News

ಬೆಂಗಳೂರಿನಲ್ಲಿ ಇಂದಿನಿಂದ ಐದು ದಿನಗಳ ಕಾಲ ತೋಟಗಾರಿಕೆ ಮೇಳ- ಆನ್ ಲೈನ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ

08 February, 2021 9:13 AM IST By:
Horticulture fair

ಬೆಂಗಳೂರಿನ ಹೆಸರಘಟ್ಟ ದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌)ಯಲ್ಲಿ ಇಂದಿನಿಂದ ‘ರಾಷ್ಟ್ರೀಯ ತೋಟ ಗಾರಿಕೆ ಮೇಳ ನಡೆಯಲಿದೆ. ರೈತರಿಗೆ ತೋಟಗಾರಿಕೆ ಬೆಳೆಗಳ ನೂತನ ತಂತ್ರಜ್ಞಾನಗಳು ಹಾಗೂ ಕೃಷಿ ಸಂಬಂಧಿತ ಸಮಸ್ಯೆಗ ಳಗೆ ಪರಿಹಾರ ಸೂಚಿಸಲು ಈ ಮೇಳವು ಇಂದಿನಿಂದ ಚಾಲನೆಗೊಳ್ಳಲಿದೆ. ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್‌ ಚೌಧರಿ ಅವರು ಬೆಳಿಗ್ಗೆ 11 ಗಂಟೆಗೆ ಮೇಳವನ್ನು ಆನ್‌ ಲೈನ್‌ ಮೂಲಕ ಉದ್ಘಾಟಿಸಲಿದ್ದಾರೆ. ರೈತರಿಗೆ ಬೆಲೆ ಮಾಹಿತಿ ಒದಗಿಸುವ ಉದ್ದೇಶದಿಂದ ಸಂಸ್ಥೆ ಅಭಿವೃದ್ಧಿ ಪಡಿಸಿ ರುವ  ‘ಅರ್ಕಾ ವ್ಯಾಪಾರ್’ ಮೊಬೈಲ್ ಆ್ಯಪ್‌ಗೂ ಚಾಲನೆ ನೀಡಲಿದ್ದಾರೆ. 

ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಐಸಿಎಆರ್‌ ಸಂಸ್ಥೆಯ ಎ.ಕೆ.ಸಿಂಗ್ ಹಾಗೂ ತ್ರಿಲೋಚನ್ ಮಹಾಪಾತ್ರ, ಐಐ ಎಚ್‌ಆರ್‌ ನಿರ್ದೇಶಕ ಎಂ.ಆರ್.ದಿನೇಶ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಭೌತಿಕವಾಗಿ ಹೆಚ್ಚು ಜನರು ಸೇರುವುದನ್ನು ತಡೆಯಲು ಮೇಳಕ್ಕೆ ಬರುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ಸೂಚಿಸಿದೆ. ಮೇಳಕ್ಕೆ ಪ್ರತಿದಿನ ಆರು ಸಾವಿರ ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದೆ. 

ಮೇಳದಲ್ಲಿ ಏನೇನಿರಲಿದೆ:

 ಸಮಗ್ರ ತೋಟಗಾರಿಕೆ ಪದ್ಧತಿ, ಮಣ್ಣುರಹಿತ ಕೃಷಿ ವಿಧಾನ, ಟೆರೇಸ್ ಗಾರ್ಡನಿಂಗ್, ಹೊಸ ತಂತ್ರಜ್ಞಾನಗಳ ಪರಿಚಯ, ರೈತರ ಮನೆ ಬಾಗಿಲಿಗೆ ಬೀಜ ಪೂರೈಸುವ ‘ಸೀಡ್ ಪೋರ್ಟಲ್’, ನಗರ ಕೃಷಿಕರಿಗಾಗಿ ಹೈಡ್ರೋಪಾನಿಕ್ಸ್ ವಿಧಾನದಲ್ಲಿ ತರಕಾರಿ, ಹೂವು ಬೆಳೆಯುವ ಬಗ್ಗೆ ತರಬೇತಿ, ಕಡಿಮೆ ಶ್ರಮ ಹಾಗೂ ಹೆಚ್ಚು ಇಳುವರಿ ನೀಡುವಂತಹ ಹೂವು, ಹಣ್ಣು, ತರಕಾರಿ ಹೊಸ ತಳಿಗಳ ಪ್ರಾತ್ಯಕ್ಷಿಕೆಗಳು ಸಂಸ್ಥೆಯ ಆವರಣದಲ್ಲಿ ಸಜ್ಜುಗೊಂಡಿವೆ.

ಮೇಳಕ್ಕೆ ಭೇಟಿ ನೀಡಲು ಇಚ್ಛಿಸುವವರು https://nhf2021.iihr.res.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮೇಳದ ನೇರ ಪ್ರಸಾರವನ್ನು 

https://www.facebook.com/events/610609993112714 ಮೂಲಕ ವೀಕ್ಷಿಸಬಹುದು. ಅಥವಾ 

NHF2021 Website: https://nhf2021.iihr.res.in/ ಲಿಂಕ್ ಮೇಲೆ ಕ್ಲಿಕ್ ಮಾಡಿ. ನೇರವಾಗಿ ವೀಕ್ಷಿಸಬಹುದು.

‘ಮೇಳ ನಡೆಯುವ ಪ್ರತಿದಿನ ವಿವಿಧ ರಾಜ್ಯಗಳ ರೈತರು ಹಾಗೂ  ರೈತ ಉತ್ಪಾದಕ ಸಂಘಗಳ ಜತೆಗೆ ಸಂವಾದ ನಡೆಯಲಿದೆ. ರೈತರು ಮುಕ್ತವಾಗಿ ತಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮೇಳ ವೇದಿಕೆ ಕಲ್ಪಿಸಿದೆ.