News

ರಾಜ್ಯದ ಕಾಫಿ ಬೆಳೆಗಾರರಿಗೂ 10 HP ವರೆಗಿನ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕ ಮರುಪಾವತಿಗೆ CM ಆದೇಶ..!

22 July, 2022 12:33 PM IST By: Kalmesh T
Order for reimbursement of electricity charges for pump sets up to 10 HP for coffee growers too..!

ರಾಜ್ಯದಲ್ಲಿ ಕೇವಲ ರೈತರಿಗಷ್ಟೇ ಲಭ್ಯವಿದ್ದ 10 ಹೆಚ್.ಪಿವರೆಗಿನ ಪಂಪ್ ಸೆಟ್ ಗಳಿಗಿದ್ದ ಸಂಪೂರ್ಣ ವಿದ್ಯುತ್ ಶುಲ್ಕ ಮನ್ನಾವನ್ನು, ಈಗ ಕಾಫಿ ಬೆಳೆಗಾರರಿಗೂ ವಿಸ್ತರಿಸಿದ್ದು, ಕಾಫಿ ಬೆಳೆಗಾರರಿಗೆ ಡಿ.ಬಿ.ಟಿ ಮೂಲಕ ಮರುಪಾವತಿ ಮಾಡುವ ಅವಕಾಶ ಕಲ್ಪಿಸಿದೆ ಎಂದು ಮುಖ್ಯಮಂತ್ರಿ  ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿರಿ: 2021-22ರಲ್ಲಿ ಬರೋಬ್ಬರಿ 16 ಲಕ್ಷ ಕ್ವಿಂಟಾಲ್‌ಗಳಷ್ಟು ಬ್ಯಾಡಗಿ ಮೆಣಸಿನಕಾಯಿ ಮಾರಾಟ!

ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 HP ವರೆಗಿನ ನೀರಾವರಿ ಪಂಪ್‌ನೆಟ್‌ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಹಲವು ಷರತ್ತು, ನಿಬಂಧನೆಗಳಿಗೊಳಪಟ್ಟು ಫಲಾನುಭವಿಗಳಿಗೆ ಡಿಬಿಟಿ ಯೋಜನೆಯ ವ್ಯವಸ್ಥೆಯಡಿ ಸರಕಾರದಿಂದ ಮರುಪಾವತಿಸಲು ಆದೇಶಿಸಲಾಗಿದೆ.

ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 HP ವರೆಗಿನ ನೀರಾವರಿ ವಿದ್ಯುತ್‌ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕವನ್ನು ಜು.1ರಿಂದ ಬಳಕೆಯಾಗುವ ವಿದ್ಯುತ್ ಬಳಕೆಗೆ ಅನ್ವಯವಾಗುವಂತೆ ಗ್ರಾಹಕರಿಗೆ ಮರುಪಾವತಿಸಲಾಗುವುದು.

ಗುಡ್‌ನ್ಯೂಸ್‌: ಕೇಂದ್ರ ಸರ್ಕಾರದಿಂದ ಒಟ್ಟು 10 ಲಕ್ಷ ಉದ್ಯೋಗ ಭರ್ತಿಗೆ ನಿರ್ಧಾರ!

ಈ ಪ್ರವರ್ಗದ ಫಲಾನುಭವಿ, ಗ್ರಾಹಕರು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಾಗಿರುವ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ದೃಢೀಕರಣ ಪತ್ರವನ್ನು ಒದಗಿಸಬೇಕು.

ಈ ಪ್ರವರ್ಗದ ಗ್ರಾಹಕರು ಅದಾರ್ ಕಾರ್ಡ್‌ ಬ್ಯಾಂಕ್‌ ಖಾತೆಯ ಸಂಖ್ಯೆ (ಖಾತೆಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಒದಗಿಸಬೇಕು) ಹಾಗೂ ಇತರ ಮಾಹಿತಿಗಳ ದೃಢೀಕೃತ ದಾಖಲೆಯನ್ನು ಒದಗಿಸುವುದು ಕಡ್ಡಾಯವಾಗಿದೆ.

ಈ ಪ್ರವರ್ಗದ ಗ್ರಾಹಕರು ವಿದ್ಯುತ್‌ ಸ್ಥಾವರಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿಗದಿಪಡಿಸಿರುವ ವಿದ್ಯುತ್ ದರ ಸೂಚಿಯಂತೆ ಮಾಸಿಕ ವಿದ್ಯುತ್ ಬಿಲ್ಲನ್ನು ಸಿದ್ಧಪಡಿಸಿ ನೀಡಲಾಗುವುದು.

ಬ್ರೇಕಿಂಗ್‌: ದಿನಬಳಕೆಯ ಒಟ್ಟು 14 ಅಗತ್ಯ ವಸ್ತುಗಳ ಮೇಲಿನ ತೆರಿಗೆ ಹಿಂಪಡೆದ ಕೇಂದ್ರ; ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌!

ಈ ಸೌಲಭ್ಯಕ್ಕೆ ಅರ್ಹರಾಗುವ ಬಳಕೆದಾರರು ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಸಮಯದಲ್ಲಿ ಪಾವತಿಸಿದ ನಂತರ ಈ ಗ್ರಾಹಕರಿಗೆ, ಬಳಕೆದಾರರಿಗೆ ಡಿಬಿಟಿ ಯೋಜನೆಯ ವ್ಯವಸ್ಥೆಯಡಿ 

- ಸರಕಾರದಿಂದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಒದಗಿಸುವ ಸಹಾಯಧನವನ್ನು ಮಾಸಿಕ ವಿದ್ಯುತ್ ಬಳಕೆ ಶುಲ್ಮದ ಮೇಲೆ ವಿಧಿಸುವ ವಿದ್ಯುತ್ ತೆರಿಗೆಯನ್ನು ಹೊರತುಪಡಿಸಿ, ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ಮರು ಜಮಾ ಮಾಡಲಾಗುವುದು). ಪಾವತಿಸಲಾಗುವುದು

ಈ ಆದೇಶವನ್ನು ಆರ್ಥಿಕ ಇಲಾಖೆಯು ಸಹಮತಿಸಿದಂತೆ ಹಾಗೂ ಸಚಿವ ಸಂಪುಟದ ಘಟನೋತ್ತರ ಅನುಮೋದನೆಗೆ ಒಳಪಟ್ಟು ಹೊರಡಿಸಿದೆ ಎಂದು ಇಂಧನ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎನ್.ಮಂಗಳಗೌರಿ ಅದೇಶದಲ್ಲಿ ತಿಳಿಸಿದ್ದಾರೆ.