News

ಎಲ್‌ಪಿಜಿ ಸಿಲಿಂಡರ್ ಬುಕ್‌ ಮಾಡಲು ಒಂದೇ ದೂರವಾಣಿ ಸಂಖ್ಯೆ

30 October, 2020 8:56 AM IST By:

ಅಡುಗೆ ಅನಿಲ ಸಿಲಿಂಡರ್‌ ಬುಕ್‌ ಮಾಡಲು ಇಂಡೇನ್‌ ಆಯಿಲ್ ಕಂಪನಿಯು ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದೇ ಸಂಖ್ಯೆಯ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ದೇಶದ ಯಾವುದೇ ದೂರಸಂಪರ್ಕ ವೃತ್ತದ ವ್ಯಾ‍ಪ್ತಿಯಲ್ಲಿದ್ದರೂ 77189 55555 ಸಂಖ್ಯೆಗೆ ಕರೆ ಮಾಡಿ ಅಡುಗೆ ಅನಿಲ ಬುಕ್ ಮಾಡಬಹುದು. ಈ ವ್ಯವಸ್ಥೆಯು ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.

ಎಲ್‌ಪಿಜಿ ಸಿಲಿಂಡರ್‌ ಬುಕಿಂಗ್‌ ಸಂಖ್ಯೆ 7718955555, ಗ್ರಾಹಕರಿಗೆ 24x7 ಸೇವೆ ಲಭ್ಯವಿರುತ್ತದೆ ಎಂದು ಭಾರತೀಯ ತೈಲ ನಿಗಮದ ಪ್ರಕಟಣೆ ತಿಳಿಸಿದೆ. ಇಂಡೇನ್‌ ಎಲ್‌ಪಿಜಿ ಸಿಲಿಂಡರ್‌ ಬುಕ್ಕಿಂಗ್‌ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ ಮಾತ್ರವೇ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

‘ಎಸ್‌ಎಂಎಸ್ ಅಥವಾ ಐವಿಆರ್‌ಎಸ್ ಮೂಲಕ ಸಿಲಿಂಡರ್ ಬುಕ್‌ ಮಾಡಬಹುದು. ಇದುವರೆಗೆ ಇದ್ದ ವ್ಯವಸ್ಥೆಯ ಅಡಿ ಇಂಡೇನ್ ಆಯಿಲ್‌ ಕಂಪನಿಯ ಅಡುಗೆ ಅನಿಲ ಗ್ರಾಹಕರಿಗೆ ಒಂದೇ ಸಂಖ್ಯೆಗೆ ಕರೆ ಮಾಡಿ ಬುಕ್ ಮಾಡುವ ಸೌಲಭ್ಯ ಇರಲಿಲ್ಲ. ಗ್ರಾಹಕರು ಯಾವ ದೂರಸಂಪರ್ಕ ವೃತ್ತದ ವ್ಯಾಪ್ತಿಯಲ್ಲಿದ್ದಾರೆ ಎಂಬುದನ್ನು ಆಧರಿಸಿ, ಅವರು ಕರೆ ಮಾಡಬೇಕಿರುವ ಸಂಖ್ಯೆ ಯಾವುದು ಎಂಬುದು ತೀರ್ಮಾನವಾಗುತ್ತಿತ್ತು.

ಗ್ರಾಹಕರು 77189 55555 ಸಂಖ್ಯೆಗೆ ಕರೆ ಮಾಡಿದಾಗ, ಐವಿಆರ್‌ಎಸ್‌ ವ್ಯವಸ್ಥೆಯು ಗ್ರಾಹಕರ 16 ಅಂಕಿಗಳ ಗುರುತಿನ ಸಂಖ್ಯೆಯನ್ನು ಕೇಳುತ್ತದೆ. ಅದನ್ನು ನಮೂದಿಸಿ ದೃಢೀಕರಿಸಿದ ನಂತರ ಬುಕ್ಕಿಂಗ್‌ ಅಂಗೀಕಾರ ಆಗುತ್ತದೆ ಎಂದು ಕಂಪನಿ ಹೇಳಿದೆ. ಮೊಬೈಲ್‌ ಸಂಖ್ಯೆಯ ನೋಂದಣಿ ಆಗಿರದಿದ್ದರೆ ಅದನ್ನು ಐವಿಆರ್‌ಎಸ್‌ ಮೂಲಕವೇ ಮಾಡಲು ಸಾಧ್ಯವಿದೆ.

ಒಂದೊಮ್ಮೆ ಗ್ರಾಹಕರ ಮೊಬೈಲ್ ಸಂಖ್ಯೆ ಇಂಡೇನ್ ದಾಖಲೆಗಳಲ್ಲಿ ಲಭ್ಯವಿಲ್ಲದಿದ್ದಲ್ಲಿ, ಆಗ ಒಂದು ಬಾರಿಯ ಮೊಬೈಲ್ ನಂಬರ್ ನೋಂದಣಿಯನ್ನು ಗ್ರಾಹಕರು ಸಂಖ್ಯೆ 7 ರಿಂದ ಆರಂಭವಾಗುವ ಅವರ 16 ಅಂಕಿಗಳ ಗ್ರಾಹಕರ ಐಡಿಯನ್ನು ಟೈಪ್ ಮಾಡುವ ಮೂಲಕ ಮಾಡಬಹುದಾಗಿದೆ. ಅದೇ ಐವಿಆರ್. ಎಸ್ಕರೆಯಲ್ಲಿ ದೃಢೀಕರಣದ ನಂತರ ಇದನ್ನು ಅನುಸರಿಸಬೇಕು. ದೃಢೀಕರಣದನಂತರ, ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿಯಾಗುತ್ತದೆ ಮತ್ತು ಎಲ್ಪಿಜಿ ಮರು ಪೂರಣ ಬುಕಿಂಗ್ ಅನ್ನು ಸ್ವೀಕರಿಸಲಾಗುತ್ತದೆ. ಗ್ರಾಹಕರಈ 16-ಅಂಕಿಯ ಗ್ರಾಹಕ ಐಡಿಯನ್ನು ಇಂಡೇನ್ ಎಲ್ಪಿಜಿಇ ನ್ವಾಯ್ಸ್ / ನಗದುಮೆಮೋ / ಚಂದಾದಾರಿಕೆ ಚೀಟಿಯಲ್ಲಿ ಉಲ್ಲೇಖಿಸಲಾಗಿರುತ್ತದೆ.