ಇತ್ತೀಚೆಗೆ ಅಡುಗೆ ಅನಿಲದ ಸಿಲಿಂಡರ್ ಸಬ್ಸಿಡಿಯನ್ನು ಯಾವುದೇ ಅಧಿಕೃತ ಘೋಷಣೆಯಿಲ್ಲದೆ ನಿಲ್ಲಿಸಿದ ಕೇಂದ್ರ ಸರ್ಕಾರ ನಿರ್ಧಾರವವು ಅನೇಕ ವಿರೋಧಗಳಿಗೆ ಕಾರಣವಾಗಿತ್ತು. ಇದೀಗ ಎಲ್ಪಿಜಿ ರೀತಿಯಲ್ಲಿಯೇ ಸೀಮೆಎಣ್ಣೆಗೆ ನೀಡುತ್ತಿದ್ದ ಸಬ್ಸಿಡಿಯನ್ನೂ ಸಹ ಸ್ಥಗಿತಗೊಳಿಸಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆಎಣ್ಣೆಯನ್ನು ಮಾರುಕಟ್ಟೆ ದರದಲ್ಲಿಯೇ ಖರೀದಿಸಬೇಕಿದೆ.
ಬಡವರ ಇಂಧನವೆಂದೇ ಖ್ಯಾತಿ ಪಡೆದ ಸೀಮೆಎಣ್ಣೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ಸದ್ದಿಲ್ಲದೆ ನಿಲ್ಲಿಸಿದೆ. ಹದಿನೈದು ದಿನಗಳಿಗೆ ಒಮ್ಮೆಯಂತೆ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ಸೀಮೆಎಣ್ಣೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಇಲ್ಲವಾಗಿಸಿದೆ. ಇದರಿಂದಾಗಿ ಮಾರುಕಟ್ಟೆ ದರದಲ್ಲಿ ಸೀಮೆಎಣ್ಣೆ ಸಿಗಲಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಮೂಲಕ ಮಾರಾಟವಾಗುವ ಸೀಮೆಎಣ್ಣೆಯ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಗೆ ಸಮನಾಗಿದೆ.
ಸೋಮವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ನೀಡುವ ಪ್ರಸ್ತಾವ ಇಲ್ಲ. 2016 ರ ದರ 15 ರೂಪಾಯಿ ಇತ್ತು. 2021 ರಲ್ಲಿ 36 ರೂಪಾಯಿ ಆಗಿದೆ. ಇದೀಗ ಮಾರುಕಟ್ಟೆ ದರದಲ್ಲೇ ಸೀಮೆಎಣ್ಣೆ 4 ವರ್ಷದಲ್ಲಿ ಸೀಮೆ ಎಣ್ಣೆ ದರ 21 ರೂಪಾಯಿ ಹೆಚ್ಚಳವಾಗಿದೆ.