News

ದೇಶದಲ್ಲಿ ಲಾಕ್ಡೌನ್ ಇಲ್ಲ. ನೈಟ್ ಕರ್ಫ್ಯೂಗೆ ಆದ್ಯತೆ ಕೊಡಿ- ಮೋದಿ

08 April, 2021 9:36 PM IST By:
PM Narendra Modi

ಕೋವಿಡ್ -19 ರ ಲಸಿಕೆ ಅಭಿಯಾನದ ಭಾಗವಾಗಿ ಏಪ್ರೀಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.
ಅವರು ಗುರುವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಪರೆನ್ಸ್ ನಲ್ಲಿ ಮಾತನಾಡಿ, ನಾವು ಲಸಿಕೆ ಕಡೆಗೆ ಸಾಗುತ್ತಾ ಕೋವಿಡ್-19 ಪರೀಕ್ಷೆಯನ್ನು ಮರೆತಿರುವುದು ಇಂದಿನ ಸಮಸ್ಯೆಯಾಗಿದೆ. ದೇಶದಲ್ಲಿ ಕೋವಿಡ್ ಸೋಂಕು ತಡೆಯಲು ಲಾಕ್ಡೌನ್ ಅಗತ್ಯವಿಲ್ಲ. ಇದರ ಬದಲಾಗಿ ನೈಟ್ ಕರ್ಫ್ಯೂಗೆ ಆದ್ಯತೆ ಕೊಡಬೇಕೆಂದು ತಿಳಿಸಿದ್ದಾರೆ.

ಲಸಿಕೆ ಇಲ್ಲದೆಯೇ ನಾವು ಕೋವಿಡ್ -19 ಎದುರಿನ ಹೋರಾಟದಲ್ಲಿ ಗೆಲವು ಸಾಧಿಸಿದ್ದೇವೆ ಎಂಬುದನ್ನು ನೆನಪಿಟ್ಟುಕೊಲ್ಳಬೇಕಾಗಿದೆ. ಕೋವಿಡ್ ಪರೀಕ್ಷೆಯನ್ನು  ಹೆಚ್ಚಿಸಬೇಕಿದೆ. ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2-3 ವಾರ ಕಠಿಣ ನಿಯಮಗಳನ್ನು ಜಾರಿ ಮಾಡುವ ಅಗತ್ಯವಿದೆಯ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಪ್ರದೇಶದಲ್ಲಿ ಕೊರೋನಾ ಕರ್ಫ್ಯೂ ಎಂಬ ಪದವನ್ನು ಬಳಸುವಂತೆ ಪ್ರಧಾನಿ ಆಗ್ರಹಿಸಿದ್ದಾರೆ. ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 9 ಅಥವಾ 10 ಗಂಟೆಯಿಂದ ಬೆಳಗ್ಗೆ 5 ಅಥವಾ 6 ಗಂಟೆಯವರೆಗೂ ನಿಗದಿ ಮಾಡವುದು ಉತ್ತಮ ಎಂದಿದ್ದಾರೆ.

ಮಾಸ್ಕ್ ಧರಿಸುವದರ ಪ್ರಾಮುಖ್ಯತೆ ಬಗ್ಗೆ ಜಾಗೃತಿಯನ್ನು ಇನ್ನಷ್ಟು ಹೆಚ್ಚು ಮಾಡಬೇಕಿದೆ. ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಆನುಸರಿಸುವುದರ ಕಡೆಗೆ ಗಮನ ಹರಿಸಬೇಕಾಗಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ವೇಗ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು 2 ರಿದಂ 3 ವಾರ ತೀವ್ರ ಕಟ್ಟೆಚ್ಚರ ವಹಿಸಬೇಕು ದೇಶದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾಗಿಯೂ ಆತಂಕಕಾರಿ ವಿಷಯವಾಗಿದೆ ಎಂದರು.

 'ರಾತ್ರಿ ಕರ್ಫ್ಯೂ ಬದಲಿಗೆ ಕೊರೊನಾ ಕರ್ಫ್ಯೂ ಎಂದು ಕರೆಯಿರಿ'

. ಈಗ ಈ ರೋಗದ ಬಗ್ಗೆ ನಮಗೆ ಹೆಚ್ಚಿನ ಅನುಭವವಿದೆ. ಇದು ನಮ್ಮೆಲ್ಲರಿಗೂ ಪ್ಲಸ್ ಪಾಯಿಂಟ್ ಆಗಿದೆ. ಆದರೆ ಮೊದಲು ಅಂತಹದ್ದೇನೂ ಇರಲಿಲ್ಲ. ಇದು ಲಾಕ್ ಡೌನ್ ಗಳನ್ನು ಹೇರುವಂತೆ ನಮ್ಮನ್ನು ಒತ್ತಾಯಿಸಿತು. ಆ ಲಾಕ್ ಡೌನ್ ಅವಧಿಯಲ್ಲಿ, ನಾವು ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದೇವೆ. ಈಗ ಸೂಕ್ಷ್ಮ ನಿರ್ವಹಣಾ ವಲಯಗಳನ್ನು ರಚಿಸಲು ನಮ್ಮ ಒತ್ತು ನೀಡಬೇಕು. ರಾತ್ರಿ ಕರ್ಫ್ಯೂ ಹೇರಿರುವಲ್ಲಿ ಕೊರೊನಾ ಕರ್ಫ್ಯೂ ಎಂಬ ಪದವನ್ನು ಬಳಸಿ ಎಂದರು.

"ದೇಶವು ಕೊರೊನಾ ಮೊದಲ ಅಲೆಯ ಉತ್ತುಂಗವನ್ನು ದಾಟಿದೆ. ಅನೇಕ ರಾಜ್ಯಗಳು ಹೆಚ್ಚಾಗಿದೆ. ಇದು ನಮ್ಮೆಲ್ಲರಿಗೂ ಕಾಳಜಿಯ ವಿಷಯವಾಗಿದೆ. ಏಕೆಂದರೆ ಜನರು ಮೊದಲಿನಂತೆ ಓಡಾಡುತ್ತಿದ್ದಾರೆ ಮತ್ತು ಆಡಳಿತದ ಸಹ ನಿರ್ಲಕ್ಷ್ಯವಾಗಿದೆ. ನಾವು ಮತ್ತೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ'. ಪರಿಸ್ಥಿತಿಯನ್ನು ನಿಭಾಯಿಸಲು ದೇಶವಾಸಿಗಳು 2-3 ವಾರಗಳ ವರೆಗೆ ನಿರ್ಲಕ್ಷ್ಯ ತೋರದೆ ಕಟ್ಟುನಿಟ್ಟಾಗಿರಬೇಕು ಎಂದು ಅವರು ಮನವಿ ಮಾಡಿದರು.