News

ಪ್ಯಾನ್‌- ಆಧಾರ್‌ ಕಾರ್ಡ್‌ ಅಷ್ಟೇ ಅಲ್ಲ ರೇಷನ್‌ ಕಾರ್ಡ್‌ನೊಂದಿಗೂ ಜೋಡಣೆ ಮಾಡಬೇಕು!

28 March, 2023 3:19 PM IST By: Hitesh
Pan-Aadhaar Card should be linked with Ration Card as well!

ರೈತರಿಗೆ ಕೃಷಿ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

1. ನರೇಗಾ: ಕರ್ನಾಟಕದ ಕಾರ್ಮಿಕರಿಗೆ ಕೇವಲ 7 ರೂ. ದಿನಗೂಲಿ ಹೆಚ್ಚಳ!
2. ಪ್ಯಾನ್‌- ಆಧಾರ್‌ ಜೋಡಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ
3. ರೇಷನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡುವ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
4. ಪಿ.ಎಂ ಕಿಸಾನ್‌: 42 ಕೋಟಿ ಮೊತ್ತದ ಪ್ರಯೋಜನ ಪಡೆದ ಅರ್ನಹರು!
5. 93.40 ಕೋಟಿ ವೆಚ್ಚದಲ್ಲಿ ನಂದಿ ಬೆಟ್ಟಕ್ಕೆ “ರೋಪ್‌ ವೇ” ನಿರ್ಮಾಣ
6. ರಾಜ್ಯದಲ್ಲಿ ಮುಂದುವರಿದ ಒಣಹವೆ
7. ನಾವೀನ್ಯತೆ ಮತ್ತು ಕೃಷಿ-ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ

1. ನರೇಗಾ ಅಡಿಯಲ್ಲಿ ಕಾರ್ಮಿಕರಿಗೆ ದಿನಗೂಲಿ ಮೊತ್ತವನ್ನು ಕೇಂದ್ರ ಸರ್ಕಾರವು ಹೆಚ್ಚಳ ಮಾಡಿದ್ದು,

ನರೇಗಾ ಅಡಿ ಕರ್ನಾಟಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಕೇವಲ 7 ರೂಪಾಯಿ ಸಿಕ್ಕಿದೆ.

ಪರಿಷ್ಕೃತ ದರವನ್ನು ಸೇರಿಸಿದರೆ ನರೇಗಾ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 316 ರೂಪಾಯಿ ಸಿಗಲಿದೆ.

ರಾಜ್ಯದಲ್ಲಿ 2022–23ರಲ್ಲಿ ನರೇಗಾ ದಿನಗೂಲಿ 309 ರೂಪಾಯಿ ಇತ್ತು.

ಇದೀಗ 2023–24ನೇ ಸಾಲಿನಲ್ಲಿ 7 ರೂಪಾಯಿ ಹೆಚ್ಚಿಸುವ ಮೂಲಕ 316 ರೂಪಾಯಿಗೆ ತಲುಪಿದೆ.

ಈ ಮೂಲಕ ಕೇವಲ 2.27ರಷ್ಟು ಮಾತ್ರ ಹೆಚ್ಚಳವಾದಂತಾಗಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮಾರ್ಚ್‌ 24ರಂದು ನರೇಗಾ ಯೋಜನೆಯಡಿಯಲ್ಲಿನ ಕೂಲಿಯ

ದರವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.   
--------------   

2. ಕೇಂದ್ರ ಸರ್ಕಾರವು ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆಗೆ ದಂಡ ಸಹಿತ ಅಂತಿಮ ಗಡುವು ನೀಡಿದೆ.

ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ಅನ್ನು ಮಾರ್ಚ್‌ 31ರ ಒಳಗಾಗಿ ಲಿಂಕ್‌ ಮಾಡದಿದ್ದರೆ, ಬರೋಬ್ಬರಿ 10,000 ಸಾವಿರ ರೂ. ದಂಡ ಪಾವತಿ ಮಾಡಬೇಕಾಗುತ್ತದೆ.

ಅಲ್ಲದೇ ಲಿಂಕ್‌ ಮಾಡದೆ ಇದ್ದರೆ ಏಪ್ರಿಲ್‌ 1ರಿಂದ ಪ್ಯಾನ್‌ ಕಾರ್ಡ್‌ನ ನಂಬರ್‌ ಸಹ ನಿಷ್ಕ್ರೀಯವಾಗಲಿದೆ. 

ಏಪ್ರಿಲ್‌ ಒಂದರ ನಂತರ ಹೊಸ ಪ್ಯಾನ್‌ ಕಾರ್ಡ್‌ ಮಾಡಬೇಕಾದರೂ 10,000 ಸಾವಿರ ರೂಪಾಯಿ ಪಾವತಿ ಮಾಡಿಯೇ ಹೊಸ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಇದೀಗ 1000 ರೂಪಾಯಿ ದಂಡದೊಂದಿಗೆ ಇದೇ ಮಾರ್ಚ್ 31ರ ವರೆಗೆ ಗಡುವನ್ನು ನೀಡಲಾಗಿದೆ.     
-------------- 

Pan-Aadhaar Card should be linked with Ration Card as well!

3. ರೇಷನ್‌ ಕಾರ್ಡ್‌ನೊಂದಿಗೆ ಆಧಾರ್‌ ಲಿಂಕ್‌ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.

