ಸಿನಿಮಾಗೆ ಕೊಡಮಾಡುವ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ಚಿಚೋರ್’ ಅತ್ಯುತ್ತಮ ಹಿಂದಿ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿದೆ.
2019 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಇದಾಗಿದ್ದು ಮಣಿ ವರ್ಣಿಕಾ `ದಿ ಕ್ವೀನ್ ಆಫ್ ಝಾನ್ಸಿ’ ಮತ್ತು ಪಂಗಾ ಚಿತ್ರದ ನಟನೆಗಾಗಿ ಕಂಗನಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯುತ್ತಮ ನಟ ಪ್ರಶಸ್ತಿಯನ್ನು ಮನೋಜ್ ಬಾಜಪೆಯಿ ಹಾಗೂ ಧನುಷ್ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಚಿತ್ರಸ್ನೇಹಿ ರಾಜ್ಯವೆಂಬ ಹೆಗ್ಗಳಿಕೆಗೆ ಸಿಕ್ಕಿಂ ಪಾತ್ರವಾಗಿದೆ. ಹೇಮಂತ್ ಗಾಬಾ ಅವರ ಆನ್ ಇಂಜಿನಿಯರ್ಡ್ ಡ್ರೀಮ್ ಚಿತ್ರಕ್ಕೆ ನಾನ್ ಫೀಚರ್ ವರ್ಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ
ಕನ್ನಡದ ಅಕ್ಷಿಗೆ ಪ್ರಶಸ್ತಿ:
ಮನೋಜ್ ಕುಮಾರ್ ನಿರ್ದೇಶನದ `ಅಕ್ಷಿ’ ಅತ್ಯುತ್ತಮ ಕನ್ನಡ ಚಿತ್ರ ಪುರಸ್ಕಾರಕ್ಕೆ ಭಾಜನವಾಗಿದೆ.
ಪಿ.ಆರ್ ರಾಮದಾಸ್ ನಾಯ್ಡು ಅವರು ಬರೆದ ಜಾಗತಿಕ ಸಿನೆಮಾ ವಿಕಾಸ ಪ್ರೇರಣೆ-ಪ್ರಭಾವ ಅತ್ಯುತ್ತಮ ಸಿನಿಮಾ ಪುಸ್ತಕ ವಿಭಾಗದಲ್ಲಿ ದ್ವಿತೀಯ ಪುರಸ್ಕಾರ ಪಡೆದಿದೆ.
ವೈಲ್ಡ್ ಕರ್ನಾಟಕ ಇಂಗ್ಲೀಷ್ ಸಾಕ್ಷ್ಯಚಿತ್ರಕ್ಕೆ ಡೇವಿಡ್ ಅಟೆನ್ ಬೋರೋ ಅವರು ನೀಡಿದ ಹಿನ್ನಲೆ ಧ್ವನಿ ಪುರಸ್ಕಾರಕ್ಕೆ ಭಾಜನವಾಗಿದೆ.
ಸೋಹಿನಿ ಚಟ್ಟೋಪಾಧ್ಯಾಯ ಅವರು ಅತ್ಯುತ್ತಮ ಸಿನಿಮಾ ವಿಮರ್ಶಕ ಪುರಸ್ಕಾರ ಪಡೆದಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆಯುತ್ತಿದ್ವು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನಿರ್ದಿಷ್ಟವಾಗಿ ವಿಳಂಬವಾಗಿತ್ತು.
ಪ್ರಶಸ್ತಿ ಪಟ್ಟಿ ಇಂತಿದೆ.
ಅತ್ಯುತ್ತಮ ಚಿತ್ರ : ಮರಕ್ಕರ್- ಅರಬಿಕಾಡಾಲಿಂಟೆ-ಸಿಂಹಂ
ಅತ್ಯುತ್ತಮ ನಟ: ಅಸುರನ್ ಸಿನಿಮಾಗಾಗಿ ಧನುಷ್, ಭೋನ್ಸಲೆ ಚಿತ್ರಕ್ಕಾಗಿ ಮನೋಜ್ ಬಾಜ್ಪೇಜಿ
ಅತ್ಯುತ್ತಮ ನಟಿ: ಪಂಕಾ ಮತ್ತು ಮಣಿಕರ್ಣಿಕಾ ಚಿತ್ರಕ್ಕಾಗಿ ನಟಿ ಕಂಗನಾ ರನೌತ್
ಅತ್ಯುತ್ತಮ ಸಹಾಯಕ ನಟ: ಸೂಪರ್ ಡಿಲಕ್ಸ್ ಚಿತ್ರಕ್ಕಾಗಿ ನಟ ವಿಜಯ್ ಸೇತುಪತಿ
ಅತ್ಯುತ್ತಮ ಸಹಾಯಕ ನಟಿ: ದಿ ತಷ್ಕೆಂಟ್ ಫೈಲ್ಸ್ ಗಾಗಿ ನಟಿ ಪಲ್ಲವಿ ಜೋಷಿಅತ್ಯುತ್ತಮ ನಿರ್ದೇಶಕ: ಬಹಟ್ಟರ್ ಹುರೈನ್ ಚಿತ್ರಕ್ಕಾಗಿ ಸಂಜಯ್ ಪುರಾನ್ ಸಿಂಗ್ ಚೌಹನ್
ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ
ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ
ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ
ಅತ್ಯುತ್ತಮ ತುಳು ಚಿತ್ರ: ಪಿಂಗಾರ
ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ
ಅತ್ಯುತ್ತಮ ತಮಿಳು ಚಿತ್ರ: ಅಸುರನ್
ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ
ಅತ್ಯುತ್ತಮ ಸಾಹಸ ನಿರ್ದೇಶನ ಅವನ್ನೇ ಶ್ರೀಮನ್ನಾರಾಯಣ
ಅತ್ಯುತ್ತಮ ಸಾಹಸ ನಿರ್ದೇಶನ ತೆಲುಗು: ಮಹರ್ಷಿ
ಅತ್ಯುತ್ತಮ ನಿರ್ದೇಶಕ : ತಮಿಳಿನ ವೆಟ್ರಿಮಾರನ್ ಚಿತ್ರದ ನಿರ್ದೇಶಕ ಅಸುರನ್
ಅತ್ಯತ್ತಮ ಸಾಮಾಜಿಕ ಕಳಕಳಿ ಚಿತ್ರ: ಆನಂದಿ ಗೋಪಾಲ್
ಅತ್ಯುತ್ತಮ ಸಂಗೀತ ನಿರ್ದೇಶ: ವಿಶ್ವಾಸಂ ಚಿತ್ರಕ್ಕಾಗಿ ಡಿ ಇಮಾನ್
ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ನಿರೂಪಣೆಗಾಗಿ ಸರ್ ಡೇವಿಡ್ ಅಟೆನ್ಬರೋ ಅವರ ವೈಲ್ಡ್ ಕರ್ನಾಟಕ ಚಿತ್ರ ಪ್ರಶಸ್ತಿ ಪಡೆದಿದೆ