News

ಆತ್ಮಹತ್ಯೆಗೆ ಶರಣಾಗುವವರ ಪೈಕಿ ಶೇ.95 ರೈತರು ರಾಸಾಯನಿಕ ಕೃಷಿ ಪದ್ಧತಿ ಅನುಸರಿಸುವವರೇ!

23 June, 2021 4:50 PM IST By:

ಬಿತ್ತಿದ ಬೆಳೇ ಹುಲುಸಾಗಿ ಬೆಳೆದು, ಭರಪೂರ ಇಳುವರಿ ನೀಡಿದರೆ ರೈತರಷ್ಟು ಸುಖ ಪುರುಷ ಮತ್ತೊಬ್ಬರಿಲ್ಲ. ಆದರೆ ಬಹಳಷ್ಟು ಸಂದರ್ಭದಲ್ಲಿ ಹೀಗಾಗುವುದಿಲ್ಲ. ಕೆಲವೊಮ್ಮೆ ಬೆಳೆ ಹುಲುಸಾಗಿ ಬೆಳೆದರೆ ಇಳುವರಿ ನಿರೀಕ್ಷಿಸಿದಷ್ಟು ಉತ್ತಮವಾಗಿ ಬಂದಿರುವುದಿಲ್ಲ. ಮತ್ತೆ ಕೆಲವೊಮ್ಮೆ ಗಿಡ-ಮರ-ಬಳ್ಳಿಗಳಲ್ಲಿ ಅತಿ ಹೆಚ್ಚು ಹೂ ಬಿಟ್ಟು, ಎಳೆಯ ಹಣ್ಣು, ತರಕಾರಿಗಳು ಅಧಿಕವಾಗಿ ಬಂದರೂ ಅವು ದೊಡ್ಡವಾಗುವಷ್ಟರಲ್ಲಿ ಯಾವುದೋ ರೋಗ ಇಲ್ಲವೇ ಹುಳುಗಳ ದಾಳಿಯಿಂದಾಗಿ ಇಳುವರಿ ಕೈ ಕೊಡುತ್ತದೆ. ಹಾಕಿದ ಬಂಡವಾಳ ಕೂಡ ತಿರುಗಿ ಬಾರದೆ ರೈತ ತಲೆ ಮೇಲೆ ಕೈ ಹೊತ್ತು ಕೂರುತ್ತಾನೆ. ದೊಡ್ಡ ಹಿಡುವಳಿ ಇದ್ದವರೇನೋ ಸುಧಾರಿಸಿಕೊಳ್ಳುತ್ತಾರೆ. ಆದರೆ ಒಂದೋ ಎರಡೋ ಎಕರೆ ಹೊಲ ಹೊಂದಿರುವ, ವರ್ಷಕ್ಕೆ ಒಂದೇ ಬೆಳೆ, ಅದರಲ್ಲೂ ಪ್ರತಿ ವರ್ಷ ಒಂದೇ ವಿಧವಾದ ಬೆಳೆ ಬೆಳೆದು ಜೀವನ ನಡೆಸುವ ರೈತನಿಗೆ ಕೇವಲ ಒಂದು ಬಾರಿ ಬೆಳೆ ಕೈಕೊಟ್ಟು ಬಂಡವಾಳ ಖೋತಾ ಆದರೂ ಆತ ಆರ್ಥಿಕವಾಗಿ ಕುಸಿದು ಬೀಳುತ್ತಾನೆ. ಆತ ಮತ್ತೆ ಮೇಲೆದ್ದು ಸ್ಥಿರವಾಗಿ ನಿಲ್ಲಬೇಕೆಂದರೆ ಚಮತ್ಕಾರವೇ ನಡೆಯಬೇಕು.

