News

ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನಕ್ಕಾಗಿ ಆರ್ಜಿ ಆಹ್ವಾನ

13 April, 2023 2:31 PM IST By: Maltesh
National Overseas Scholarship ForSC ST Students

1..ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನಕ್ಕಾಗಿ ಆರ್ಜಿ ಆಹ್ವಾನ

2.. ರಾಜಸೀಟು ಉದ್ಯಾನವನ; ಜಿಫ್‍ಲೈನ್ ಸಾಹಸ ಕ್ರೀಡೆಗೆ  ಚಾಲನೆ

3.. ಆಸ್ತಿ ತೆರಿಗೆಯ ಮೇಲೆ  ಶೇ.5% ರಷ್ಟು ವಿನಾಯಿತಿ

4.. ಉಚಿತ ಟೈಲರಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನ

5.. ರಾಜ್ಯ ವಿಧಾನಸಭೆ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಶುರು

6.. ಬೆಸಿಗೆ ರಜೆ ಹಿನ್ನೆಲೆ; ವಿಶೇಷ ರೈಲುಗಳ ವ್ಯವಸ್ಥೆಗೆ ರೈಲ್ವೆ ಇಲಾಖೆ ಕ್ರಮ

7. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತಿನ ನೀರಿಕ್ಷೆಯಲ್ಲಿ ರೈತರು

ರಾಷ್ಟ್ರೀಯ ಸಾಗರೋತ್ತರ ಅಧ್ಯಯನ ಮಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪ್ರಬುದ್ದ ಯೋಜನೆಯಡಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ    ಪರಿಶಿಷ್ಟ ಜಾತಿ, ಅಲೆಮಾರಿ ಹಾಗೂ ಅರೇಅಲೆಮಾರಿ ಬುಡಕಟ್ಟುಗಳು ಮತ್ತು ಭೂರಹಿತ ಕೃಷಿ ಕಾರ್ಮಿಕರು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳ ವರ್ಗದ ಅಭ್ಯರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಹಾಗೂ ಪಿ.ಹೆಚ್.ಡಿ ಅಧ್ಯಯನ ಮಾಡಲು ಕೇಂದ್ರ ವಲಯ ಯೋಜನೆ ಆದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಜಾರಿಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲೆಯ ಅಪರ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಧಾರವಾಡ ಹಾಗೂ ಸಂಬಂಧಿಸಿದ ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರುಗಳ ಕಚೇರಿ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಸ್ಯಗಳ ಲೋಕ, ಪ್ರಾಕೃತಿಕ ಸೌಂದರ್ಯ ಒಳಗೊಂಡಿರುವ ಮಡಿಕೇರಿಯ ರಾಜಸೀಟು ಉದ್ಯಾನವನದಲ್ಲಿ ಜಿಫ್‍ಲೈನ್ ಸಾಹಸ ಕ್ರೀಡೆಯು ಸೇರ್ಪಡೆಯಾಗಿದೆ.  ನಗರದ ರಾಜಸೀಟು ಉದ್ಯಾನವನದಲ್ಲಿ ಜಿಫ್‍ಲೈನ್ ಸಾಹಸ ಕ್ರೀಡೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ಮಂಗಳವಾರ ಚಾಲನೆ ನೀಡಿದರು.  ಸ್ವತಃ ತಾವೇ ಜಿಫ್‍ಲೈನ್‍ನಲ್ಲಿ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡು ಗಮನಸೆಳೆದರು. ಬಳಿಕ ಜಿಫ್‍ಲೈನ್ ಸಾಹಸ ಕ್ರೀಡೆಯ ಅನುಭವ ಹಂಚಿಕೊಂಡ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಒಟ್ಟು 310 ಮೀಟರ್ ಉದ್ದದ ಜಿಫ್‍ಲೈನ್ ಅಳವಡಿಸಲಾಗಿದೆ ಎಂದರು.

2023- 24 ನೇ ಸಾಲಿನ ಆಸ್ತಿ ತೆರಿಗೆಯನ್ನು  ಏ.01 ರಿಂದ 30 ರೊಳಗಾಗಿ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5% ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಆಸ್ತಿ ಮಾಲೀಕರು ಶೇ.5% ರ ವಿನಾಯಿತಿಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ತೆರಿಗೆಯನ್ನು ಏ.01 ರಿಂದ 30 ರವರೆಗೆ ಶೇ. 5% ರಿಯಾಯಿತಿಯಲ್ಲಿ, ಮೇ.01 ರಿಂದ ಜೂ.30 ರವರೆಗೆ ದಂಡ ರಹಿತವಾಗಿ ಹಾಗೂ ಜು.01 ರಿಂದ ಮಾಸಿಕ ಶೇ.2% ರಂತೆ ದಂಡ ವಿಧಿಸಿ ಪಾವತಿ ಮಾಡಲಾಗುವುದು.

ಬಳ್ಳಾರಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ  ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 24 ರಿಂದ ತರಬೇತಿಗಳು ಆರಂಭವಾಗಲಿದ್ದು, 20 ರಿಂದ 45 ವಯೋಮಿತಿಯೊಳಗಿನ ನಿರುದ್ಯೋಗಿ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

PM Kisan 14th Installment: ಪಿ.ಎಂ ಕಿಸಾನ್ 14ನೇ ಕಂತು: ಈ ರೈತರಿಗೆ ಮಾತ್ರ 2000 ರೂ., ಕಾರಣವೇನು ?

ಊಟ ವಸತಿಯೊಂದಿಗೆ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ. 35 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.. ಹೆಚ್ಚಿನ ಮಾಹಿತಿಗಾಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ಡಿ.ಐ.ಸಿ ಕಾಂಪೌಂಡ್ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ  ನಿರ್ದೇಶಕರ ಕಚೇರಿ  ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರಾದ ಪ್ರವೀಣ್ ಬಸವರಾಜು ಅವರು ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಇಂದಿನಿಂದ ಅಧಿಕೃತ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ. ಇಂದು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಆನಂತರ  ಇಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಉಮೇದುವಾರಿಕೆ ಸಲ್ಲಿಸಲು ಒಟ್ಟು ಏಳು ದಿನ ಅವಕಾಶ ಇರುತ್ತದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ ೨೦ ಕಡೆಯ ದಿನವಾಗಿದೆ. ಏಪ್ರಿಲ್ ೨೧ ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ ೨೪ ಕಡೆಯ ದಿನವಾಗಿದೆ.

ಬೇಸಿಗೆ ಋತುವಿನಲ್ಲಿ ಪ್ರಯಾಣಿಕರ ಸುಗಮ ಮತ್ತು ಅನುಕೂಲಕರ ಪ್ರಯಾಣಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು 217 ವಿಶೇಷ ರೈಲುಗಳ ಸಂಚಾರ ನಡೆಸಲು ನಿರ್ಧರಿಸಿದೆ.  ರೈಲ್ವೈ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದು, ರೈಲುಗಳು ಸುಮಾರು 4 ಸಾವಿರದಷ್ಟು ಸಂಚಾರ  ನಡೆಸಲಿವೆ. ಈ ರೈಲುಗಳು   ದೇಶದಾದ್ಯಂತದ  ಪ್ರಮುಖ ರೈಲ್ವೆ  ನಿಲ್ದಾಣ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಿವೆ.. 217  ರೈಲುಗಳ ಪೈಕಿ 69 ರೈಲುಗಳು ನೈಋತ್ಯ ವಲಯದಲ್ಲಿ ಸಂಚರಿಸಲಿದ್ದು ಅಂದಾಜು 1768 ಸಂಚಾರ ನಡೆಸಲಿವೆ.