ರೈತರ ಸಂಕಷ್ಟಕ್ಮೆ ಸ್ಪಂದಿಸುವ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಿಂದೆ ವರ್ಷಗಳಾದರೂ ರೈತರಿಗೆ ಬೆಳೆ ನಾಶಕ್ಕೆ ಪರಿಹಾರ ಬರುತ್ತಿರಲಿಲ್ಲ. ನಮ್ಮ ಕಾಲದಲ್ಲಿ ಕೇವಲ ಒಂದು ತಿಂಗಳ ಒಳಗೆ ಪರಿಹಾರ ನೇರವಾಗಿ ಡಿಬಿಟಿ ಮೂಲಕ ರೈತರ ಅಕೌಂಟ್ ಗೆ ಸೇರುತ್ತಿದೆ.
ಇದು ಸಾಧ್ಯವಾಗಿದ್ದು ಡಬಲ್ ಎಂಜಿನ್ ಸರ್ಕಾರದಿಂದ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.
ಧಾರವಾಡ ಗ್ರಾಮಾಂತರ ಜನತೆ ರಾಜಕೀಯವಾಗಿ ಬಹಳ ಬುದ್ಧಿವಂತರಿದ್ದಾರೆ. ಕರಡಿಗುಡ್ಡದ ಗ್ರಾಮಸ್ಥರು ಏನು ತೀರ್ಮಾನ ಮಾಡುತ್ತಾರೆ ಅದು ಇಡೀ ಕ್ಷೇತ್ರದಲ್ಲಿ ಅದು ನಿಲ್ಲುತ್ತದೆ.
ಅಮೃತ ದೇಸಾಯಿ ಅವರು ಎರಡು ಬಾರಿ ಚುನಾವಣೆ ನಿಂತು ಸೋತಿದ್ದಾರೆ. ಇಷ್ಟು ವರ್ಷದಲ್ಲಿ ಜನ ಪಟ್ಟಿರುವ ಕಷ್ಟವನ್ನು ಈ ಬಾರಿ ತಾನು ತೀರಿಸಬೇಕು ಎಂದು ಅಮೃತ ದೇಸಾಯಿ ಅವರು ಹಗಲು ರಾತ್ರಿ ಕಷ್ಟಪಟ್ಟಿದ್ದಾರೆ.
ದೊಡ್ಡ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಕರಡಿಗುಡ್ಡದ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರೈತರ ಸಂಕಷ್ಟಕ್ಕೆ ಸಕಾಲದಲ್ಲಿ ನಾವು ಧಾವಿಸುತ್ತೇವೆ
ಪ್ರವಾಹದಲ್ಲಿ ಬೆಳೆ ನಾಶ ಮತ್ತು ಮನೆ ಹಾನಿಗೊಳಗಾಗಿತ್ತು. ಇದಕ್ಕೆ ಪರಿಹಾರವನ್ನು ಎರಡು ಲಕ್ಷದಿಂದ ಐದು ಲಕ್ಷಕ್ಕೆ ಹೆಚ್ಚಳ ಮಾಡಿದ್ದೇವೆ.
ನಾನು ಮುಖ್ಯಮಂತ್ರಿ ಆದ ಮೇಲೆ ಮತ್ತೆ ಬಂದ ಪ್ರವಾಹದಲ್ಲಿ ಆದ ಬೆಳೆ ಹಾನಿಗೆ ನಾವು ಕೇಂದ್ರ ಸರ್ಕಾರದ ಪರಿಹಾರಕ್ಕೆ ಸಮನಾದ ಮೊತ್ತ ಸೇರಿಸಿ ಡಬಲ್ ಪರಿಹಾರ ನೀಡಿದ್ದೇವೆ.
ರೈತರು ಸಂಕಷ್ಟದಲ್ಲಿದ್ದಾಗ ಅವರ ಪರವಾಗಿ ಧಾವಿಸುವವರು ನಾವು. ಅಕ್ಕಿ, ರಾಗಿ, ಜೋಳ, ತೊಗರಿ ಬೇಳೆ, ಭತ್ತದ ಬೆಲೆ ಕುಸಿದಾಗ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ್ದೇವೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 54 ಲಕ್ಷ ರೈತರಿಗೆ 16000 ಕೋಟಿ ರೂ. ನೇರ ಡಿಬಿಟಿ ಮಾಡಿದ್ದೇವೆ.
ಪ್ರವಾಹ ಸಂದರ್ಭದಲ್ಲಿ ರೂ 2800 ಕೋಟಿ ಗಳನ್ನು 47 ಲಕ್ಷ ರೈತರಿಗೆ ಡಿಬಿಟಿ ಮೂಲಕ ಪರಿಹಾರ ನೀಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.