News

ಮುದ್ರಾ ಯೋಜನೆ:4 ಸಾವಿರ ರೂ ಅಪ್ಲಿಕೇಶನ್‌ ಫೀ ಕಟ್ಟಿದ್ರೆ ₹10 ಲಕ್ಷ ಸುಲಭ ಸಾಲ..!ಸರ್ಕಾರ ಹೇಳಿದ್ದೇನು..?

15 September, 2022 11:29 AM IST By: Maltesh
Mudra Scheme PIB fact Check

ಕೇವಲ 4500 ರೂಪಾಯಿಯನ್ನು ಪಾವತಿಸಿದರೆ ಸಾಕು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿ ಸಾಲವನ್ನು ಸುಲಭವಾಗಿ ಪಡೆಯಬಹುದು. ಹೌದು ಈ ರೀತಿ ಸಂದೇಶವೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ವೈರಲ್‌ ಪೋಸ್ಟ್‌ಗಳಲ್ಲಿ 4500 ಫೀ ನೀಡಿದರೆ 10 ಲಕ್ಷ ರೂಪಾಯಿಯನ್ನು ಮುದ್ರಾ ಲೋನ್‌ನಲ್ಲಿ ಕೊಡಿಸುವುದಾಗಿ ಮುದ್ರಿಸಲಾಗಿದೆ.

ಈ ಪೋಸ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವೂ ಕಾಣಿಸುತ್ತಿದೆ. ಮುದ್ರಾ ಯೋಜನೆಯಡಿ ಪರಿಶೀಲನೆ ಮತ್ತು ಸಂಸ್ಕರಣಾ ಶುಲ್ಕ 4500 ಪಾವತಿಸಿ 10 ಲಕ್ಷ ರೂಪಾಯಿ ಸಾಲ ಪಡೆಯಬಹುದು ಎಂದು ಪತ್ರದಲ್ಲಿ ಹೇಳಿಕೊಳ್ಳಲಾಗುತ್ತಿದೆ.

ಪಿಎಂ ಕಿಸಾನ್‌ ಬಿಗ್‌ ಅಪ್‌ಡೇಟ್‌: 12ನೇ ಕಂತು ಯಾವಾಗ ರಿಲೀಸ್‌ ಆಗುತ್ತೆ..?

ವೈರಲ್ ಸಂದೇಶದ ಸತ್ಯವೇನು?

ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಮುದ್ರಾ ಯೋಜನೆಗೆ ಸಂಬಂಧಿಸಿದಂತೆ ವೈರಲ್ ಸಂದೇಶವನ್ನು ತನಿಖೆ ಮಾಡಿದೆ. ಇದರಲ್ಲಿ 10 ಲಕ್ಷ ರೂಪಾಯಿ ಸಾಲ ಪಡೆದಿರುವ ಹಕ್ಕು ಸಂಪೂರ್ಣ ನಕಲಿ ಎಂಬುದು ಪತ್ತೆಯಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ತಂಡವು ವೈರಲ್ ಪತ್ರವನ್ನು ನಕಲಿ ಎಂದು ಕರೆದಿದೆ. ಹಣಕಾಸು ಸಚಿವಾಲಯವು ಅಂತಹ ಯಾವುದೇ ಪತ್ರವನ್ನು ನೀಡಿಲ್ಲ ಎಂದು ಪಿಐಬಿ ಮಾಹಿತಿ ನೀಡಿದೆ.

ಜನರನ್ನು ತಮ್ಮ ಬಲೆಗೆ ಬೀಳಿಸಲು ಸೈಬರ್ ಅಪರಾಧಿಗಳು ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಲ್ಪಸ್ವಲ್ಪ ತಪ್ಪಿ ಜನರ ಖಾತೆಯಿಂದ ಲಕ್ಷ, ಕೋಟಿ ರೂ. ಮಾಯವಾಗುತ್ತಿದೆ. ಸಾಮಾಜಿಕ ಮಾಧ್ಯಮ ವೈರಲ್ ಸಂದೇಶಗಳು ಅಥವಾ ಸುದ್ದಿಗಳ ಸಂಪೂರ್ಣ ಸತ್ಯಾಸತ್ಯತೆ ದೃಢೀಕರಿಸುವವರೆಗೆ ನಂಬಬೇಡಿ. ತಮ್ಮ ವೈಯಕ್ತಿಕ ಮಾಹಿತಿ ಅಥವಾ ತಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಜನರಿಗೆ ಯಾವಾಗಲೂ ಮನವಿ ಮಾಡಲಾಗಿದೆ.

ಯುವಜನತೆಗೆ ಉದ್ಯೋಗ ಮಾಡಲು ಇಲ್ಲಿದೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ 25 ಲಕ್ಷ ಸಾಲ..ಅರ್ಜಿ ಸಲ್ಲಿಸುವುದು ಹೇಗೆ?

ಏನಿದು “ಮುದ್ರಾ ಯೋಜನೆ”..?

ಸ್ವಉದ್ಯೋಗ ಮಾಡ್ಬೇಕು ಅಂತ ಆಸಕ್ತಿ ಹೊಂದಿರುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ “ಮುದ್ರಾ” ಬ್ಯಾಂಕ್ ಸ್ಥಾಪಿಸಿ, ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತಿದೆ. ಈ ಸಾಲ ನೀಡೋ ಯೋಜನೆಯನ್ನು ಮೊತ್ತದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.

ಫಲಾನುಭವಿಯ ಅರ್ಹತೆ:

ಪ್ರಧಾನಮಂತ್ರಿ ಮುದ್ರಾಯೋಜನೆಯಡಿ ಉತ್ಪಾದನೆ, ವ್ಯಾಪಾರ, ಸೇವಾ ವಲಯ, ಕೃಷಿಯೇತರ ವಾಣಿಜ್ಯ ಚಟುವಟಿಕೆ ಕೈಗೊಳ್ಳುವವರಿಗೆ ಸಾಲ ನೀಡಲಾಗುತ್ತಿದೆ. ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಎಲ್ಲಾ ಸಾರ್ವಜನಿಕವಲಯದ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳೂ ಕೂಡ ಮುದ್ರಾದ ಅಡಿಯಲ್ಲಿ ಬರುತ್ತವೆ.

Aadhaar Card: ಇನ್ಮುಂದೆ ಆಧಾರ್‌ ಇಲ್ಲದೇ ಸಬ್ಸಿಡಿಗಳು ಇಲ್ಲ! ಕೇಂದ್ರ ಸರ್ಕಾರದ ಮಹತ್ವದ ಸುತ್ತೋಲೆ..