News

ಈರುಳ್ಳಿ ಪ್ರತಿ ಕೆಜಿಗೆ 25 ರೂ : ಎಲ್ಲಿ? ಇಲ್ಲಿದೆ ವಿವರ

05 November, 2023 3:34 PM IST By: Maltesh
Onion Rs 25 per kg : Where? Here is the detail

ಈರುಳ್ಳಿ ಪ್ರತಿ ಕೆಜಿಗೆ ರೂ.25ಯಂತೆ ಎನ್.ಸಿ.ಸಿ.ಎಫ್, ಎನ್.ಎ.ಎಫ್.ಇ.ಡಿ, ಕೇಂದ್ರೀಯ ಭಂಡಾರ್ ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳ ಮೂಲಕ ತೀವ್ರಗತಿಯಲ್ಲಿ ವಿಲೇವಾರಿಗೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ.

ಇ-ಮಾರಾಟ, ಇ-ನಾಮ್ ಹರಾಜು ಮತ್ತು ಬೃಹತ್ ಮಾರಾಟದ ಮೂಲಕ ವಿಲೇವಾರಿ ಮಾಡಲು 5.06 ಎಲ್.ಎಂ.ಟಿ.ಯಷ್ಟು ಈರುಳ್ಳಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಸಂಗ್ರಹಿಸಿದೆ.

ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಪ್ರತಿ ಕೆಜಿಗೆ ರೂ.25 ರ ಸಬ್ಸಿಡಿ ದರದಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ಮಾಡುವ ವ್ಯವಸ್ಥೆಯನ್ನು ತೀವ್ರಗತಿಯಲ್ಲಿ ಪ್ರಾರಂಭಿಸಿದೆ. ದೇಶೀಯ ಗ್ರಾಹಕರಿಗೆ ಈರುಳ್ಳಿಯ ಲಭ್ಯತೆ ಮತ್ತು ಕೈಗೆಟುಕುವಿಕೆಯ ಬೆಲೆಯನ್ನು ಖಚಿತಪಡಿಸಿಕೊಳ್ಳಲು, ರೈತರ ಹಿತ ಕಾಪಾಡಲು, 29 ಅಕ್ಟೋಬರ್, 2023 ರಿಂದ ಜಾರಿಗೆ ಬರುವಂತೆ, ರಫ್ತು ಮಾಡಲು ಪ್ರತಿ ಎಂ.ಟಿ. ಗೆ 800 ಯು.ಎಸ್. ಡಾಲರ್ ಬೆಲೆಯನ್ನು ಕನಿಷ್ಠ ರಫ್ತು ಬೆಲೆ (ಎಂ.ಇ.ಪಿ)  ವಿಧಿಸುವಿಕೆಯಂತಹ ನಿಯಮ ಜಾರಿಗೆ ತರಲಾದ  ನಂತರ, ಅವುಗಳ  ಜೊತೆಗೆ ಇದು ಮತ್ತೊಂದು ಉಪಕ್ರಮವಾಗಿದೆ.

ಚಿಲ್ಲರೆ ಮಾರಾಟ, ಇ-ನಾಮ್ ಹರಾಜು ಮತ್ತು ಸಗಟು ಮಾರುಕಟ್ಟೆಗಳಲ್ಲಿ ಆಗಸ್ಟ್, 2023 ಎರಡನೇ ವಾರದಿಂದ ಈರುಳ್ಳಿಯ ನಿರಂತರ ಸಂಗ್ರಹಣೆ ಕಾರ್ಯ ನಡೆಯುತ್ತಿದ್ದು2 ಲಕ್ಷ ಟನ್ ಗಳಷ್ಟು ಹೆಚ್ಚುವರಿ ಈರುಳ್ಳಿಯನ್ನು ಸಂಗ್ರಹಣೆ ಗುರಿಹೊತ್ತಿದ್ದು, ಈಗಾಗಲೇ 5.06 ಲಕ್ಷ ಟನ್ ಗಳಿಗಿಂತ ಹೆಚ್ಚು ಈರುಳ್ಳಿಯನ್ನು ಸಂಗ್ರಹಿಸಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಈರುಳ್ಳಿಯ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎನ್.ಸಿ.ಸಿ.ಎಫ್, ಎನ್.ಎ.ಎಫ್.ಇ.ಡಿ, ಕೇಂದ್ರೀಯ ಭಂಡಾರ್ ಮತ್ತು ಇತರ ರಾಜ್ಯ ನಿಯಂತ್ರಿತ ಸಹಕಾರಿ ಸಂಸ್ಥೆಗಳ ಮೂಲಕ  ನಿರ್ವಹಿಸಲ್ಪಡುವ ಮೊಬೈಲ್ ವ್ಯಾನ್ ಗಳ ಮೂಲಕ ಪ್ರತಿ ಕೆಜಿಗೆ ರೂ.25 ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ವಿಲೇವಾರಿ ಮಾಡಲು ತೀವ್ರಗತಿಯಲ್ಲಿ ವ್ಯವಸ್ಥೆಗಳನ್ನು ಪ್ರಾರಂಭಿಸಿದೆ.

ನವೆಂಬರ್ 2 ರವರೆಗೆ, ಎನ್.ಎ.ಎಫ್.ಇ.ಡಿ (ನಫೀಡ್) 21 ರಾಜ್ಯಗಳಾದ್ಯಂತ 55 ನಗರಗಳಲ್ಲಿ ಸ್ಥಾಯಿ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್ ಗಳನ್ನು ಒಳಗೊಂಡಿರುವ 329 ರಿಟೇಲ್ ಕೇಂದ್ರಗಳನ್ನು ಸ್ಥಾಪಿಸಿದೆ. ಅದೇ ರೀತಿ, ಎನ್.ಸಿ.ಸಿ.ಎಫ್ 20 ರಾಜ್ಯಗಳಾದ್ಯಂತ 54 ನಗರಗಳಲ್ಲಿ 457 ರಿಟೇಲ್ ಕೇಂದ್ರಗಳನ್ನು ಸ್ಥಾಪಿಸಿದೆ.

ಕೇಂದ್ರೀಯ ಭಂಡಾರ್ ಕೂಡ 2023 ರ ನವೆಂಬರ್ 3 ರಿಂದ ದೆಹಲಿ-ಎನ್.ಸಿ.ಆರ್. ಪ್ರದೇಶಾದ್ಯಂತ ತನ್ನ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಈರುಳ್ಳಿಯ ಚಿಲ್ಲರೆ ಪೂರೈಕೆಯನ್ನು ಪ್ರಾರಂಭಿಸಿದೆ ಮತ್ತು ಸಫಲ್ ಮದರ್ ಡೈರಿಯಲ್ಲಿ ಈ ವಾರಾಂತ್ಯದಿಂದ ಈರುಳ್ಳಿಯ ಚಿಲ್ಲರೆ ಮಾರಾಟ ಪ್ರಾರಂಭವಾಗುತ್ತದೆ. ತೆಲಂಗಾಣ ಹಾಗೂ ದಕ್ಷಿಣದ ಇತರ ರಾಜ್ಯಗಳಲ್ಲಿ ಗ್ರಾಹಕರಿಗಾಗಿ ಸಬ್ಸಿಡಿ ದರದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟವನ್ನು ಹೈದರಾಬಾದ್ ಕೃಷಿ ಸಹಕಾರ ಸಂಘ (ಹೆಚ್.ಎ.ಸಿ.ಎ.) ಮಾಡಲಿದೆ.