News

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಂಎಸ್ ಧೋನಿ!

16 August, 2020 11:57 AM IST By:

ದೇಶದ ಅಪ್ರತಿಮ ವಿಕೆಟ್‌ ಕೀಪರ್ (Wicket keeper), ಮ್ಯಾಚ್‌ ಫಿನಿಷರ್  ಹೆಲಿಕಾಪ್ಟರ್‌ ಶಾಟ್‌ನ ಸರದಾರ, ಕೂಲ್ ಕ್ಯಾಪ್ಟನ್ (cool captain) ಎಂದೇ ಹೆಸರಾದ ಮಹೇಂದ್ರಸಿಂಗ್ ಧೋನಿ (Dhoni) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ  ವಿದಾಯ ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ (quit international cricket) ಹೇಳುತ್ತಿರುವುದಾಗಿ  ತಮ್ಮ ಇನ್ ಸ್ಟಾಗ್ರಾಮ್  ಖಾತೆಯಲ್ಲಿ  ಪ್ರಕಟಿಸಿದ್ದಾರೆ.  ಇಷ್ಟು ವರ್ಷಗಳ ಕಾಲ  ತಮಗೆ ಬೆಂಬಲ ನೀಡಿದ ಅಭಿಮಾನಿಗಳು, ಕುಟುಂಬ ಸದಸ್ಯರು  ಮತ್ತು ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಹಿಂದೆಯೇ  ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಧೋನಿ ಟಿ -೨೦,  ಏಕದಿನ  ತಂಡಗಳಲ್ಲಿ  ಆಡುತ್ತಿದ್ದರು. ಧೋನಿ ಅವರ ಅನಿರೀಕ್ಷಿತ ನಿರ್ಧಾರ ಇಡೀ ಕ್ರೀಡಾ ಜಗತ್ತನ್ನು ಅಚ್ಚರಿಗೊಳಿಸಿದೆ. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಎಂಎಸ್ ಧೋನಿ ಅವರು ಐಪಿಎಲ್ ನಲ್ಲಿ ಮಾತ್ರ ಆಡಲಿದ್ದಾರೆ.

ಬಹುಶಃ ಕ್ರಿಕೆಟ್‌ ಇತಿಹಾಸದಲ್ಲಿ ಧೋನಿಯಷ್ಟು ತಾಳ್ಮೆ ಹಾಗೂ ತಣ್ಣಗಿನ ಸ್ವಭಾವದ ನಾಯಕರು ಮತ್ತೂಬ್ಬರು ಇರಲಿಕ್ಕಿಲ್ಲ. ಅಂಗಳದಲ್ಲಿ ಅವರು ಸಿಡುಕಿನಿಂದ ವರ್ತಿಸದೆ ಎಲ್ಲವನ್ನೂ ಬಹಳ ನಾಜೂಕಿನಿಂದ ನಿಭಾಯಿಸುತ್ತ ಯಶಸ್ಸು ಕಂಡವರು. ಪರಿಸ್ಥಿತಿ ಎಷ್ಟೇ ಜಟಿಲವಾಗಿರಲಿ, ಅವರಲ್ಲಿ ಒತ್ತಡದ ಲವಲೇಶವೂ ಕಾಣುತ್ತಿರಲಿಲ್ಲ. ಹೀಗಾಗಿ ಧೋನಿ “ಕೂಲ್‌ ಕ್ಯಾಪ್ಟನ್‌’ ಎಂದೇ ಹೆಸರುವಾಸಿಯಾಗಿದ್ದಾರೆ.

ಧೋನಿ ಅಂದಮೇಲೆ ಅವರ ಕೇಶ ವಿನ್ಯಾಸ ಸುದ್ದಿಯಾಗಲೇ ಬೇಕು. ಈ ಒಂದೂವರೆ ದಶಕದ ಕ್ರಿಕೆಟ್‌ ಬದುಕಿನುದ್ದಕ್ಕೂ ಅವರು ಗಮನ ಸೆಳೆಯವ ಹೇರ್‌ ಸ್ಟೈಲ್‌ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸುತ್ತಲೇ ಬಂದಿದ್ದರು. ಅಭಿಮಾನಿಗಳೂ ಇದನ್ನು ಅನುಸರಿಸುತ್ತ ಬಂದರು.

ಆರಂಭಿಕ ದಿನಗಳ ಧೋನಿ ಉದ್ದನೆಯ ತಲೆಗೂದಲನ್ನು ಹೊಂದಿದ್ದರು. ಅದು ಭುಜದ ತನಕ ಇಳಿದು ಬರುತ್ತಿತ್ತು. ಇದಕ್ಕೆ ಸ್ಫೂರ್ತಿ ಯಾರು ಗೊತ್ತೇ? ಗೆಳೆಯನೂ ನಟನೂ ಆಗಿರುವ ಜಾನ್‌ ಅಬ್ರಹಾಂ. ಅವರು “ಧೂಮ್‌’ ಚಿತ್ರದಲ್ಲಿ ಇಂಥದೇ ಹೇರ್‌ಸ್ಟೈಲ್‌ (Hairstyle) ಹೊಂದಿದ್ದರು. ಧೋನಿಗೆ ಇದು ಹುಚ್ಚು ