News

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ಧಿ: ಸ್ಮಾರ್ಟ್ ಕಾರ್ಡ್‌ಗಳ ಅವಧಿ 10 ವರ್ಷ ಹೆಚ್ಚಳ

23 September, 2020 8:07 AM IST By:

ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈ ಮೊದಲು ಒಂದು ವರ್ಷಕ್ಕೆ ಸೀಮಿತವಾಗಿದ್ದ ಸ್ಮಾರ್ಟ್ ಕಾರ್ಡ್ ಗಳ ಅವಧಿಯನ್ನು 10 ವರ್ಷಕ್ಕೆ ವಿಸ್ತರಿಸಿದೆ.  ಅಂದರೆ 2030ರ ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ.

ಅವಧಿ ಮುಗಿದಿರುವ ಸ್ಮಾರ್ಟ್ ಕಾರ್ಡಗಳನ್ನು ಪುನರ್ ಸಕ್ರೀಯಗೊಳಿಸಲು ಸದ್ಯ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲವೆಂದು ನಿಗಮ ತಿಳಿಸಿದೆ. ಕಾರ್ಡಗಳ ಊರ್ಜಿತತೆ ಮೊದಲು ಒಂದು ವರ್ಷವಿತ್ತು. ಇವುಗಳನ್ನು ಮೆಟ್ರೋ ನಿಲ್ದಾಣಗಳಲ್ಲಿಯೇ ಪುನರ್ ಕ್ರಿಯಗೊಳಿಸಬೇಕಿತ್ತು. ಈ ವೇಳೆ ದಟ್ಟಣೆ ಉಂಟಾಗುತಿತ್ತು ಮತ್ತು ಪ್ರಯಾಣಿಕರೂ ಅನೇಕ ಸಮಸ್ಯೆ ಎದುರಿಸಬೇಕಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಿಗಮ ಈ ನಿರ್ಧಾರ ಕೈಗೊಂಡಿದೆ

ಈ ಹಿಂದೆ ಪಡೆದ ಹಳೆ ಕಾರ್ಡ್ ಗಳಿಗೂ ಇದು ಅನ್ವಯವಾಗಲಿದ್ದು, ಹಳೆಯ ಹಾಗೂ ಹೊಸ ಕಾರ್ಡ್‌ ಅಷ್ಟೇ ಅಲ್ಲ ಇನ್ಮುಂದೆ ಪಡೆಯುವ ಹೊಸ ಸ್ಮಾರ್ಟ್ ಕಾರ್ಡ್‌ಗಳಿಗೂ ಇದು ಅನ್ವಯವಾಗಲಿದೆ.

ಕೊರೊನಾ ಲಾಕ್‍ಡೌನ್ ನಿಂದಾಗಿ ಸಾವಿರಾರು ಪ್ರಯಾಣಿಕರ ಕಾರ್ಡ್ ಗಳ ಅವಧಿ ಮುಗಿದಿದೆ. ಹೀಗಾಗಿ ಹೊಸ ಸ್ಮಾರ್ಟ್ ಕಾರ್ಡ್ ಖರೀದಿಸಿ ಪ್ರಯಾಣ ಮಾಡಬೇಕಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ಸ್ಮಾರ್ಟ್ ಕಾರ್ಡ್ ಗಳನ್ನೂ ಒಳಗೊಂಡಂತೆ ಎಲ್ಲ ಕಾರ್ಡ್‍ಗಳ ಅವಧಿಯನ್ನು 10 ವರ್ಷಕ್ಕೆ ವಿಸ್ತರಿಸಲಾಗಿದೆ.

ಸ್ಮಾರ್ಟ್ ಕಾರ್ಡಗಳ ರಿಚಾರ್ಜಿಗೂ ವಿವಿಧ ಆಯ್ಕೆಗಳನ್ನು ನೀಡಿರುವ ಬಿಎಂಆರ್.ಸಿಎಲ್, ನಿಗಮದ ವೆಬ್ಸೈಟ್, ನೆಟ್ ಬ್ಯಾಂಕಿಂಗ್ ಮತ್ತು ನಿಗಮದ ಮೊಬೈಲ್ APP ಮೂಲಕವೂ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬಹುದು ಎಂದು ಹೇಳಿದೆ.