News

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಪ್ರತಿ ರೈತರಿಂದ 16 ಕ್ವಿಂಟಾಲ್ ಭತ್ತ ಖರೀದಿ

23 October, 2020 2:53 PM IST By:

2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಉಪ ಮುಖ್ಯಮಂತ್ರ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪ ಸಮಿತಿ ತೀರ್ಮಾನಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಾಲ್ ನಂತೆ ಭತ್ತ ಖರೀದಿಸಲಾಗುವುದು. ಹೆಚ್ಚುವರಿಯಾಗಿ ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಖರೀದಿ ಕಾರ್ಯಕ್ಕೆ ಆಹಾರಧಾನ್ಯಗಳ ಸಂಗ್ರಹಣಾ ಏಜೆನ್ಸಿಗಳನ್ನಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗಳಿಗೆ ಜಿಲ್ಲೆಗಳನ್ನು ನಿಯೋಜಿಸಲಾಗುವುದು.

ನವೆಂಬರ್ ತಿಂಗಳಿನಿಂದ ಭತ್ತ ಖರೀದಿಗೆ ರೈತರ ನೋಂದಣಿ ಕಾರ್ಯ ಪ್ರಾರಂಭಿಸಿದ ನಂತರ ಖರೀದಿಸಲು ನಿರ್ಧರಿಸಲಾಗಿದೆ. ಶೇಂಗಾ, ಸೋಯಾಬಿನ್  ಖರೀದಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿರುವುದರಿಂದ ಶೀಘ್ರವೇ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯಪುರ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮೀಣ, ಹಾಸನ, ಕೊಡಗು, ದಾವಣಗೆರೆ, ಉಡುಪಿ, ತುಮಕುರು, ಕಲಬುರಗಿ, ಬೀದರ್, ಚಿತ್ರದುರ್ಗ, ಗದಗ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವನ್ನು ಖರೀದಿ ಏಜೆನ್ಸಿಯಾಗಿ ನಿಯುಕ್ತಿಗೊಳಿಸಲು ಸಭೆ ನಿರ್ಧರಿಸಿದೆ.

2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದು ದರ ಇಂತಿದೆ.

ಭತ್ತ ಸಾಮಾನ್ಯ-1868ಸ ಭತ್ತ ಗ್ರೇಡ್ ಎ 1888, ತೊಗರಿ 6000, ಸೋಯಬಿನ್ ಹಳದಿ 3880, ಶೇಂಗಾ  5275, ಜೋಳ ಹೈಬ್ರಿಡ್ 2620, ಜೋಳ ಮಾಲ್ದಂಡಿ 2640, ರಾಗಿ 3295, ಮೆಕ್ಕೆಜೋಳ 1850,  ಸಜ್ಜೆ2150 ಪ್ರತಿ ಕ್ವಿಂಟಾಲಿಗೆ ಘೋಷಿಸಿದೆ.