News

ನರೇಗಾ: ಕರ್ನಾಟಕಕ್ಕೆ ಕನಿಷ್ಠ 127 ಕೋಟಿ ಮೊತ್ತ ಇನ್ನೂ ಬಾಕಿ!

26 December, 2022 2:29 PM IST By: Hitesh
Narega: At least 127 crore is still due for Karnataka!

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ವಂಚನೆ ಆಗಿರುವ 127 ಕೋಟಿ ಮೊತ್ತ ವಸೂಲಿ ಮಾಡುವುದು ಇನ್ನೂ ಬಾಕಿ ಉಳಿದಿದೆ.

ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಉತ್ತಮ ವರ: ಕೇಂದ್ರ ಸಚಿವ ಹೀಗಂದಿದ್ದೇಕೆ ಗೊತ್ತೆ?

ಹೌದು ನರೇಗಾ ಅಕ್ರಮಗಳಿಗೆ ಕಾರಣರಾದವರಿಂದ ಕರ್ನಾಟಕವು ಇನ್ನೂ ಕನಿಷ್ಠ 127 ಕೋಟಿ ಮೊತ್ತವನ್ನು ವಸೂಲಿ ಮಾಡುವುದು ಉಳಿದಿದೆ ಎಂದು ಸರ್ಕಾರ ಖಚಿತಪಡಿಸಿದೆ. 

2017 ರಿಂದ ನರೇಗಾ ಅಡಿಯಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆಯು 133.73 ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳನ್ನು ಪತ್ತೆ ಮಾಡಿದೆ. ಇದರ ವಿರುದ್ಧ ಅಧಿಕಾರಿಗಳು  21.89 ಕೋಟಿ ರೂಪಾಯಿ ಮೊತ್ತವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  

ರಾಜ್ಯದಲ್ಲಿ ಮೈಕೊರೆವ ಚಳಿ, ಬೆಂಗಳೂರು ಸೇರಿ ವಿವಿಧೆಡೆ ಮಳೆ!    

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ನರೇಗಾ ವಂಚನೆಯ ವಸೂಲಾತಿಗೆ ಸಂಬಂಧಿಸಿದಂತೆ ವರದಿ ಮಂಡಿಸಿದ್ದಾರೆ. ಅವರು ವರದಿ ಮಂಡಿಸಿದ ದತ್ತಾಂಶಗಳ ಪ್ರಕಾರ ಈ ಬಾಕಿಯು ಹಲವಾರು ವರ್ಷಗಳಷ್ಟು ಹಳೆಯದಾಗಿದೆ ಎನ್ನಲಾಗಿದೆ. ಅಲ್ಲದೇ ವಸೂಲಾತಿ ಪ್ರಮಾಣವು ಕೇವಲ 16% ಪ್ರತಿಶತ ಇದೆ.

2010 ರಿಂದ ಈ ಯೋಜನೆಯಡಿಯಲ್ಲಿ ಒಂಬುಡ್ಸ್‌ಮನ್‌ಗಳು 24 ಕೋಟಿ ರೂಪಾಯಿ ಮೌಲ್ಯದ ವಂಚನೆಗಳನ್ನು ಪತ್ತೆ ಮಾಡಿದ್ದಾರೆ. ಈ ರೀತಿ ಪತ್ತೆ ಮಾಡಿರುವ ಒಟ್ಟು ಪ್ರಮಾಣದಲ್ಲಿ 8.2 ಕೋಟಿ ರೂಪಾಯಿಯನ್ನು ಈಗಾಗಲೇ ವಸೂಲಿ ಮಾಡಲಾಗಿದೆ.  

ಉತ್ತರ ಭಾರತದಲ್ಲಿ ತೀವ್ರ ಚಳಿ; ದೆಹಲಿಯಲ್ಲಿ ಮೈಕೊರೆವ ಥಂಡಿ! 

ನರೇಗಾ ಅಡಿಯಲ್ಲಿ, ಸಾಮಾಜಿಕ ಲೆಕ್ಕಪರಿಶೋಧನೆಗಳು ಮತ್ತು ಒಂಬುಡ್ಸ್‌ಮೆನ್ ಆದೇಶಗಳಲ್ಲಿ ಕಡಿಮೆ ಗುಣಮಟ್ಟದ ಕಾಮಗಾರಿಗಳು, ನಕಲಿ ಬಿಲ್‌ಗಳು, ತಪ್ಪು ಬಿಲ್‌ಗಳು ಮತ್ತು ಮುಂತಾದವುಗಳನ್ನು ಅಕ್ರಮಗಳೆಂದು ಗುರುತಿಸಿ, ಅದರ ವೆಚ್ಚವನ್ನು ಮರುಪಡೆಯಬೇಕಾಗಿದೆ. ಸ್ಥಳೀಯ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗಿದ್ದು, ಕಾಮಗಾರಿಗೆ ಯಾರೇ ಹೊಣೆಗಾರರಾಗಿದ್ದರೋ ಅವರಿಂದಲೇ ವಸೂಲಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.

Narega: At least 127 crore is still due for Karnataka!

ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಸ್ವತಂತ್ರ ನಿರ್ದೇಶನಾಲಯದಿಂದ ಮಾಡಲಾಗುತ್ತದೆ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಮಾಡಿದ ಕೆಲಸಗಳನ್ನು ಆರ್ಥಿಕ ವರ್ಷದ ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಲೆಕ್ಕಪರಿಶೋಧನೆ ಮಾಡಲಾಗುತ್ತದೆ.  ಅಲ್ಲದೇ ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಕಾಮಗಾರಿಗಳನ್ನು ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಲೆಕ್ಕಪರಿಶೋಧನೆ ಮಾಡಲು ನಿರ್ಧರಿಸಲಾಗಿದೆ. 

Narega: At least 127 crore is still due for Karnataka!

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತ್ತೀಕ್‌ ಮಾತನಾಡಿ, ಕಾರ್ಯನಿರ್ವಾಹಕ ಅಧಿಕಾರಿಯ ಮಟ್ಟದಲ್ಲಿ ತಾತ್ಕಾಲಿಕ ಸಮಿತಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಇ) ಕಾಮಗಾರಿಗಳನ್ನು ವಿವರಿಸುತ್ತಾರೆ. ಪಿಡಿಒ ನೀಡುವ ವಿವರಣೆ ತೃಪ್ತಿ ತಂದರೆ ಪ್ರಕರಣಗಳನ್ನು ಕೈಬಿಡುವ ಅಧಿಕಾರ ಸಮಿತಿಗೆ ಇದೆ ಎಂದರು.