ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ಆವರಣದಲ್ಲಿ ಫೆ.8 ರಿಂದ 12ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ.
ಕೊರೊನಾ ಇರುವುದರಿಂದ ಈ ಬಾರಿ ಭೌತಿಕ ಹಾಗೂ ಆನ್‌ಲೈನ್ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಮೇಳಕ್ಕೆ ಭೌತಿಕವಾಗಿ 30 ಸಾವಿರ ರೈತರಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ಕೊರೊನಾ ಇರುವುದರಿಂದ ಹೆಚ್ಚು ಜನ ಸೇರದಂತೆ ತಡೆಯಲು ನೋಂದಣಿ ಕಡ್ಡಾಯ ಮಾಡಲಾಗಿದೆ.
‘ಪ್ರತಿದಿನ ಆರು ಸಾವಿರ ನೋಂದಾಯಿತ ರೈತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಎರಡು ಅವಧಿಗಳಲ್ಲಿ ಮೇಳ ವೀಕ್ಷಿಸಬಹುದು. ಹೊರ ರಾಜ್ಯಗಳಿಂದ ಬರುವ ರೈತರು ಮೇಳದಲ್ಲಿ ಭಾಗವಹಿಸಲು ಕೆಲವು ನಿಯಮಗಳನ್ನು ಪಾಲಿಸಬೇಕು. ಮೇಳದ ಬಗ್ಗೆ ಮೂರು ಭಾಷೆಗಳಲ್ಲಿ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ, ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಮೇಳದ ಬಗ್ಗೆ ಹೆಚ್ಚಿನ ವಿವರ ಹಾಗೂ ನೋಂದಣಿ ಮಾಡಿಕೊಳ್ಳಲು ಇಚ್ಛಿಸುವವರು ಸಂಸ್ಥೆಯ ವೆಬ್‌ಸೈಟ್ https://nhf2021.iihr.res.in ಅನ್ನು ಸಂಪರ್ಕಿಸಬಹುದು ಎಂದು ಐಐಎಚ್‌ಆರ್ ನಿರ್ದೇಶಕ ಎಂ.ಆರ್.ದಿನೇಶ್ ತಿಳಿಸಿದ್ದಾರೆ.
ತೋಟಗಾರಿಕೆ ಕ್ಷೇತ್ರದ ಸಂಸ್ಥೆಗಳು , ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳು,ಖಾಸಗಿರಂಗದ ಕೈಗಾರಿಕೆಗಳು, ಮಾರುಕಟ್ಟೆಗೆ ಸಂಬಧಿಸಿದ ಇಲಾಖೆ ಮುಂತಾದವರನ್ನು ಒಟ್ಟುಗೂಡಿಸಿ ಸಾಮಾನ್ಯವೇದಿಕೆಯನ್ನು ಕಲ್ಪಿಸಲಾಗಿದೆ.
ರೈತರಿಗೆ ಹೊಸತೇನು?
ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ಸಣ್ಣ ಗಾತ್ರದ ರುಚಿಕರ ಕಲ್ಲಂಗಡಿ, ರೋಗಗಳನ್ನು ತಡೆಯಬಲ್ಲ ಸೋರೆಕಾಯಿ ಬೆಳೆ, ಕರಬೂಜ, ಚಂದ್ರ ಮತ್ತು ಅನಂತ ಚಕೋತ ತಳಿಗಳು, ಗುಲಾಬಿ ಮತ್ತು ಚೆಂಡು ಹೂವಿನ ತಳಿಗಳ ಮಾಹಿತಿ ಮೇಳದಲ್ಲಿ ಸಿಗಲಿದೆ.
ಹಣ್ಣು, ಸೊಪ್ಪು, ತರಕಾರಿಗಳಲ್ಲಿರುವ ರಾಸಾಯನಿಕಗಳನ್ನು ತೊಲಗಿಸುವ ಅರ್ಕಾ ಹರ್ಬಿ ವಾಷ್, ಹಲಸಿನ ಜ್ಯೂಸ್, ಸಂಸ್ಥೆ ತಯಾರಿಸಿದ ಮಷ್ರುಮ್ ಚಟ್ನಿ, ಹಲಸಿನ ಖಾದ್ಯಗಳು, ಕುಕ್ಕೀಸ್, ಚಾಕೊಲೇಟ್‍ಗಳು, ಎಲ್ಲ ಬಗೆಯ ಹಣ್ಣಿನ ಸಸಿಗಳು, ಬೀಜೋತ್ಪಾದನಾ ಘಟಕಗಳಿಂದ ಸಿದ್ಧಪಡಿಸಿದ ತೋಟಗಾರಿಕೆ ಬೆಳೆಗಳ ಬೀಜಗಳೂ ಲಭ್ಯ.
