ಪಶ್ಚಿಮ ಬಂಗಾಳದ ಕೊಲ್ಕತ್ತಾ ಇದೀಗ ಮತ್ತೊಂದು ವಿಷಯದಿಂದ ಇತಿಹಾಸ ಸೃಷ್ಟಿಸಿದೆ. ಈಚೆಗೆ ನದಿಯ ಕೆಳೆಗೆ ಮೆಟ್ರೋ ಪ್ರಯೋಗಿ ಸಂಚಾರ ಯಶಸ್ವಿಯಾಗಿದ್ದು, ಹೊಸ ದಾಖಲೆ ಸೃಷ್ಟಿ ಆಗಿದೆ.
ಕೊಲ್ಕತ್ತಾ ಮೆಟ್ರೋ ಇತಿಹಾಸವನ್ನು ಸೃಷ್ಟಿಸಿದೆ. ಭಾರತದಲ್ಲಿ ಮೊದಲ ಬಾರಿಗೆ, ನದಿಯ ಅಡಿಯಲ್ಲಿ ಮೆಟ್ರೋ ಸಂಚಾರ ಆಗಿರುವುದು ಹೊಸ ದಾಖಲೆ ಆಗಿದೆ.
ಕೊಲ್ಕತ್ತಾದ HowrahMaidan ಹಾಗೂ Esplanade ವರೆಗೆ ನಿಯಮಿತ ಪ್ರಯೋಗವು ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಕೊಲ್ಕತ್ತಾ ಮೆಟ್ರೋ ಈಚೆಗೆ ನದಿಯ ಕೆಳಗೆ ತನ್ನ ಮೆಟ್ರೋ ಸಂಚಾರ ಪ್ರಯೋಗ ಯಶಸ್ವಿಯಾಗಿದ್ದು, ಹೊಸ ಮೈಲಿಗಲ್ಲನ್ನು ಸಾಧಿಸಿದೆ.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೆಟ್ರೋ ಕುಂಟೆ ನದಿಯಡಿಯಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ.
ಒಟ್ಟು ಎರಡು ರೇಕ್‌ಗಳು - MR-612 ಮತ್ತು MR-613 ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ.
MR-612 ರೇಕ್ 11:55 ಗಂಟೆಗೆ ಹೂಗ್ಲಿ ನದಿ ಮಾರ್ಗದಲ್ಲಿ ಸಂಚರಿಸಿದೆ. ನಂತರ, ರೇಕ್ ಸಂಖ್ಯೆ MR-613 ಅನ್ನು ಹೌರಾ ಮೈದಾನ ನಿಲ್ದಾಣಕ್ಕೆ ಸಾಗಿದೆ.
ಪಿ ಉದಯ್ ಕುಮಾರ್ ರೆಡ್ಡಿ, ಜನರಲ್ ಮ್ಯಾನೇಜರ್, ಎಚ್‌ಎನ್ ಜೈಸ್ವಾಲ್, ಹೆಚ್ಚುವರಿ ಜನರಲ್ ಮ್ಯಾನೇಜರ್,
ಕೋಲ್ಕತ್ತಾ ಮೆಟ್ರೋ ಮತ್ತು ಎಂಡಿ, ಕೆಎಂಆರ್‌ಸಿಎಲ್ ಹಾಗೂ ಮೆಟ್ರೋ ರೈಲ್ವೇ ಮತ್ತು ಕೆಎಂಆರ್‌ಸಿಎಲ್‌ನ
ಇತರ ಹಿರಿಯ ಅಧಿಕಾರಿಗಳು ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಲು ಮಹಾಕರನ್‌ನಿಂದ ರೇಕ್ ನಂ. ಎಂಆರ್ -612 ರ ಹೌರಾ ಮೈದಾನಕ್ಕೆ ಪ್ರಯಾಣಿಸಿದರು.
