ಇಡೀ ಜಗತ್ತಿಗೆ ವ್ಯಾಪಿಸಿದ ಮಹಾಮಾರಿ ಕೊರೋನಾ ಜನತೆಯನ್ನು ತತ್ತರಿಸುವಂತೆ ಮಾಡಿದೆ. ಕಳೆದ ನಾಲ್ಕು ತಿಂಗಳಿಂದ ಇಡೀ ಜಗತ್ತು ಕೊರೋನಾ ಸೋಂಕಿನಿಂದ ಹೊರಬರಲು, ಲಾಕ್ಡೌನ್ ನಂತಹ ತಂತ್ರ, ಲಸಿಕೆ ಕಂಡುಹಿಡಿಯುವಲ್ಲಿ ಹೆಣಗಾಡುತ್ತಿದೆ. ಇತ್ತ ಕೊರೋನಾ ಆತಂಕದ ನಡುವೆ ಮಳೆಯೂ ಪ್ರವಾಹ (amid heavy flood) ಸಹ ಅವಾಂತರ ಸೃಷ್ಟಿ ಮಾಡಿ ಜನತೆಯನ್ನು ಸಂಕಷ್ಟದಲ್ಲಿ ತಳ್ಳಿದೆ.
ಚೈನಾ, ಬಾಂಗ್ಲಾದೇಶ (Bangladesh) ಇಂಡೋನೇಷಿಯಾ (Indonesia), ಭಾರತ ಸೇರಿದಂತೆ ಹಲವಾರು ದೇಶಗಳು ಮಳೆ ಪ್ರವಾಹದಿಂದ ಕೋಟ್ಯಂತರ ಜನರು ತತ್ತರಿಸಿಹೋಗಿದ್ದಾರೆ. ಚೈನಾ (China), ದೇಶದಲ್ಲಂತೂ ನಗರ ಪ್ರದೇಶಗಳ ಮುಖ್ಯರಸ್ತಗಳು ನದಿಗಳಾಗಿ ಮಾರ್ಪಟ್ಟಿವೆ. ಮನೆಗಳು, ಕಟ್ಟಡಗಳು, ಸೇತುವೆಗಳು ಕುಸಿದು ಅಪಾರ ಹಾನಿಯನ್ನುಂಟು ಮಾಡಿದೆ.
ಬಾಂಗ್ಲಾ ಮತ್ತು ಇಂಡೋನೇಷಿಯಾದಲ್ಲಿ ಮಳೆ ಪ್ರವಾಹವು ಜನರ ನಿದ್ದೆಗೆಡಿಸುವಂತೆ ಮಾಡಿದೆ. ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಇಂಡೋನೇಷಿಯಾದ ದಕ್ಷಿಣ ಸುಲಾವೇಸಿ ಪ್ರಾಂತ್ಯದಲ್ಲಿ ದಿಡೀರ ಪ್ರವಾಹ ಉಂಟಾಗಿದ್ದರಿಂದ 16 ಜನ ಸಾವಿಗೀಡಾಗಿದ್ದಾರೆ. ಚೀನಾದ ದಕ್ಷಿಣ ಭಾಗದಲ್ಲಿ ಪ್ರವಾಹದಿಂದಾಗಿ (Millions in southern China face floods caused by heavy rains) 3.40 ಕೋಟಿ ಜನ ಅತಂತ್ರರಾಗಿದ್ದಾರೆ.
ಭಾರತ ದೇಶದ ಅಸ್ಸಾಂ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯು ಕಳೆದ ಹದಿನೈದು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಸಮುದ್ರದಲ್ಲಿ ಸುಮಾರು 3.28 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುತ್ತಿವೆ. ಅಸ್ಸಾಂನಲ್ಲಿ ಮಂಗಳವಾರ ಒಂದೇ ದಿನ ಮಳೆ ಹಾಗೂ ಪ್ರವಾಹದಿಂದಾಗಿ 9 ಜನ ಮೃತಪಟ್ಟಿದ್ದಾರೆ.28 ಜಿಲ್ಲೆಗಳ 33 ಲಕ್ಷ ಜನ ನಿರ್ವಸಿತರಾಗಿದ್ದಾರೆ.