News

ಹೊಸ ಸುದ್ಧಿ ಬಿಸಿ ಸುದ್ಧಿ ಗರ್ಮಾ ಗರಂ ಸುದ್ಧಿ! ತಂಪಾದ ವಾತಾವರಣದಲ್ಲಿ ಬೆಚ್ಚನೆಯ ಗಾಡಿಯ ಸುದ್ಧಿ!

13 December, 2021 1:58 PM IST By: Ashok Jotawar
Union Minister Nitin Gadkari

ನೀರಿನಿಂದ ಓಡಲಿದೆ. ಇನ್ನು ಮುಂದೆ ಬರುವ ಕಾರು! ಹೌದು ಸರಿಯಾಗಿ ಓದಿದಿರಿ. ಇನ್ನುಮುಂದೆ ಕಾರು ಪೆಟ್ರೋಲ್ ಮತ್ತು ಡೀಸೆಲ್ ನಿಂದ ಓಡಲ್ಲ ಕಾರು ಓಡಲು ನೀರು ಸಾಕು!

ಮೊದಲಿಗೆ ನನಗು ಕೂಡ ಶಾಕ್ ಆಯಿತು, ಆದರೆ ನೀರು ಅಂದರೆ ಹಸಿರು ಹೈಡ್ರೋಜನ್, ಅಂದರೆ ಈ ಒಂದು ಪ್ರಕ್ರಿಯೆಯಲ್ಲಿ ನೀರನ್ನು ಎಲೆಕ್ಟ್ರೋಲಿಸಿಸ್ ಎಂಬ ಪ್ರಕ್ರಿಯೆ ಯಿಂದ ಅದರಲ್ಲಿರುವ 2 ಹೈಡ್ರೋಜೆನ್  ಮೊಲಿಕ್ಯುಲ್ ಅನ್ನು ಒಡೆದು 1 ಹೈಡ್ರೋಜನ್ ಮತ್ತು ಒಂದು ಆಕ್ಸಿಜನ್ ಆಗಿ ಮಾಡುತ್ತಾರೆ. ಇದರಿಂದ ಇದು ಸ್ವಲ್ಪ ರಿಯಾಕ್ಟಿವ್ ಆಗುತ್ತೆ.

ಮತ್ತು ಇದನ್ನು  ಇಂಧನವಾಗಿ  ಕೂಡ ಉಪಯೋಗಿಸ ಬೊಹುದು. ಮತ್ತು ಇದನ್ನು  ಇಂಧನವಾಗಿ ಉಪಯೋಗಿಸಿದರೆ ವಾಯುಮಾಲಿನ್ಯ, ಪ್ರಕೃತಿ ಮಾಲಿನ್ಯ, ಮತ್ತು ಗ್ಲೋಬಲ್ ವಾರ್ಮಿಂಗ್ ನಂತಹ ಪ್ರಕ್ರಿಯೆಗಳು ಆಗಲ್ಲ. ಕಾರಣ ಈಗ ಭಾರತದಲ್ಲಿ ಈ ಒಂದು ಗ್ರೀನ್ ಹೈಡ್ರೋಜನ್ ನಿಂದ ಚಲಿಸುವ ಕಾರನ್ನು ಗ್ರಾಹಕರಿಗೆ ಉಪಯೋಗಿಸಲು ಮಾರುಕಟ್ಟೆಗೆ ತರಲಿದ್ದಾರೆ, ಎಂದು ಖುದ್ದಾಗಿ  ಕೇಂದ್ರೀಯ ಮಂತ್ರಿ ನಿತಿನ್ ಗಡ್ಕರಿ ಯವರು ಹೇಳಿದ್ದಾರೆ.ಮತ್ತು ಈ ಒಂದು ಕಾರು ದೇಶದ ರಾಜಧಾನಿಯಾದ ನವ ದೆಹಲಿಗೆ ಬಂದಿದೆ. ಮತ್ತುಈ ಒಂದು ಕಾರನ್ನು ಖುದ್ದಾಗಿ ನಿತಿನ್ ಗಡ್ಕರಿ ಯವರೇ ಚಲಿಸಿ ಜನರಿಗೆ ವಿಶ್ವಾಸ ಮೂಡಿಸಲಿದ್ದಾರೆ.