ಮೇಳದ ವಿಶೇಷತೆಗಳು:
ಬಿಳಿ ತಿರುಳು ವಿಭಾಗದಲ್ಲಿ ಅರ್ಕಾಪೂರ್ಣ ಎಂಬ ಹೊಸ ಸೀಬೆತಳಿಯ ಪ್ರದರ್ಶನ.ಎಲೆ ಸುರಳಿ ರೋಗ ನಿರೋಧಕ ಮೆಣಸಿನಕಾಯಿ ಹೈಬ್ರೀಡ್ ಅರ್ಕಾಗಗನ್ ಪ್ರದರ್ಶನ. ಅಂಟು ಕಾಂಡರೋಗ ನಿರೋಧಕ ಸೋರೆಕಾಯಿ ಹೈಬ್ರೀಡ್ ಅರ್ಕಾಗಂಗಾ ಪ್ರದರ್ಶನ. ಹೆಚ್ಚಿನ ಕ್ಯಾರೋಟಿನ್ ಅಂಶದೊಂದಿಗೆ ಸಿಎಂಎಸ್ಆಧಾರಿತ ಚೆಂಡು ಹೂಹೈಬ್ರಿಡ್ಗಳ ಪ್ರದರ್ಶನ. ಆನ್ಲೈನ್ಸೀಡ್ಪೋರ್ಟಲ್ , ಎಸ್ಬಿ ಐಕೃಷಿ ಯೊನೋ ಅರ್ಪಣೆ. ಕೀಟನಾಶಕ ಮುಕ್ತ ಹಣ್ಣು ಮತ್ತು ತರಕಾರಿಗಳಿಗಾಗಿ ಸಾವಯುವ ಆಧಾರಿತ ಅರ್ಕಾಹರ್ಬಿವಾಶ್ ಉತ್ಪನ್ನದ ಪರಿಚಯ.
ವಸ್ತು ಪ್ರದರ್ಶನ:
ವಸ್ತುಪ್ರದರ್ಶನದಲ್ಲಿ ಪಾಲಿಹೌಸ್ ಗಳಪರಿಕರಗಳು, ಕೀಟನಾಶಕ, ನೀರಾವರಿವ್ಯವಸ್ಥೆ, ಬೆಳೆಗಳಬೆಳವಣಿಗೆ ಪ್ರಚೋದಕಗಳು, ಕೃಷಿನಿರ್ಯಾತಸೇವೆಗಳು, ಅಂಗಾಂಶ ಕೃಷಿವಿಧಾನ/ಗಿಡಗಳು, ಆಹಾರಸಂರಕ್ಷಣೆಹಾಗೂ ಪ್ಯಾಕೇಜಿಂಗ್ತಂತ್ರಜ್ಞಾನಗಳು, ಹೀಗೆ ಹಲವಾರು ತೋಟಗಾರಿಕೆ ಮತ್ತು ಕೃಷಿಯಲ್ಲಿ ಬಳಕೆಯಾಗುವಹಲವಾರು ವಸ್ತುಗಳಪ್ರದರ್ಶನಇರಲಿದೆ.
ಸೂಚನೆ : ಮಳಿಗೆಗಳನ್ನುಕಾಯ್ದಿರಿಸಲು ಇದೆ ತಿಂಗಳು 15 ನೆ ತಾರೀಖು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - * ಡಾ. ಎಂ. ವಿ. ಧನಂಜಯ್, ಪ್ರಧಾನವಿಜ್ಞಾನಿಗಳು ( ಭಾ. ತೋ. ಸಂ. ಸಂಸ್ಥೆ, ಬೆಂಗಳೂರು, ಡಾ.ಸಿ. ಕೆ. ನಾರಾಯಣ್, ಪ್ರಧಾನವಿಜ್ಞಾನಿ ಮತ್ತು ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ,ಬೆಸ್ಟ್ಹಾರ್ಟ್,ಬೆಂಗಳೂರು ಡಾ. ಸಿ. ಅಶ್ವಥ್ಪ್ರಧಾನವಿಜ್ಞಾನಿ ಮತ್ತುಪ್ರಧಾನಕಾರ್ಯದರ್ಶಿಎಸ್. ಪಿ. ಹೆಚ್ ಬೆಂಗಳೂರು , ದೂರವಾಣಿ ಸಂಖ್ಯೆಗಳು–9141704357, 9379079274, 9449002962, 9902522229 ಗೆ ಸಂಪರ್ಕಿಸಬಹುದು.