ಅದರಲ್ಲೂ ಭೂಮಿತಾಯಿ ಕೊಟ್ಟೇ ಕೊಡುತ್ತಾಳೆ ಎಂದು ನಂಬಿ, ಬೇರೆಯವರ ಬಳಿ ಸಾಲ ಮಾಡಿ ತಂದ ಹಣವನ್ನು ಕೃಷಿ ಮೇಲೆ ಹುಡಿಕೆ ಮಾಡುವ ರೈತರೇನಾದರೂ ಈ ರೀತಿ ನಷ್ಟ ಅನುಭವಿಸಿದರೆ ಸಾಲದ ಹೊರೆ ಹೊರಲಾರದೆ, ಇತ್ತ ಸಂಸಾರವನ್ನೂ ನಿಭಾಯಿಸಲಾಗದೆ ಆತ್ಮಹತ್ಯೆಯ ದಾರಿ ತುಳಿಯುತ್ತಾರೆ. ಆದರೆ, ಇದು ಭೂಮಿತಾಯಿ ರೈತನಿಗೆ ಮಾಡುವ ಅನ್ಯಾಯವಲ್ಲ. ಬದಲಿಗೆ ರೈತ ತನಗೆ ತಾನೇ ಮಾಡಿಕೊಳ್ಳುವ ಮೋಸ. ಒಂದರ್ಥದಲ್ಲಿ ತನ್ನ ತಲೆ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ಕೆಲಸ ಎಂದರೂ ತಪ್ಪಾಗಲಾರದು. ಅಲ್ಲದೆ, ಇಂತಹ ದುರಂತಗಳು ಸಂಭವಿಸುವುದು ರಾಸಾಯನಿಕ ಕೃಷಿಯಲ್ಲಿ ತೊಡಗಿರುವ ರೈತರ ಜೀವನದಲ್ಲಿ ಮಾತ್ರ ಎಂದು ಕೃಷಿ ಸಂಶೋಧನಾ ಸಂಸ್ಥೆಯೊAದು ಹೇಳಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ...

ಸತ್ವ ಕಳೆದುಕೊಳ್ಳುವ ಮಣ್ಣು

ಮೊದಲೆಲ್ಲಾ ರೈತರು ವರ್ಷಕ್ಕೊಮ್ಮೆ ಇಲ್ಲವೇ ಎರಡು ವರ್ಷಕ್ಕೊಮ್ಮೆಯಾದರೂ ತಮ್ಮ ಹೊಲಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದರು. ಆದರೆ, ಇತ್ತೀಚೆಗೆ ಕೃಷಿಯಲ್ಲಿ ರಾಸಾಯನಿಕ ಹಾಗೂ ಹಾನಿಕಾರಕ ಕೀಟನಾಶಕಗಳ ಬಳಕೆ ಹೆಚ್ಚಾದಂತೆ ಕೊಟ್ಟಿಗೆ ಗೊಬ್ಬರದ ಬಳಕೆ ಕಡಿಮೆಯಾಗಿದೆ. ಐದು ಅಥವಾ ಆರು ವರ್ಷಕ್ಕೊಮ್ಮೆ ಜಾನುವಾರುಗಳ ಸಗಣಿ ಗೊಬ್ಬರವನ್ನು ಜಮೀನಿಗೆ ಹಾಕುವ ರೈತರು, ಮುಂದಿನ ಐದಾರು ವರ್ಷಗಳ ಕಾಲ ನಿರಂತರವಾಗಿ ಭೂಮಿಗೆ ರಾಸಾಯನಿಕಗಳನ್ನು ಉಣಿಸಿ ಮಣ್ಣಿನ ಫಲವತ್ತತೆ ನಾಶ ಮಾಡುತ್ತಾರೆ. ನಿರಂತರವಾಗಿ ರಾಸಾಯನಿಕಗಳ ದಾಳಿಗೆ ಒಳಗಾದ ಮಣ್ಣು ಸತ್ವ ಕಳೆದುಕಂಡಾಗ ಉತ್ತಮ ಬೆಳೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಇತ್ತ ಬೆಳೆ ಕೈ ಕೊಡುತ್ತದೆ. ಅತ್ತ ರೈತ ಕುಣಿಕೆಗೆ ಕೊರಳು ಕೊಡುತ್ತಾನೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಔಷಧ, ಗೊಬ್ಬರಕ್ಕೇ ಹೆಚ್ಚು ಬಂಡವಾಳ

