News

ತೊಗರಿ ಬೆಳೆಗಾರರಿಗೆ ಬಂಪರ್ -6000 ರೂಪಾಯಿ ಪ್ರತಿ ಕ್ವಿಂಟಲ್ ಗೆ

12 February, 2021 1:42 PM IST By:

ರೈತರು ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿರುವಾಗಲೇ ಸರ್ಕಾರ ರೈತರಿಗೆ ಬಂಪರ್ ಸುದ್ದಿ ನೀಡಿದೆ, ಬೆಂಬಲ ಬೆಲೆ ಯೋಜನೆಯಡಿಯಲ್ಲಿ 6000 ರೂಪಾಯಿ ಪ್ರತಿ ಕ್ವಿಂಟಲ್ ಗೆ ನೀಡುವ ಮೂಲಕ ಖರೀದಿ ಮಾಡಲು ನಿರ್ಧರಿಸಿದೆ.

ಪ್ರಮುಖ ಬೆಳೆಯಾದ ತೊಗರಿಗೆ ಪ್ರತಿ ಕ್ವಿಂಟಲ್ ಗೆ 6000 ರೂಪಾಯಿ ನೀಡಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರವು ಎಫ್ ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಅನುಮತಿ ನೀಡಿದೆ. ಕಲಬುರ್ಗಿ, ವಿಜಯಪುರ, ಯಾದ್ಗೀರ್, ಬೀದರ್,ರಾಯಚೂರ , ಬಳ್ಳಾರಿ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಖರೀದಿಗೆ ಅನುಮತಿ ನೀಡಿದೆ.

 ಬೆಳಗಾವಿ ಹಾಗೂ ಚಿತ್ರದುರ್ಗ ಜಿಲ್ಲೆಯ ಟಾಸ್ಕ್ ಫೋರ್ಸ್ ಗಳ ಸಮಿತಿಯ ಶಿಫಾರಸ್ಸಿನ ಮೇರಿಗೆ ಆ ಜಿಲ್ಲೆಗಳಲ್ಲೂ ಕೂಡ ಖರೀದಿಯನ್ನು ಪ್ರಾರಂಭಿಸಿದೆ.ಈ ಎರಡು ಜಿಲ್ಲೆಗಳಲ್ಲಿ ರೈತರ ನೋಂದಣಿಯನ್ನು ಫೆಬ್ರವರಿ 28 ರ ವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ಮಾರ್ಚ್ 14 ರವರೆಗೆ ವಿಸ್ತರಿಸಲಾಗಿದೆ.

ಪ್ರತಿ ಎಕರೆಗೆ 7.5 ಕ್ವಿಂಟಲ್ ಹಾಗೂ ಒಬ್ಬ ರೈತನಿಗೆ ಗರಿಷ್ಟ 20 ಕ್ವಿಂಟಲ್ ನಿಗದಿಪಡಿಸಿದೆ.ತೊಗರಿಗೆ ಕೆಂಪು ಗ್ರಾಂ, ತುರ್, ಅಥವಾ ಗುಂಗೊ ಅವರೆಕಾಳು ಎಂದೂ ಕರೆಯಲ್ಪಡುತ್ತದೆ.ಇದನ್ನು ದಕ್ಷಿಣ ಏಷ್ಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇವಿಸಲಾಗುತ್ತದೆ ಮತ್ತು ಇದು ಭಾರತೀಯ ಉಪಖಂಡದ ಜನಸಂಖ್ಯೆಗೆ ಪ್ರೋಟೀನ್‌ನ ಪ್ರಮುಖ ಮೂಲವಾಗಿದೆ