News

ನಂದಿನಿ ಹಾಲು, ಮೊಸರಿನ ದರ ಹೆಚ್ಚಳ!

14 November, 2022 3:24 PM IST By: Hitesh
Nandini milk, curd price increase!

ರಾಜ್ಯದಲ್ಲಿ ಹಾಲು ಮತ್ತು ಮೊಸರು ದರವನ್ನು ಹೆಚ್ಚಳ ಮಾಡಲು ಕೆಎಂಎಫ್‌ (KMF) ನಿರ್ಧರಿಸಿದೆ.

ಸಾಕು ನಾಯಿ ಕಚ್ಚಿದರೆ ಮಾಲೀಕರು ಕಟ್ಟಬೇಕು 10 ಸಾವಿರ ದಂಡ!

ಕಳೆದ ಒಂದು ತಿಂಗಳ ಹಿಂದೆಯೇ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಳ ಮಾಡುವ ಬಗ್ಗೆ ಸುಳಿವು ನೀಡಿತ್ತು.

ಇದೀಗ ಕೆಎಂಎಫ್‌ (KMF) ಪ್ರತಿ ಲೀಟರ್ ನಂದಿನಿ(Nandini) ಹಾಲಿನ ದರದಲ್ಲಿ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ.

BMTC: ವಿದ್ಯಾರ್ಥಿ ಪಾಸ್‌ ಇದ್ದರೆ ಟಿಕೆಟ್‌ ಕೊಡುವಂತಿಲ್ಲ!

ಸರ್ಕಾರವು ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮೇಲೆ 3 ರೂಪಾಯಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

ಈ ನಿರ್ಧಾರದಿಂದ ಸಮೃದ್ಧಿ ಹಾಲಿನ ದರ ಪ್ರತಿ ಲೀಟರ್‌ಗೆ 48 ರೂಪಾಯಿಯಿಂದ 51 ರೂಪಾಯಿಗೆ ಹೆಚ್ಚಳವಾಗಿದೆ.

ಟೋನ್ಡ್‌ ಹಾಲಿನ ದರವು 37ರಿಂದ 40 ರೂಪಾಯಿಗೆ, ಸ್ಪೆಷಲ್‌ ಹಾಲಿನ ದರ 43 ರೂಪಾಯಿರಿಂದ 46 ರೂಪಾಯಿ ಆಗಿದೆ.  

ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್‌ ಕಾರ್ಡ್‌”!

Nandini milk, curd price increase!

ಇನ್ನು ಮೊಸರಿನ ಬೆಲೆ 45 ರೂಪಾಯಿಯಿಂದ 48 ರೂಪಾಯಿಗೆ ಹೆಚ್ಚಳವಾಗಲಿದೆ. ಈ ಪರಿಷ್ಕೃತ ದರ ನಾಳೆಯಿಂದಲೇ ಅಂದರೆ ಮಂಗಳವಾರ (ನವೆಂಬರ್‌ 15) ಜಾರಿಗೆ ಬರಲಿದೆ.

ಪಂಜಾಬ್‌ನಲ್ಲಿ 4.1 ತೀವ್ರತೆಯ ಭೂಕಂಪನ!

ನಂದಿನಿ ಟೋನ್ಡ್‌ ಹಾಲಿನ ದರ ಪ್ರಸ್ತುತ 37 ರೂಪಾಯಿ ಇದ್ದು, ಪರಿಷ್ಕೃತ ದರ 40 ರೂಪಾಯಿ ದುಬಾರಿ ಆಗಿದೆ.

ಉಳಿದಂತೆ ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು, ಸ್ಪೆಷಲ್‌ ಹಾಲು, ಶುಭಂ, ಹೋಮೋಜಿನೈಸ್ಡ್‌ ಸ್ಟ್ಯಾಂಡಡೈಸ್ಡ್ ಹಲಿನ ದರದಲ್ಲಿಯೂ ಹೆಚ್ಚಳವಾಗಿದೆ.