬರೋಬ್ಬರಿ 10,000 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

ಅಲ್ಲದೇ ನಿಮ್ಮ ಪ್ಯಾನ್‌ ಕಾರ್ಡ್‌ ಸಹ ನಿಷ್ಕ್ರೀಯವಾಗಲಿದೆ.

ಆಧಾರ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಇಲಾಖೆ ಹಾಗೂ

ಆದಾಯ ತೆರಿಗೆ ಇಲಾಖೆಯು ಈ ಹಿಂದೆಯೇ ಹಲವು ಬಾರಿ ಮುನ್ನೆಚ್ಚರಿಕೆಗಳನ್ನು ನೀಡಿದೆ.

ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆಗೆ ಸಂಬಂಧಿಸಿದಂತೆ ಮಾರ್ಚ್‌ 31 ಅಂತಿಮ ದಿನವಾಗಿತ್ತು.

ಏಪ್ರಿಲ್‌ 1ರಿಂದಲೇ 10,000 ಸಾವಿರ ರೂಪಾಯಿ ದಂಡ ಪಾವತಿ ಮಾಡಿ ಆಧಾರ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡಬೇಕು ಎಂದು ಅಂತಿಮವಾಗಿತ್ತು.

Aadhaar-PAN linking ಆಧಾರ್-‌ ಪ್ಯಾನ್‌ ಜೋಡಣೆಗೆ ಕೊನೆಯ ಗಡುವು; ಆದಾಯ ತೆರಿಗೆ ಇಲಾಖೆ ಕೊನೆಯ ಎಚ್ಚರಿಕೆ ಏನು ?

ಈ ಸಂದರ್ಭದಲ್ಲಿ ಭಾರೀ ಮೊತ್ತದ ದಂಡ ವಿಧಿಸುವುದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತವಾಗಿತ್ತು.  

ಅಲ್ಲದೇ ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್‌ ರಂಜನ್‌ ಜೋಧರಿ ಅವರು ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆಯ

ಗಡುವನ್ನು ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜೂನ್‌ 30ರ ವರಗೆ ಅವಧಿ ವಿಸ್ತರಿಸಲಾಗಿತ್ತು.

ಇದೀಗ ಈ ಅವಧಿಯೂ ಮುಕ್ತಾಯವಾಗಿದ್ದು, ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆಯನ್ನು ನೀಡುವ ಇಂದೇ ಮಾಡದಿದ್ದರೆ,

ನಾಳೆಯಿಂದ ಅಂದರೆ, ಜುಲೈ 1ರಿಂದ 10,000 ಸಾವಿರ ರೂಪಾಯಿ ದಂಡ ಪಾವತಿ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು.   

ಒಂದೊಮ್ಮೆ ನೀವು ಸರ್ಕಾರ ನೀಡಿರುವ ಗಡುವಿನ ಒಳಗಾಗಿ ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡದೇ ಇದ್ದರೆ,

ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರೀಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಅಲ್ಲದೇ ಹೆಚ್ಚಿನ ದರದಲ್ಲಿ ಟಿಡಿಎಸ್‌ ಕಡಿತ, ಬಾಕಿ ಇರುವ ಮರುಪಾವತಿಗಳು ಹಾಗೂ ಅವುಗಳ ಮೇಲಿನ ಬಡ್ಡಿದರದಿಂದ ವಂಚಿತರಾಗುವ ಸಾಧ್ಯತೆ ಇದೆ.

ಅಲ್ಲದೇ ಟಿಸಿಎಸ್‌ ಅನ್ನು ಹೆಚ್ಚಿನ ಮೊತ್ತದಲ್ಲಿ ಸಂಗ್ರಹಿಸುವುದಾಗಿ ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಹೆಚ್ಚಿನ ಮಾಹಿತಿಗೆ ನೀವು www.incometax.gov.inಗೆ ಭೇಟಿ ನೀಡಬಹುದು. 

ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆಯ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸಿದೆ.

ಇದನ್ನು ಪಾಲನೆ ಮಾಡದೆ ಇದ್ದರೆ, ಭಾರೀ ಮೊತ್ತದ ದಂಡ ವಿಧಿಸುವುದಾಗಿಯೂ ಎಚ್ಚರಿಕೆಯನ್ನು ನೀಡಲಾಗಿದೆ.

ಆದಾಯ ತೆರಿಗೆ ಇಲಾಖೆ ನೀಡಿದ ಪ್ರಮುಖ ಎಚ್ಚರಿಕೆಗಳು

* ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್‌ ಕಾರ್ಡ್‌ ಪಡೆಯಬಾರದು.

* ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಕಾರ್ಡ್‌ ಇದ್ದರೆ 10,000 ದಂಡ ವಿಧಿಸಲಾಗುವುದು.

*  ಸಿಂಗಲ್‌ ಪ್ಯಾನ್‌ ಕಾರ್ಡ್‌ನ ಸ್ಥಿತಿಯನ್ನು ಪರಿಶೀಲನೆ ಮಾಡುವುದಕ್ಕೆ

ನೀವು www.incometax.gov.in ಗೆ ಭೇಟಿ ನೀಡಬಹುದಾಗಿದೆ.

* ಬಲ್ಕ್‌ ಪ್ಯಾನ್‌ಗಳನ್ನು ಪರಿಶೀಲಿಸಲು https://report.insight.gov.in ಗೆ

ಭೇಟಿ ನೀಡಬಹುದು ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.  

Aadhaar-PAN linking ಆಧಾರ್-‌ ಪ್ಯಾನ್‌ ಜೋಡಣೆಗೆ ಕೊನೆಯ ಗಡುವು; ಆದಾಯ ತೆರಿಗೆ ಇಲಾಖೆ ಕೊನೆಯ ಎಚ್ಚರಿಕೆ ಏನು ?