ಹೊಸ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎಱಡು ಚಂದ್ರಗ್ರಹಣಗಳು ಇನ್ನೆರಡು ಸೂರ್ಯಗ್ರಹಣಗಳು ಸಂಭವಿಸಲಿವೆ. ಒಂದು ಸಂಪೂರ್ಣ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ.
ಭಾರತದ ಪಾಲಿಗೆ 2021 ರಲ್ಲಿ ಗ್ರಹಣಗಳಿಲ್ಲದ ವರ್ಷ ಎಂದೇ ಹೇಳಬಹುದು. ಮುಂದಿನ ವರ್ಷ ನಾಲ್ಕು ಗ್ರಹಣಗಳು ಸಂಭವಿಸುತ್ತವೆಯಾದರೂ ಭಾರತೀಯರಿಗೆ ಇವು ಗೋಚರಿಸುವುದಿಲ್ಲ ಎನ್ನಲಾಗುತ್ತಿದೆ.
ಮೊದಲ ಚಂದ್ರ ಗ್ರಹಣ ಮೇ 26 ರಂದು ಸಂಭವಿಸಲಿದೆ. ಇದನ್ನು ಖಗ್ರಾಸ್ ಚಂದ್ರಗ್ರಹಣವೆನ್ನುವರು. ನ. 19 ರಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದೆ. ಜೂನ್ 10 ರಂದು ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ. ಡಿ. 4 ರಂದು ಖಗ್ರಾಸ್ ಸೂರ್ಯಗ್ರಹಣ ಸಂಭವಿಸುತ್ತವೆ. ಇನ್ನೊಂದು ವಿಶೇಷವೆಂದರೆ ಈ ವರ್ಷ ನಾಲ್ಕು ಸೂಪರ್ ಮೂನ್ ಗಳಿವೆ..
ಮೇ 26 ರಂದು ಖಗ್ರಾಸ್ ಚಂದ್ರಗ್ರಹಣ ನೋಡುವ ಅವಕಾಶ ಕೇವಲ ಪಶ್ಚಿಮ ಬಂಗಾಳ, ಒಡಿಸ್ಸಾ ಮತ್ತು ಈಶಾನ್ಯ ಭಾರತದ ರಾಜ್ಯಗಳ ಖಗೋಳಾಸಕ್ತರಿಗೆ ಸಿಗಲಿದೆ. ನ. 19 ರಂದು ಪಾರ್ಶ್ವ ಚಂದ್ರಗ್ರಹಣವು ಅಸ್ಸಾಂ, ಅರುಣಾಚಲಪ್ರದೇಶದವರಿಗೆ ಮಾತ್ರ ಸ್ವಲ್ಪ ಕಾಣಲಿದೆ.