News

ರೈತರ ಆಹಾರ ಸಂರಕ್ಷಣೆಗೆ “ಆಪರೇಷನ್ ಗ್ರೀನ್ಸ್”!

20 December, 2023 2:29 PM IST By: Hitesh
ರೈತರ ಆಹಾರ ಸಂರಕ್ಷಣೆಗೆ ಕೇಂದ್ರದ ಪ್ಲಾನ್‌

ರೈತರ ಉತ್ಪಾದಿಸುವ ಆಹಾರವನ್ನು ಸಂರಕ್ಷಣೆ ಮಾಡುವುದಕ್ಕೆ “ಆಪರೇಷನ್ ಗ್ರೀನ್ಸ್” ಯೋಜನೆ ಪರಿಚಯಿಸಲಾಗಿದೆ.

ಕೇಂದ್ರ ಸರ್ಕಾರವು “ಆಪರೇಷನ್ ಗ್ರೀನ್ಸ್” ಎನ್ನುವ ಯೋಜನೆಯನ್ನು ರೂಪಿಸಿದ್ದು, ಜಾರಿ ಮಾಡಿದೆ.

ದೇಶದಲ್ಲಿ ರೈತರು ಉತ್ಪಾದಿಸುವ ಆಹಾರದ ಪೋಲನ್ನು ತಡೆಯುವುದು ಇದರ ಉದ್ದೇಶವಾಗಿದೆ.  

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು (MoFPI) 2018-19ರಿಂದ ಇದನ್ನು ಪ್ರಾರಂಭಿಸಿದೆ.

ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯಡಿಯಲ್ಲಿ ಇದನ್ನು ಪರಿಚಯಿಸಲಾಗಿದೆ.

ಕೇಂದ್ರ ವಲಯದ ಯೋಜನೆ- “ಆಪರೇಷನ್ ಗ್ರೀನ್ಸ್” (OG) ಜಾರಿ ಮಾಡಲಾಗಿದೆ.

ಇದು ರೈತರ ಉತ್ಪಾದನೆ ಗುಣಮಟ್ಟ ಕಾಪಾಡಿಕೊಳ್ಳುವುದು ಮತ್ತು ಕೊಯ್ಲಿನ ನಂತರದಲ್ಲಿ ಆಗುವ ನಷ್ಟವನ್ನು ತಪ್ಪಿಸುವುದಾಗಿದೆ. 

ಈ ಯೋಜನೆಯಡಿಯಲ್ಲಿ ಗುರುತಿಸಲಾದ ಉತ್ಪಾದನಾ ಕ್ಲಸ್ಟರ್‌ಗಳಲ್ಲಿ ಅರ್ಹ ಬೆಳೆಗಳನ್ನು ಗುರುತಿಸಲಾಗಿದೆ.

ದೇಶಾದ್ಯಂತ 53 ಯೋಜನೆಗಳನ್ನು ಅನುಮೋದಿಸಲಾಗಿದೆ.

ಅಲ್ಲದೇ ಒಟ್ಟು ಯೋಜನಾ ವೆಚ್ಚ ₹ 2457.49 ಕೋಟಿಗಳಿಗೆ ₹ 634.59 ಕೋಟಿಗಳ

ಅನುದಾನದಲ್ಲಿ ಅನುದಾನವನ್ನು ನೀಡಲಾಗಿದೆ.

“ಆಪರೇಷನ್ ಗ್ರೀನ್ಸ್” ಯೋಜನೆ ದೇಶದೆಲ್ಲೆಡೆ

“ಆಪರೇಷನ್ ಗ್ರೀನ್ಸ್” ಯೋಜನೆಯನ್ನು ಕರ್ನಾಟಕದಲ್ಲೂ ಪರಿಚಯಿಸಲಾಗಿದೆ.

ಇದರೊಂದಿಗೆ ದೇಶದ 11 ರಾಜ್ಯಗಳಲ್ಲಿ “ಆಪರೇಷನ್ ಗ್ರೀನ್ಸ್” ಇದೆ.