ಸಾರ್ವಜನಿಕರಿಗೆ ಸಬ್ಸಿಡಿಯಲ್ಲಿ ಆಹಾರ ಧಾನ್ಯ ಹಾಗೂ ಇಂಧನ ಪಡೆಯಲು ಪಡಿತರ ಚೀಟಿ ವಿತರಿಸಲಾಗಿದೆ.

ಪಡಿತರ ಚೀಟಿಗೂ ಆಧಾರ್‌ ಜೋಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಅಲ್ಲದೇ ರೇಷನ್‌ ಕಾರ್ಡ್‌ನೊಂದಿಗೆ ಆಧಾರ್‌ ಜೋಡಣೆ ಮಾಡುವುದಕ್ಕೆ ಮಾರ್ಚ್‌ 31ರ ವರೆಗೆ ಗಡುವು ನೀಡಲಾಗಿತ್ತು.

ಇದೀಗ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹೊಸ ಅಧಿಸೂಚನೆ ಹೊರಡಿಸಿದ್ದು,

ರೇಷನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಗಡುವನ್ನು  2023ರ ಮಾರ್ಚ್ 31 ರಿಂದ ಜೂನ್ 30ರವರೆಗೆ ವಿಸ್ತರಿಸಲಾಗಿದೆ.
--------------
4. ಸಿಎಜಿ ವರದಿಯ ಪ್ರಕಾರ ಪಿ.ಎಂ ಕಿಸಾನ್‌ ಯೋಜನೆಯ ಸಹಾಯ ಧನದಲ್ಲಿ ಬರೋಬ್ಬರಿ 42 ಕೋಟಿ ಮೌಲ್ಯದ

ಪ್ರಯೋಜನವನ್ನು ಅರ್ಹರಲ್ಲದವರು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಚ್ 22ರಂದು ಹರಿಯಾಣ ವಿಧಾನಸಭೆಯಲ್ಲಿ ಮಂಡಿಸಲಾದ ಸಿಎಜಿ ವರದಿಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಪಾವತಿದಾರರು, ರಾಜ್ಯ ಸರ್ಕಾರದ ಪಿಂಚಣಿದಾರರು, ಮೃತ ರೈತರು ಮತ್ತು ಸ್ವಂತ ಜಮೀನು ಹೊಂದಿಲ್ಲದವರ

ಹೆಸರಿನಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ 42 ಕೋಟಿ ರೂಪಾಯಿ ಸಹಾಯಧನ ಸಂದಾಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
--------------
5. ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ಯಾಸೆಂಜರ್ ರೋಪ್‌ವೇ ನಿರ್ಮಾಣ ಮಾಡುವ ಕಾಮಗಾರಿಗೆ ಸೋಮವಾರ ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿದರು.

ರೋಪ್ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

2.93 ಕಿ.ಮೀ ದೂರದ ರೋಪ್‌ವೇ ಅಭಿವೃದ್ಧಿಪಡಿಸುವ ಗುರಿ ಇದೆ.
--------------
6. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ ಆಗಿದೆ.

ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ.

ಇನ್ನು ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 39.1 ಡಿಗ್ರಿ ಸೆಲ್ಸಿಯಸ್‌ ಕಲಬುರಗಿಯಲ್ಲಿ ಹಾಗೂ ಅತೀ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್‌ ಬಾಗಲಕೋಟೆಯಲ್ಲಿ ದಾಖಲಾಗಿದೆ.

ಮುಂದಿನ 48 ಗಂಟೆಗಳ ಅವಧಿಯಲ್ಲಿ ಗರಿಷ್ಠ ಉಷ್ಣಾಂಶವು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. 
--------------
7. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅಡಿಯಲ್ಲಿ ನಾವೀನ್ಯತೆ ಮತ್ತು ಕೃಷಿ-ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ.

ರೈತರಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಮತ್ತು ಕೃಷಿ-ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗಿದೆ.

ಕಾರ್ಯಕ್ರಮದ ಅಡಿಯಲ್ಲಿ, ಕೃಷಿ ಮತ್ತು ಸಂಬಂಧಿತ ವಲಯದ ಉದ್ಯಮಿಗಳಿಗೆ ತಮ್ಮ ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲಾಗುತ್ತದೆ.   
--------------
8. ಎತ್ತುಗಳ ಗೊರಸು ಶುಚಿಗೊಳಿಸಿ ನಾಲು ಬಡಿಸುವುದು ತುಸು ತ್ರಾಸದಾಯಕ ಕೆಲಸವೇ ಸರಿ.

ಹಳ್ಳಿಯೊಂದರಲ್ಲಿ ಎತ್ತಿನ ಗೊರಸು ಶುಚಿಗೊಳಿಸಿ, ನಾಲು ಬಡಿಯಲು ರೈತರು ಶ್ರಮಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜಾನುವಾರುಗಳ ಕಾಲಿನ ಸುರಕ್ಷತೆಯ ದೃಷ್ಟಿಯಿಂದ ಅವುಗಳ ಗೊರಸು ಶುಚಿಗೊಳಿಸಿ, ನಾಲು ಬಡಿಯಲಾಗುತ್ತದೆ.   
--------------
ಇದು ಇಂದಿನ ಪ್ರಮುಖ ಕೃಷಿ ಸುದ್ದಿಗಳು ನಿರಂತರ ಸುದ್ದಿಗಾಗಿ ಕೃಷಿ ಜಾಗರಣ ನೋಡಿ, ಧನ್ಯವಾದ.