ದೇಶದ ರೈತರು ರಾಸಾಯನಿಕ ಔಷಧ ಹಾಗೂ ಗೊಬ್ಬರಕ್ಕೆ ಅತಿಯಾಗಿ ಬಂಡವಾಳ ಹೂಡುತ್ತಾರೆ. ಅದರಲ್ಲೂ ಭತ್ತ, ಗೋಧಿ, ಹಣ್ಣು ಹಾಗೂ ತರಕಾರಿ ಬೆಳೆಯುವ ರೈತರಂತೂ ಒಂದು ಬೆಳೆ ತೆಗೆಯುವ ಅವಧಿಯಲ್ಲಿ ಕನಿಷ್ಠ ನಾಲ್ಕು ಬಾರಿ ಹಾನಿಕಾರಕ ಕೀಟನಾಶಕಗಳನ್ನು ಬೆಳೆಗೆ ಸಿಂಪಡಿಸುತ್ತಾರೆ. ಇದರಿಂದ ಖರ್ಚು ಹೆಚ್ಚಾಗುವ ಜೊತೆಗೆ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಿದೆ. ಈ ಕೃಷಿ ಉತ್ಪನ್ನಗಳನ್ನು ಸೇವಿಸುವ ಜನರ ಆರೋಗ್ಯ ಕೂಡ ಹದಗೆಡುತ್ತಿದೆ.

ಸಾವಯವ ರೈತರು ಸೇಫ್

ರಾಷ್ಟಿçÃಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಪ್ರತಿ ವರ್ಷ ಸರಾಸರಿ 10 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಅಂಕಿ-ಸAಖ್ಯೆ ಆಧಾರದಲ್ಲಿ ಸಂಶೋಧನಾ ಸಂಸ್ಥೆಯು ದೇಶದ 26 ರಾಜ್ಯಗಳಲ್ಲಿ ರೈತರ ಜೀವನ ಹಾಗೂ ಅವರು ಅನುಸರಿಸುವ ಪದ್ಧತಿ ಕುರಿತು ಅಧ್ಯಯನ ನಡೆಸಿ ಮಾಹಿತಿ ಕಲೆಹಾಕಿದೆ. ಅದರಂತೆ, ಭಾರತದಲ್ಲಿ ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ಕೃಷಿಕರ ಪೈಕಿ ಶೇ.95 ಮಂದಿ ರಾಸಾಯನಿಕ ಕೃಷಿ ಪದ್ಧತಿ ಅನುಸರಿಸುವ ರೈತರಿದ್ದಾರೆ. ಉಳಿದ ಶೇ.5 ರೈತರು ಕೌಟುಂಬಿಕ ಮತ್ತಿತರ ಒತ್ತಡಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ಸಾವಯವ, ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುವ ರೈತರು ಆತ್ಮಹತ್ಯೆಗೆ ಶರಣಾದ ಯಾವುದೇ ಪ್ರಕರಣಗಳು ಕಂಡುಬAದಿಲ್ಲ. ಇಲ್ಲಿ ಗಮನಿಸಬೇಕಿರುವ ಮತ್ತೊಂದು ಗಮನಾರ್ಹ ಅಂಶವೇನೆAದರೆ ಇತರೆ ಕೃಷಿಕರಿಗೆ ಹೋಲಿಸಿದರೆ ಸಾವಯವ ಕೃಷಿಕರು ಹೆಚ್ಚು ಆರೋಗ್ಯವಂತರಾಗಿದ್ದಾರೆ. ಅದೇ ರಾಸಾಯನಿಕ ಪದ್ಧತಿ ಅನುಸರಿಸುವ ಕೃಷಿಕರ ಕುಟುಂಬಗಳಲ್ಲಿ ಪದೇ ಪದೆ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸಂಸ್ಥೆ ತಿಳಿಸಿದೆ.

