News

ಕಾಂಗ್ರೆಸ್‌ನ “ಬಿಜೆಪಿ ಭ್ರಷ್ಟಾಚಾರ ಕಾರ್ಡ್‌” ಜಾಹೀರಾತಿಗೆ ಆಕ್ಷೇಪ; ನೋಟಿಸ್‌ ಜಾರಿ

07 May, 2023 1:52 PM IST By: Hitesh
Objection to Congress's "BJP Corruption Card" ad; Execution of notice

ಚುನಾವಣೆಗೆ ಮೂರು ದಿನಗಳು ಮಾತ್ರ ಬಾಕಿ ಇರುವಂತೆ ಮತಗಳಿಸುವ ಕೊನೆಯ ಕ್ಷಣದ ಕಸರತ್ತನ್ನು ಎಲ್ಲ ಪಕ್ಷಗಳೂ ಮುಂದುವರಿಸಿವೆ.

ಈ ಬಾರಿ ಚುನಾವಣೆ ಸಮಯದಲ್ಲಿ ರಾಜಕೀಯವಾಗಿ ಹೆಚ್ಚು ಚರ್ಚೆಯಾದ 40% ಇದೀಗ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ.

ಈಚೆಗೆ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೆಲವು ಹಗರಣ ಹಾಗೂ ಎಷ್ಟು ಮೊತ್ತದ ಹಗರಣ ನಡೆದಿದೆ

ಎನ್ನುವ ಅಂಶಗಳನ್ನು ಒಳಗೊಂಡ ದರಪಟ್ಟಿಯ ಜಾಹೀರಾತನ್ನು ನೀಡಿತ್ತು. ಅಲ್ಲದೇ ಈ ಸಂಬಂಧ ಪ್ರತಿಕಾಗೋಷ್ಠಿಯನ್ನೂ ನಡೆಸಲಾಗಿತ್ತು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವು ತನ್ನ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ಹಾಗೂ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹಣ ಪಡೆದಿದೆ

ಎಂದು ಆರೋಪಿಸಿ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ದರಪಟ್ಟಿ ಆರೋಪವನ್ನು ಪ್ರಶ್ನೆ ಮಾಡಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಚುನಾವಣಾ ಆಯೋಗ ನೋಟಿಸ್‌ ಜಾರಿ: ಇದೀಗ ಬಿಜೆಪಿ ನೀಡಿರುವ ದೂರನ್ನು ಆಧರಿಸಿ, ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ನೋಟಿಸ್‌ ಜಾರಿ ಮಾಡಿದೆ.

ಅಲ್ಲದೇ ಕಾಂಗ್ರೆಸ್‌ ಬಿಡುಗಡೆ ಮಾಡಿರುವ “ಬಿಜೆಪಿ ಭ್ರಷ್ಟಾಚಾರ ಕಾರ್ಡ್‌” ಜಾಹೀರಾತಿಗೆ (ಜಾಹೀರಾತಿನ ಅಂಶಗಳನ್ನು) ಸಮರ್ಥಿಸಿಕೊಳ್ಳುವ

ಪೂರಕವಾದ ಸಾಕ್ಷ್ಯಾಧಾರಗಳನ್ನು ಭಾನುವಾರ ಸಂಜೆಯ ಒಳಗಾಗಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಕಾಂಗ್ರೆಸ್‌ ಬಿಡುಗಡೆ ಮಾಡಿದ್ದ ಜಾಹೀರಾತಿನಲ್ಲಿ ಏನಿತ್ತು ?

ಕಾಂಗ್ರೆಸ್‌ ಪಕ್ಷವು ಅದರ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಇದು..

ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿಜೆಪಿಯ ವಿವಿಧ ಹಗರಣಗಳ ಪಟ್ಟಿ ಇದು ಎಂದು ಪ್ರಕಟಿಸಿದೆ. 

“ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಇದು..

ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮಧೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ

ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿಪಾಲು ಮಾಡಿದೆ ಎಂದಿತ್ತು. 

ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಕಾಂಗ್ರೆಸ್ ಬೆಂಬಲಿಸಿ.”

ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್ಟರ್‌ ಅಕೌಂಟ್‌ನಿಂದ ಟ್ವೀಟ್‌ ಮಾಡಲಾಗಿದೆ.

ಕಾರ್ಡ್‌ನ ಮೇಲೆ ಈ ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಬರೆಯಲಾಗಿದೆ.

ಭ್ರಷ್ಟಾಚಾರ ರೇಟ್‌ ಕಾರ್ಡ್‌ ಎಂದು ನೀಡಲಾಗಿದ್ದು,2019-2023ರಲ್ಲಿ ನಡೆದಿತ್ತು ಎನ್ನಲಾದ ಹಗರಣಗಳ ಬಗ್ಗೆ ಈ ರೀತಿ ಪ್ರಕಟಿಸಲಾಗಿದೆ.

ಸಿ.ಎಂ ಹುದ್ದೆಗೆ: 2,500 ಕೋಟಿ ರೂಪಾಯಿ

ಮಂತ್ರಿಗಳ ಹುದ್ದೆ 500 ಕೋಟಿ

ನೇಮಕಾತಿ ಮತ್ತು ವರ್ಗಾವಣೆ ದರ

ಕೆಎಸ್‌ಡಿಎಲ್‌ 5 ಕೋಟಿ- 15 ಕೋಟಿ

ಎಂಜಿನಿಯರ್‌ 1 ಕೋಟಿಯಿಂದ 5 ಕೋಟಿ

ಸಬ್‌ ರಿಜಿಸ್ಟರ್‌ ಲಕ್ಷದಿಂದ 5 ಕೋಟಿ

ಬೆಸ್ಕಾಂ 1 ಕೋಟಿ

ಪಿಎಸ್‌ಐ 80 ಲಕ್ಷ ರೂಪಾಯಿ

ಸಹಾಯಕ ಪ್ರಾಧ್ಯಾಪಕ 50ರಿಂದ 70 ಲಕ್ಷ ರೂಪಾಯಿ

ಉಪನ್ಯಾಸಕ 30ರಿಂದ 50 ಲಕ್ಷ

ಎಫ್‌ಡಿಎ 30 ಲಕ್ಷ

ಸಹಾಯಕ ಎಂಜಿನಿಯರ್‌ 30 ಲಕ್ಷ

ಬಮುಲ್‌ 25 ಲಕ್ಷ

ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್‌ 10 ಲಕ್ಷ

ಪೊಲೀಸ್‌ 10 ಲಕ್ಷ

ಹುದ್ದೆಗಳ ದರ

ಬಿಡಿಎ ಆಯುಕ್ತ 10ರಿಂದ 15 ಕೋಟಿ

ಕೆಪಿಎಸ್‌ಸಿ ಅಧ್ಯಕ್ಷ 5 ಕೋಟಿಯಿಂದ 15 ಕೋಟಿ

ಡಿಸಿ ಮತ್ತು ಎಸ್‌ಸಿ 5 ಕೋಟಿಯಿಂದ 15 ಕೋಟಿ

ಉಪಕುಲಪತಿ 5ರಿಂದ 10 ಕೋಟಿ

ಎಸಿ- ತಹಶೀಲ್ದಾರ್‌ 50ರಿಂದ 3 ಕೋಟಿ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.

ಅಲ್ಲದೇ ಈ ವಿಷಯವನ್ನು ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿತ್ತು.