ಜುಲೈ 22 ರಿಂದ ರಾಜ್ಯದ ಯಾವುದೇ ಭಾಗದಲ್ಲಿಯೂ ಲಾಕ್ಡೌನ್ (No more lockdown) ಇರಲ್ಲ. ಕೊರೊನಾ ವೈರಸ್ ಸೋಂಕಿನ ತಡೆಗೆ ಲಾಕ್ಡೌನ್ ಪರಿಹಾರವಲ್ಲ. ಇದರ ವಿರುದ್ಧದ ಹೋರಾಟದಲ್ಲಿ ಜನತೆಯ ಸಹಕಾರ ಅಗತ್ಯವಿದೆ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ (Mask) ಧರಿಸಿ, ಅಂತರ ಕಾಪಾಡಿ (Social distance) ಕೋರೋನಾ ಸೋಂಕನ್ನು ನಿಯಂತ್ರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಜನತೆಗೆ ಸಂದೇಶ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಜನರನ್ನು ಉದ್ದೇಶಿಸಿ ಮುಖ್ಯಮಂತ್ರಿ ಮಾತನಾಡಿ, ಆರಂಭದಲ್ಲಿ ಕರ್ನಾಟಕದಲ್ಲಿ (Karnataka) ಕೊರೋನಾ ನಿಯಂತ್ರಣದಲ್ಲಿತ್ತು. ಕೊರೋನಾ ತಡೆಗಟ್ಟುವ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರವಲ್ಲ, ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಗ ಮಾತ್ರ ಕೊರೋನಾ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ. ಜನತೆ ನಿರಂತರವಾಗಿ ಅವರವರ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸುವ ಮೂಲಕ ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಕ್ರೋಢೀಕರಿಸಲು ಸಹಕಾರ ನೀಡಬೇಕು ಎಂದಿದ್ದಾರೆ.
ಲಾಕ್ಡೌನ್ ತೆರವಾಗಿರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ರಾಜ್ಯಾದ್ಯಂತ ಸಾರಿಗೆ ಸಂಸ್ಥೆ ಬಸ್ ಮತ್ತು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆ. ರಾಜ್ಯದಲ್ಲಿ ಶೇಖಡಾ 80 ಕ್ಕೂ ಅಧಿಕ ಸೋಂಕಿತರಿಗೆ ಯಾವುದೇ ರೋಗ ಲಕ್ಷಣ ಇಲ್ಲ, ಲಘುವಾದ ರೋಗ ಲಕ್ಷಣ ಇರುವವರಿಗೆ ಆಸ್ಪತ್ರೆಯ ಅವಕಷ್ಯತೆ ಇಲ್ಲ. ಅಂತವರಿಗೆ ಮನೆ ಅಥವಾ ಆರೈಕೆ ಕೆಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು. ಕೇವಲ ಶೇ. 5 ರಷ್ಟು ಮಂದಿಗೆ ಮಾತ್ರ ವೆಂಟಿಲೇಟರ್ ಬೇಕು ಎಂದು ಮಾಹಿತಿ ನೀಡಿದರು.
5 ಟಿ ಕಾರ್ಯಾಚರಣೆ ಬಳಕೆಯಲ್ಲಿ ರಾಜ್ಯ ಮುಂಚೂಣಿ:
ರಾಜ್ಯ ಸರ್ಕಾರ ಕೊರೋನಾ ಸೋಂಕು ನಿಯಂತ್ರಣಕ್ಕೆ ‘5 T’ ಸೂತ್ರ ಅಳವಡಿಸಿಕೊಂಡಿದೆ. ಅವೆಂದರೆ, Trace (ಪತ್ತೆ), Track (ಗುರುತಿಸು), Test (ಪರೀಕ್ಷೆ), Treat (ಚಿಕಿತ್ಸೆ) ಹಾಗೂ Technology (ತಂತ್ರಜ್ಞಾನ). ಜತೆಗೆ, ಕಂಟೈನ್ಮೆಂಟ್ ವಲಯಗಳಲ್ಲಿ ಮತ್ತಷ್ಟು ಬಿಗಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾತ್ರಿ ಕರ್ಫ್ಯೂ, ಭಾನುವಾರದ ನಿರ್ಬಂಧ ಮುಂದುವರಿಕೆ:
ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಲಾಕ್ಡೌನ್ ಮುಂದುವರೆಯಲಿದೆ. ಜುಲೈ 31 ರವರೆಗೂ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂವನ್ನು 9 ರಿಂದ ಬೆಳಗ್ಗೆ 5 ಗಂಟೆವರೆಗೆ ಮುಂದುವರಿಸಲಾಗುತ್ತದೆ.ಈ ವೇಳೆಯಲ್ಲಿ ವಾಹನ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಜುಲೈ 26 ರ ಭಾನುವಾರ ಸಂಪೂರ್ಣ ಲಾಕ್ಡೌನ್ ಮುಂದುವರೆಸಲಾಗುತ್ತದೆ.
ಯಾವುದಕ್ಕಿಲ್ಲ ಅವಕಾಶ: ಶಾಲಾ ಕಾಲೇಜು, ಸಿನೆಮಾ ಮಂದಿರ, ಜೀಮ್, ಈಜುಕೋಳ, ಮೆಟ್ರೋ, ಮನರನಂಜನಾ ಕೇಂದ್ರಗಳು.