ನಷ್ಟದ ಲೆಕ್ಕಾಚಾರ

ಒಂದು ಎಕರೆ ಭೂಮಿಯಲ್ಲಿ ಭತ್ತ ಬೆಳೆಯುವ ರೈತ ಪ್ರತಿ ಬೆಳೆಗೆ ಕನಿಷ್ಠ 20 ಸಾವಿರ ರೂ.ಪಾಯಿ ಮೌಲ್ಯಯದ ರಾಸಾಯಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸುತ್ತಾರೆ. ಆದರೆ ಇಳುವರಿ ಬರುವುದು ಸರಾಸರಿ 25 ಕ್ವಿಂಟಾಲ್. ಭತ್ತದ ಬೆಲೆ ಕ್ವಿಂಟಾಲ್‌ಗೆ 1600 ರೂ. ಇದ್ದರೆ ಆತನಿಗೆ ಬರುವ ಆದಾಯ 40,000 ರೂ. ಈ ಪೈಕಿ ರಾಸಾಯನಿಕಗಳಿಗೆ ಹಾಕಿದ ಬಂಡವಾಳ 20,000 ತೆಗೆದರೆ 20 ಸಾವಿರ ಉಳಿಯುತ್ತದೆ. ಅದರಲ್ಲಿ ಬಿತ್ತನೆ ಬೀಜ ಖರೀದಿ, ಟ್ರಾಕ್ಟರ್ ಬಾಡಿಗೆ, ಕಳೆ ಕೀಳಲು, ಔಷಧ ಸಿಂಪಡಿಸಲು, ಗೊಬ್ಬರ ಹಾಕಲು ಬಳಸಿಕೊಂಡ ಕಾರ್ಮಿಕರ ಕೂಲಿ, ಭತ್ತ ಕಟಾವಿಗೆ ಮಾಡುವ ವೆಚ್ಚ ಎಲ್ಲವನ್ನೂ ಕಳೆದರೆ 10 ಸಾವಿರ ರೂಪಾಯಿ ಕೂಡ ಉಳಿಯುವುದಿಲ್ಲ. ಒಂದೊಮ್ಮೆ ರೋಗ ಹೆಚ್ಚಾಗಿ ಬೆಳೆ ಕೈಕೊಟ್ಟರೆ ರೈತ ತನ್ನ ಕೈಯಿಂದಲೇ ಹಣ ವೆಚ್ಚ ಮಾಡಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಕೃಷಿಕರು ಒಂದು ಎಕರೆಗೆ ಕನಿಷ್ಠ 30 ಸಾವಿರ ರೂ. ನಷ್ಟ ಅನುಭವಿಸುತ್ತಾರೆ. ಹಣ್ಣು, ತರಕಾರಿ ಬೆಳೆಗಳಲ್ಲಿ ಈ ನಷ್ಟದ ಪ್ರಮಾಣ ಇನ್ನೂ ಹೆಚ್ಚಿರುತ್ತದೆ.

ಈ ಲೇಖನದ ಒಟ್ಟು ಸಾರಾಂಶ ಏನೆಂದರೆ, ಸಾವಯವ ಕೃಷಿ ಪದ್ಧತಿ ಅನುಸರಿಸುವುದು ಕುಟುಂಬದವರ ಆರೋಗ್ಯ ಮತ್ತು ರೈತರ ಆಯಸ್ಸು ಎರಡಕ್ಕೂ ಪೂರಕ. ಮತ್ತು ರಾಸಾಯನಿಕ ಕೃಷಿ ಪದ್ಧತಿ ಅನುಕರಣೆ ಕೃಷಿಕರ ಕುಟುಂಬದ ಆರೋಗ್ಯ ಮತ್ತು ಆತನ ಜೀವಕ್ಕೂ ಮಾರಕ.