News

ಟೊಮ್ಯಾಟೊ ನಂತರ ಈರುಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ! ವರದಿಗಳು ಹೇಳೊದೇನು ಗೊತ್ತೆ?

07 August, 2023 3:50 PM IST By: Kalmesh T
Onion price is likely to increase after tomatoes!

Onion price increase ಈಗಾಗಲೇ ದೇಶಾದ್ಯಂತ ಸಂಚಲನ ಮೂಡಿಸಿದ್ದ ಟೊಮೆಟೊ ಬೆಲೆ ಹೆಚ್ಚಳ ಇನ್ನೂ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೆ ಈರುಳ್ಳಿ ಬೆಲೆ ಕೂಡ ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನುತ್ತಿವೆ ಕೆಲ ವರದಿಗಳು. ವರದಿಗಳು ಹೇಳೊದೇನು ತಿಳಿಯಿರಿ

ಕಳೆದ ಎರಡು ತಿಂಗಳಿನಿಂದ ದೇಶದ ಪ್ರತಿ ರಾಜ್ಯದಲ್ಲೂ ಟೊಮೆಟೊ ದರ ಹೆಚ್ಚಳದಿಂದಾಗಿ ಹಾಹಾಕಾರವೇ ಸೃಷ್ಟಿಯಾಗಿತ್ತು. ಅದಷ್ಟೇ ಅಲ್ಲದೇ ಈ ಟೊಮೆಟೊ ಸಾಲುವಾಗಿ ಸಾಕಷ್ಟು ನಾಟಕಗಳೆ ನಡೆದು ಹೋದವು.

ಒಂದೆಡೆ ಟ್ರೋಲ್ಸ್‌-ಮೀಮ್ಸ್‌ಗಳು, ಇನ್ನೊಂದೆಡೆ ಚಿತ್ರ ವಿಚಿತ್ರ ಪ್ರಕರಣಗಳು, ಗಂಡ ಹೆಂಡತಿಯರ ಜಗಳ, ಟೊಮೆಟೊ ವಾಹನಗಳ ಕಿಡ್ನ್ಯಾಪ್‌ ಹೀಗೆ ಸಾಕಷ್ಟು ಘಟನೆಗಳಿಗೆ ದೇಶ ಸಾಕ್ಷಿಯಾಯಿತು.

ಇದೀಗ ಟೊಮೆಟೊ ನಂತರ ಈರುಳ್ಳಿ ಬೆಲೆ ಕೂಡ ಹೆಚ್ಚಳವಾಗುವ ಸಾಧ್ಯತೆ ಬಹುಪಾಲು ಇದೆ ಎಂದು ಸಾಕಷ್ಟು ಮಾಧ್ಯಮಗಳು ವರದಿ ಮಾಡಿವೆ.

ಈಗಾಗಲೇ ಸಾಕಷ್ಟು ತರಕಾರಿ ಬೆಲೆಗಳು ಹೆಚ್ಚಾಗಿವೆ. ಇದೀಗ ಈರುಳ್ಳಿ ಬೆಲೆಯೂ ಹೆಚ್ಚಳವಾದರೇ ಕೊಳ್ಳುವವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ.

ಪ್ರಮುಖ ಕಾರಣವೆಂದರೆ, ಖಾರಿಫ್ ಋತುವಿನಲ್ಲಿ ಕಡಿಮೆ ಬಿತ್ತನೆ ಮತ್ತು ಶೇಖರಣಾ ಸಂಬಂಧಿತ ಸಮಸ್ಯೆಗಳಿಂದ ಸೆಪ್ಟೆಂಬರ್‌ನಲ್ಲಿ ಕೆಜಿಗೆ 60-70 ರೂ.ಗೆ ತಲುಪುವ ಅಂದಾಜಿದೆ.

ಈ ಮೂಲಕ ಮತ್ತೆ ಭಾರತೀಯರ ಜೇಬಿಗೆ ಬೆಲೆ ಏಡರಿಕೆಯ ಕತ್ತರಿ ತಾಗಲಿದೆ.

ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ CRISIL ಬಿಡುಗಡೆ ಮಾಡಿದ 'ಆಹಾರ ಬೆಲೆಗಳ ಸಾಮಯಿಕ ವಿಶ್ಲೇಷಣೆ' ವರದಿಯ ಪ್ರಕಾರ, ಪೂರೈಕೆ-ಬೇಡಿಕೆ ಅಸಮತೋಲನವು ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆಯಲ್ಲಿ ಪ್ರತಿಫಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ಮಾಧ್ಯಮ ವರದಿ ಮಾಡಿದೆ.

ಒಟ್ಟಾರೆ ಒಂದೊಂದೆ ಪದಾರ್ಥಗಳು, ದಿನಬಳಕೆ ವಸ್ತುಗಳು, ತರಕಾರಿ-ಹಣ್ಣುಗಳು ಹೀಗೆ ಬೆಲೆ ಹೆಚ್ಚಳವಾಗುತ್ತಿರುವುದನ್ನ ನೋಡುತ್ತಿದ್ದರೆ ಗ್ರಾಹಕರಿಗೆ ಭಾರೀ ಬಿಸಿ ಮುಟ್ಟಿಸಲಿದೆಯೇನೊ ಎಂದೆನಿಸುತ್ತದೆ.

GruhaJyothi Scheme : ಬರೋಬ್ಬರಿ 1.41 ಕೋಟಿ ಕುಟುಂಬಗಳ ನೋಂದಣಿ – ಸಿಎಂ ಸಿದ್ದರಾಮಯ್ಯ