ಕೊರೋನಾ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಂಬಲ ಬೆಲೆಯ ಮೂಲಕ ಒಳ್ಳೆ ಸುದ್ದಿ ಸಿಗುವ ಲಕ್ಷಣಗಳು ಎದ್ದು ಕಾಣುತ್ತಿದೆ, ಕಲ್ಬುರ್ಗಿ ಬಿಜಾಪುರ ಪ್ರದೇಶಗಳಲ್ಲಿ ಮುಖ್ಯ ಬೆಳೆಯಾದ ತೊಗರಿ ಬೆಳೆಗೆ ಈ ಬಾರಿ ಎಂಟು ಸಾವಿರ ರೂಪಾಯಿಗಳವರೆಗೆ ಬೆಂಬಲ ಬೆಲೆ ಸಿಗುವ ಸಾಧ್ಯತೆ ಇದೆ.
ಆಹಾರ ಸಚಿವರಾದಂತಹ ಉಮೇಶ್ ಕತ್ತಿಯವರು ಮೊನ್ನೆ ನೀಡಿದಂತಹ ಸಂದರ್ಶನದಲ್ಲಿ ಅವಸರ ಮಾಡಿ ತೊಗರಿ ಮಾರಬೇಡಿ, ಸರ್ಕಾರದ ವತಿಯಿಂದ ₹8000 ಬೆಂಬಲ ಬೆಲೆಯಲ್ಲಿ ಖರೀದಿಸಲು ಚಿಂತನೆಗಳು ನಡೆದಿವೆ,ಎಂದು ಸಚಿವರಾದ ಉಮೇಶ್ ಕತ್ತಿ ಅವರು ಹೇಳಿದ್ದಾರೆ.
ಬೆಂಬಲ ಬೆಲೆ ಯೋಜನೆಯು ರೈತರ ಬೆಳೆಗೆ ಒಂದು ಒಳ್ಳೆಯ ದರವನ್ನು ನೀಡುವ ಯೋಜನೆಯಾಗಿದೆ ಹಾಗೂ ದಿಢೀರ್ ಬೆಲೆ ಕುಸಿತದಿಂದ ಕಾಪಾಡುವ ಒಂದು ಯೋಜನೆ