News

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12296, ಕ್ಷಣ ಕ್ಷಣದ ಕೊರೋನಾ ಸೋಂಕಿತರ ಮಾಹಿತಿ ಬೇಕೆ ಇಲ್ಲಿ ಕ್ಲಿಕ್ ಮಾಡಿ

04 May, 2020 8:00 PM IST By:

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿದಿನ 2000 ಪ್ರಕರಣಗಳು ಬರುತ್ತಲೇ ಇರುವುದರಿಂದ ಇನ್ನೂ ಆತಂಕ ಹೆಚ್ಚಾಗಿದೆ. ಲಾಕ್ಡೌನನಲ್ಲಿ ಕೆಲವು ಸಡಿಲಿಕೆ ಮಾಡಿದ್ದರಿಂದ ಕೊರೋನಾ ಸೋಂಕು ಹೆಚ್ಚು ಹರಡುವ ಸಾಧ್ಯತೆಯಿದೆ.
 ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ವಿಧಿಸಿದ್ದ 2ನೇ ಹಂತದ ಲಾಕ್ಡೌನ್ ಭಾನುವಾರಕ್ಕೆ ಮುಕ್ತಾಯವಾಗಿದೆ. ಸೋಮವಾರದಿಂದ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕೆಲ ರಿಯಾಯ್ತಿಗಳು ಸಿಕ್ಕಿದೆ. ಆದರೆ ಕೆಂಪು ವಲಯದಲ್ಲಿ ಮಾತ್ರ ಮೇ 17ರವರೆಗೆ ಕಟ್ಟುನಿಟ್ಟಿನ ನಿರ್ಬಂಧಗಳು ಮುಂದುವರಿದಿದೆ
ಲಾಕ್ಡೌನ್ ಘೋಷಣೆ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳಿಸಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ಮೇ 3 ರ ಭಾನುವಾರ ಸಾಯಂಕಾಲ 9 ಗಂಟೆಯವರೆಗೆ 41266ರವರೆಗೆ ಕೊರೋನಾ ಸೋಂಕಿತರ ಸಂಖ್ಯೆಯಿತ್ತು.. ಈವರೆಗೆ ಒಟ್ಟು ಸತ್ತವರ ಸಂಖ್ಯೆ 1,364. ಶನಿವಾರ ಒೆಂದೇ ದಿನ 24 ಗಂಟೆಗಳಲ್ಲಿ 2487 ಪ್ರಕರಣಗಳು ಬಂದಿದ್ದವು.
ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,296 ತಲುಪಿದೆ. ಗುಜರಾತ್ನನಲ್ಲಿ 5428, ದೆಹಲಿಯಲ್ಲಿ 4122, ತಮಿಳುನಾಡು 3023, ಮಧ್ಯ ಪ್ರದೇಶದಲ್ಲಿ 2846 ಮತ್ತು ರಾಜಸ್ಥಾನದಲ್ಲಿ 2832,  ಮಂದಿಗೆ ಸೋಂಕು ತಗುಲಿದೆ.
ಪಂಜಾಬ್ನಲ್ಲಿ 331 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,102ಕ್ಕೇರಿದೆ. ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಆತಂಕ ತಪ್ಪಿದ್ದಲ್ಲ ಎನಿಸುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.
ಕೊರೋನಾ ಸೋಂಕಿತರ ಕ್ಷಣ ಕ್ಷಣದ ಮಾಹಿತಿ ಬೇಕೇ ಈ ಲಿಂಕ್ ಒತ್ತಿ. https://www.covid19india.org/ಎಲ್ಲಾ ಮಾಹಿತಿ ಕ್ಷಣಾರ್ಧದಲ್ಲಿ ಪಡೆಯುವಿರಿ.