News

ಓಲ್ಡ್‌ ಪೊಲ್ಯೂಟಿಂಗ್‌ ಎನ್ನುವುದಕ್ಕೆ ಓಲ್ಡ್‌ ಪೊಲಿಟಿಕಲ್‌ ಎಂದ ನಿರ್ಮಲಾ ಸೀತರಾಮನ್‌ ನಗೆಗಡಲಲ್ಲಿ ತೇಲಿದ ಸಂಸತ್!

01 February, 2023 12:02 PM IST By: Hitesh
Nirmala SitharaNirmala

ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಓಲ್ಡ್‌ ಪೊಲ್ಯೂಟಿಂಗ್‌ ಎನ್ನುವುದಕ್ಕೆ ಓಲ್ಡ್‌ ಪೊಲಿಟಿಕಲ್‌ ಎಂದು ಬಜೆಟ್‌ ಮಂಡನೆ ವೇಳೆ ಹೇಳಿದ್ದು, ಸಂಸತ್ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿತು. 

Budget 2023-2024 ಮೀನುಗಾರರಿಗೆ 6 ಸಾವಿರ ಕೋಟಿ ರೂಪಾಯಿ ಮೀಸಲು, ಕೃಷಿ ವೇಗವರ್ಧಕ ನಿಧಿ ಸ್ಥಾಪನೆ

ಕೇಂದ್ರ ಸರ್ಕಾರವು ಹಳೆಯ ವಾಹನಗಳನ್ನು ಗುಜುರಿಗೆ ಹಾಕುವುದಕ್ಕೆ ಕ್ರಮ ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ.

ಕೇಂದ್ರ ಸರ್ಕಾರದ 2023-2024ನೇ ಸಾಲಿನ ಬಜೆಟ್‌ ಬುಧವಾರ ಕೇಂದ್ರ ಆರ್ಥಿಕ   ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿದ್ದಾರೆ.

15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವುದಕ್ಕೆ ಸಂಬಂಧಿಸಿದಂತೆ ಬಜೆಟ್‌ ಮಂಡನೆ ಮಾಡುವ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌: ಕೃಷಿ ಕ್ಷೇತ್ರಕ್ಕೆ ಉತ್ತೇಜನದ ನಿರೀಕ್ಷೆ

ಈ ವೇಳೆ  ಓಲ್ಡ್‌ ಪೊಲ್ಯೂಟಿಂಗ್‌ ಪ್ಲೇಸ್‌ ಮೆಂಟ್‌ (ಹಳೆಯ ವಾಹನಗಳನ್ನು ಗುಜುರಿಗೆ ಹಾಕುವುದು ಅಥವಾ ಪರ್ಯಾಯ ವಾಹನಗಳ ಪರಿಚಯ) ಎಂದು ಹೇಳುವ ಬದಲಾಗಿ, ಓಲ್ಡ್‌ ಪೊಲಿಟಿಕಲ್‌ (ಹಳೆಯ ಪಕ್ಷಗಳ ಬದಲಾವಣೆ) ಎಂದು ಹೇಳಿದರು.

ನಿರ್ಮಲಾ ಸೀತಾರಾಮನ್‌ ಅವರ ಈ ಮಾತಿಗೆ ಇಡೀ ಸಂಸತ್‌ ನಗೆಗಡಲಲ್ಲಿ ತೇಲಿತು. ನಗುತ್ತಲೇ ಉತ್ತರಿಸಿದ ನಿರ್ಮಲಾ ಸೀತಾರಾಮನ್‌ ಅವರು ನನಗೆ ಗೊತ್ತಾಯ್ತು ಎಂದು ಮತ್ತೊಮ್ಮೆ ಸರಿಯಾಗಿ ವಾಹನಗಳ ಗುಜುರು ನೀತಿ ಎಂದು ಹೇಳಿ ಮುಂದಕ್ಕೆ ಸಾಗಿದರು.

ಜಯಲಲಿತಾಗೆ ಸೇರಿದ್ದ 11,000 ಸಾವಿರ ರೇಷ್ಮೆ ಉಡುಪು ಹರಾಜಿಗೆ!

ಬಜೆಟ್‌ನ ಇನ್ನಿತರ ಪ್ರಮುಖ ಅಂಶಗಳು ಈ ರೀತಿ ಇವೆ.  

ಕೃಷಿ ಹಾಗೂ ಕೃಷಿ ಆಧಾರಿತ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಪರಿಚಯ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಎರಡನೇ ಸಾಲಿನ ಕೊನೆಯ ಬಜೆಟ್‌ ಬುಧವಾರ ಕೇಂದ್ರ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿದ್ದು, ಕೃಷಿ ಹಾಗೂ ಕೃಷಿ ಆಧಾರಿತ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಪರಿಚಯ ಮಾಡಿದ್ದಾರೆ.

ಅವುಗಳಲ್ಲಿ ಪ್ರಮುಖವಾಗಿ ಮೀನುಗಾರರಿಗೆ 6 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಟ್ಟಿರುವುದು ಪ್ರಮುಖವಾಗಿದೆ.

ಗ್ರೀನ್‌ ಎನರ್ಜಿಯನ್ನು ಉತ್ತೇಜನ ಮಾಡುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯ ವಿಷಯಗಳಲ್ಲಿ ಒಂದಾಗಿದೆ.

ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಓಕೆ ಎಂದ 38.37 ಲಕ್ಷ ಮಕ್ಕಳು!

Nirmala Sitharaman

ಅತೀ ಮುಖ್ಯವಾಗಿ ಕೃಷಿ ವೇಗವರ್ಧಕ ನಿಧಿ ಸ್ಥಾಪನೆ ಮಾಡುವುದು ಸೇರಿದೆ. ಮುಖ್ಯವಾಗಿ ಕೃಷಿ ವೇಗವರ್ಧಕ ನಿಧಿ ಸ್ಥಾಪನೆ ಮಾಡುವ ಮೂಲಕ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಲು ಕೇಂದ್ರ ಸರ್ಕಾರವು ಮುಂದಾಗಿದೆ.

ಜನಧನ್‌ ಅಕೌಂಟ್‌ನ ಫಲಾನುಭವಿಗಳ ಸಂಖ್ಯೆಯನ್ನು 14 ಕೋಟಿಗೂ ಹೆಚ್ಚು ವಿಸ್ತರಣೆ ಮಾಡುವುದಕ್ಕೆ ಕ್ರಮವಹಿಸಲಾಗುತ್ತಿದೆ.

ಎಲ್ಲರನ್ನೂ ಒಳಗೊಳ್ಳುವ ಬಜೆಟ್‌ ಇದಾಗಿರಲಿದೆ ಎಂದು ಕೇಂದ್ರ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

ರೈತರ ಹೃದಯವನ್ನು ಗೆಲ್ಲುವ ಸಲುವಾಗಿ, ಕೇಂದ್ರ ಸರ್ಕಾರವು 2023ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ PM ಕಿಸಾನ್ ಪಾವತಿಯ ಹೆಚ್ಚಳ ಸೇರಿದಂತೆ ಅನೇಕ ದೊಡ್ಡ ಕೊಡುಗೆಗಳನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. 

ಬೆಂಗಳೂರಿನಲ್ಲಿ ಕೋಟಿ ವೃಕ್ಷ ಅಭಿಯಾನ, ಮತ್ತೆ ಗಾರ್ಡನ್‌ ಸಿಟಿಗೆ ಜೀವ