“ಆಪರೇಷನ್ ಗ್ರೀನ್ಸ್” ಯೋಜನೆಯಡಿ ಕರ್ನಾಟಕದಲ್ಲಿ ಟೊಮೆಟೊ ಆಯ್ಕೆ ಮಾಡಿಕೊಳ್ಳಲಾಗಿದೆ.

ಯಾವೆಲ್ಲ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.  

OG ಯೋಜನೆಯ ವ್ಯಾಪ್ತಿಯಲ್ಲಿ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ (ಟಾಪ್) ಎಂಬ ಮೂರು ಪ್ರಮುಖ ಬೆಳೆಗಳಿವೆ.

ಇವುಗಳೊಂದಿಗೆ 22 ಕೊಳೆಯುವ ಬೆಳೆಗಳಾದ ಮಾವು, ಬಾಳೆಹಣ್ಣು, ಸೇಬು, ಅನಾನಸ್, ಕಿತ್ತಳೆ, ದ್ರಾಕ್ಷಿಗಳು,

ಅಒನ್ಲಾ / ಆಮ್ಲಾ ಪ್ರಮುಖವಾಗಿದೆ. ಅದರೊಂದಿಗೆ ದಾಳಿಂಬೆ, ಪೇರಲ, ಲಿಚಿ, ಟೊಮೆಟೊ, ಈರುಳ್ಳಿಗೆ ವಿಸ್ತರಿಸಲಾಗಿದೆ.

ಆಲೂಗಡ್ಡೆ, ಹಸಿರು ಬಟಾಣಿ, ಕ್ಯಾರೆಟ್, ಹೂಕೋಸು, ಬೀನ್ಸ್, ಸೋರೆಕಾಯಿ ಇದೆ.

ಇದರೊಂದಿಗೆ {ಬಾಟಲ್ ಸೋರೆಕಾಯಿ (ಲೋಕಿ), ಹಾಗಲಕಾಯಿ (ಕರೇಲ), ರಿಡ್ಜ್ / ಸ್ಪಾಂಜ್ ಸೋರೆಕಾಯಿ

(ತೋರೈ) ಮೊನಚಾದ ಸೋರೆಕಾಯಿ (ಪರ್ವಲ್) ಮತ್ತು ಬೂದಿ ಸೋರೆಕಾಯಿ (ಪೇಠ)} ಇದೆ.   

ಅಲ್ಲದೇ ಬೆಂಡೆಕಾಯಿ, ಬೆಳ್ಳುಳ್ಳಿ , ಶುಂಠಿ ಮತ್ತು ಸೀಗಡಿಯೂ ಇದೆ.

ಟೊಮೆಟೊ ಬೆಳೆ

ಕರ್ನಾಟಕದ ಉತ್ಪನ್ನ

ರಾಜ್ಯ: ಕರ್ನಾಟಕ
ಉತ್ಪನ್ನ: ಟೊಮೆಟೊ
ಯೋಜನೆಗಳ ಸಂಖ್ಯೆ: 01
ಒಟ್ಟು ಯೋಜನಾ ವೆಚ್ಚ (₹ ಕೋಟಿಗಳು): 26.8744
ಅರ್ಹ ಅನುದಾನ (₹ ಕೋಟಿಗಳು): 9.946
ಪ್ರತಿ ವರ್ಷಕ್ಕೆ ಸಂಸ್ಕರಣಾ ಸಾಮರ್ಥ್ಯ (MT): 23680
ಸಂರಕ್ಷಣೆ ಸಾಮರ್ಥ್ಯ (MT): 7000
ಉದ್ಯೋಗ ಸೃಷ್ಟಿ: 354
ಪ್ರಯೋಜನ ಪಡೆಯಬೇಕಾದ ರೈತರ ಸಂಖ್ಯೆ: 2000