News

ಮಿನರಲ್ ವಾಟರ್ ಖರಿದಿಸುವ ಮುನ್ನ ಇದನ್ನು ಓದಿ

08 December, 2020 1:44 PM IST By:

 ನಾವು ನೀವೆಲ್ಲಾ ಪ್ರಯಾಣಿಸುವ ಸಮಯದಲ್ಲಿ ಮಿನರಲ್ ವಾಟರ್ ಖರೀದಿಸುವುದು ಸರ್ವೇ ಸಾಮಾನ್ಯ, ಈ ವ್ಯಾಪಾರದಲ್ಲಿ  ಹಲವಾರು ಕಂಪನಿಗಳು ಪೈಪೋಟಿ ನಡೆಸುತ್ತಿವೆ, ಹಾಗಾಗಿ ನಾವು ನೀರನ್ನು ಖರೀದಿಸುವ ಮುನ್ನ ಏನೆಲ್ಲಾ ಜಾಗೃತಿ ವಹಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಪ್ಯಾಕೇಜ್ಡ್ ಮಿನರಲ್  ವಾಟರ್  ಕಂಪನಿಗಳು ಎಷ್ಟಿವೆ ಎಂದು ನೀವು ಊಹಿಸಿದ್ದೀರಾ? ಒಟ್ಟು 6000 ಲೈಸೆನ್ಸ್ ಹೊಂದಿರುವ ವಾಟರ್ ಬಾಟಲಿ ಘಟಕಗಳಿವೆ, ಹಾಗೂ ಸುಮಾರು 150 ಬ್ರ್ಯಾಂಡ್ಗಳು ಭಾರತದ ಮಾರುಕಟ್ಟೆಯಲ್ಲಿವೆ. ಹೀಗೆ ಇಷ್ಟೊಂದು ಕಂಪನಿಗಳು ಪೈಪೋಟಿ ನಡೆಸುತ್ತಿರುವಾಗ ನಾವು ಬಾಟಲಿಗಳನ್ನು ಖರೀದಿಸುವ ಮುನ್ನ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳನ್ನು ಮನದಲ್ಲಿಟ್ಟುಕೊಂಡು ಖರೀದಿಸುವುದು ಅತ್ಯವಶ್ಯಕ.

 ಭಾರತದಲ್ಲಿ ಪ್ಯಾಕೇಜ್ ಮಿನರಲ್  ವಾಟರ್ ತಯಾರಿಸುವ ಕಂಪನಿಗಳಿಗಾಗಿ ಜನವರಿ1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ನಿಯಮದ ಪ್ರಕಾರ ಪ್ರತಿ ಲೀಟರ್ ನೀರಿನಲ್ಲಿ 20 ಮಿಲಿ ಗ್ರಾಮ ಕ್ಯಾಲ್ಸಿಯಂ ಹಾಗೂ 10 ಮಿಲಿಗ್ರಾಂ ಮ್ಯಾಗ್ನೇಷಿಯಂ ಕಡ್ಡಾಯವಾಗಿ ಇರಲೇಬೇಕು. ಇವೆರಡು ಮನುಷ್ಯನ ಆರೋಗ್ಯಕ್ಕೆ ತುಂಬಾ ಸಹಾಯಕವಾಗಿವೆ  ಹಾಗಾಗಿ ಇವುಗಳನ್ನು ನೀರಿನೊಂದಿಗೆ ನೀಡುವುದು ಪ್ಯಾಕೇಜ್ ಮಿನರಲ್  ವಾಟರ್ ಕಂಪನಿಯ ಮಾಲೀಕರ ಜವಾಬ್ದಾರಿಯಾಗಿದೆ. ಇವು ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತವೆ ಹಾಗಾಗಿ ಇವೆಲ್ಲವೂ ನಾವು ಸೇವಿಸುವ ನೀರಿನಲ್ಲಿ ಅತ್ಯವಶ್ಯಕ ಎಂದು FSSAI ಹೇಳಿದೆ.

 ನಾವು ಸೇವಿಸುವ ಪ್ಯಾಕೇಜ್ಡ್ ಮಿನರಲ್  ವಾಟರ್ ಹಲವಾರು ಹಂತಗಳಲ್ಲಿ ಫಿಲ್ಟರ್ ಆಗಿ ಬರುವ ಕಾರಣದಿಂದ ಅದರಲ್ಲಿ ಇರುವಂತಹ ಮೂಲಕ ಖನಿಜಗಳು  ಫಿಲ್ಟರ್ ಆಗಿ ಅದು ನೀರನ್ನು ಬಿಟ್ಟು ಹೊರಗೆ ಹೋಗುತ್ತದೆ, ಹಾಗೂ ನಾವು ಖನಿಜಗಳು ಇಲ್ಲದ ನೀರನ್ನು ಸೇವಿಸುತ್ತಿದ್ದೇವೆ. ಹೀಗಾಗಿ  ಪ್ಯಾಕೇಜ್ ಮಿನರಲ್ ವಾಟರ್ ನೊಂದಿಗೆ ಖನಿಜಗಳನ್ನು ಸೇರಿಸುವುದು ಅತ್ಯವಶ್ಯಕ ಎಂದು FSSAI ಸ್ಪಷ್ಟಪಡಿಸಿದೆ, ಹಾಗೂ ಡಿಸೆಂಬರ್ 31ರಂದು ಒಳಗಾಗಿ ಎಲ್ಲಾ ಕಂಪನಿಗಳು ಕಡ್ಡಾಯವಾಗಿ ಈ ನಿಯಮವನ್ನು ಜಾರಿ ಮಾಡುವಂತೆ ಸೂಚಿಸಲಾಗಿದೆ.