ಕೋಲ್ಕತ್ತಾ ಮೆಟ್ರೋದ ಸಿಪಿಆರ್‌ಒ ಕೌಸಿಕ್ ಮಿತ್ರಾ ಅವರು ಹೇಳುವಂತೆ, "ಮೆಟ್ರೋ ರೈಲಿಗೆ ಇದು ಐತಿಹಾಸಿಕ ಕ್ಷಣವಾಗಿದೆ.
ಅನೇಕ ಅಡೆತಡೆಗಳನ್ನು ದಾಟಿದ ನಂತರ ಹೂಗ್ಲಿ ನದಿಯ ಕೆಳಗೆ ಮೆಟ್ರೋ ರೈಲಿನ ಸಂಚಾರ ಯಶಸ್ವಿಯಾಗಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಹಾಗೂ ಅದರ ಉಪನಗರಗಳಲ್ಲಿರುವವರಿಗೆ ಈ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.
ಇದು ನಿಜಕ್ಕೂ ಭಾರತೀಯ ರೈಲ್ವೇಯಿಂದ ಬಂಗಾಳದ ಜನರಿಗೆ ಹೊಸ ವರ್ಷದ ವಿಶೇಷ ಕೊಡುಗೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಹೌರಾ ಮೈದಾನದಿಂದ ಎಸ್‌ಪ್ಲೇನೇಡ್‌ವರೆಗೆ ಪ್ರಾಯೋಗಿಕ ಓಡಾಟ ಶೀಘ್ರದಲ್ಲೇ ಆರಂಭವಾಗಲಿದ್ದು,
ಮುಂದಿನ ಏಳು ತಿಂಗಳ ಕಾಲ ಪ್ರಯೋಗಿಕ ಸಂಚಾರ ನಡೆಯಲಿದೆ. ನಂತರ ಎಲ್ಲ ಪರಿಶೀಲನೆಗಳ ಮುಕ್ತಾಯವಾದ ಮೇಲೆ ಇದು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮತ್ತು ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಯ ನಂತರ,
ವಾಣಿಜ್ಯ ಸೇವೆ ಪ್ರಾರಂಭವಾಗುತ್ತದೆ. ಹೌರಾ ಮೈದಾನದಿಂದ ಎಸ್‌ಪ್ಲೇನೇಡ್‌ವರೆಗಿನ 4.8 ಕಿಮೀ ಭೂಗತ ವಿಭಾಗದಲ್ಲಿ
ಮೆಟ್ರೋ ರೇಕ್‌ನ ನಿಯಮಿತ ಚಾಲನೆಯು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.
ಹೌರಾ ಮೈದಾನ-ಎಸ್ಪ್ಲಾನೇಡ್ ವಿಸ್ತರಣೆಯು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಒಂದು ಭಾಗವಾಗಿದೆ.
ಈ ವಿಸ್ತರಣೆಯ ಪ್ರಾರಂಭದ ನಂತರ, ಪೂರ್ವ-ಪಶ್ಚಿಮ ಕಾರಿಡಾರ್ 12 ನಿಲ್ದಾಣಗಳನ್ನು ಹೊಂದಿರುತ್ತದೆ
- ಹೌರಾ ಮೈದಾನ್, ಹೌರಾ ಸ್ಟೇಷನ್ ಕಾಂಪ್ಲೆಕ್ಸ್, BBD ಬಾಗ್ (ಮಹಾಕರನ್), ಎಸ್ಪ್ಲನೇಡ್, ಸೀಲ್ದಾ,
ಫೂಲ್ಬಗನ್, ಸಾಲ್ಟ್ ಲೇಕ್ ಸ್ಟೇಡಿಯಂ, ಬೆಂಗಾಲ್ ಕೆಮಿಕಲ್, ಸಿಟಿ ಸೆಂಟರ್, ಸೆಂಟ್ರಲ್ ಪಾರ್ಕ್,
ಕರುಣಾಮೋಯಿ , ಮತ್ತು ಸಾಲ್ಟ್ ಲೇಕ್ ಸೆಕ್ಟರ್-ವಿ ಪ್ರದೇಶವನ್ನು ಒಳಗೊಂಡಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.