ದೇಶದಲ್ಲಿ ಎಲ್ಲರು ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯಿಂದ ಬೇಸತ್ತು ಹೋಗಿದ್ದಾರೆ. ಮತ್ತು ಎಲ್ಲರಲ್ಲೂ ಒಂದೇ ಮಾತು ಗಾಡಿ ಏನಾದರೂ ನೀರು  ಮತ್ತು ಮುಂತಾದ ಪದಾರ್ಥಗಳಿಂದ  ಓಡುವ ಹಾಗೆ ಇದ್ದಿದರೆ ಎಷ್ಟು ಚನ್ನಾಗಿ ಇರುತಿತ್ತು? ಆದರೆ ಇವಾಗ ಈ ಒಂದು ಕಾರು ಈ ಒಂದು ಮಾತನ್ನು ಸತ್ಯ ಮಾಡಿದೆ.ಪ್ರಸ್ತುತ ಈ ಒಂದು ಕಾರು ಮಾಡಲು ಮೂಲ ಉದ್ದೇಶ ಏನಪ್ಪಾ ಅಂದರೆ ಹೆಚ್ಚುತ್ತಿರುವ ಪ್ರದೂಷಣೆ.

ಮತ್ತು ಇದರಿಂದ ಎಲ್ಲ ಕಡೆ ಒಳ್ಳೆಯ ವಾತಾವರಣ ಆಗುವುದುಎಂದು ಹೇಳ ಲಾಗುತ್ತಿದೆ ಮತ್ತು ಈ ತರಹದ ಕಾರುಗಳನ್ನು  ಭಾರತ ಸರ್ಕಾರ ಪ್ರಮೋಟ್ ಮಾಡಲಿದೆ ಎಂದು ನಿತಿನ್ ಗಡ್ಕರಿಯವರು ಹೇಳಿದ್ದಾರೆ.

ನೋಡೋಣ ಈ ಒಂದು ಕಾರಿನ ಮೊತ್ತ ಎಷ್ಟು ?ಇದಕ್ಕೆ ಬಳಿಕೆಯಾಗುವ ಇಂಧನದ ಮೊತ್ತ ಎಷ್ಟು ? ಮತ್ತು ಇದರ ಮೆಂಟೆನೆನ್ಸ್ ಏನು ಎಂಬೋದು ಕಾರು ಪೂರ್ಣ ಪ್ರಮಾಣದಲ್ಲಿ ದೇಶದಲ್ಲಿ ಜಾರಿಯಾದಾಗ ತಿಳಿಸುತ್ತೇವೆ.

ಇನ್ನಷ್ಟು ಓದಿರಿ : ಭಾರತದಲ್ಲಿ ಪ್ರತಿಭೆಗಳಿಗೇನು ಕಮ್ಮಿ ಇಲ್ಲ! ಇಂಜಿನಿಯರಿಂಗ್ ವಿದ್ಯಾರ್ಥಿ 5 ಆಸನದ ವಿದ್ಯುತ್ ಕಾರನ್ನು ತಯಾರಿಸಿದ್ದಾನೆ !

                      ಸಿಲೆಂಡರ್ ಪ್ಪೋ ಸಿಲೆಂಡರ್! ಸಣ್ಣ ಸಣ್ಣ ಸಿಲೆಂಡರ್, ಪುಟ್ಟ ಪುಟ್ಟ ಗ್ಯಾಸ್ ಸಿಲೆಂಡರ್!

                      ಕರ್ನಾಟಕ ಸರ್ಕಾರದಿಂದ ಇನ್ನು ಮುಂದೆ ರೈತರಿಗೆ ನೆರೆ ಪರಿಹಾರ ಧನ ರಿಲೀಸ್ ಆಗಲಿದೆ!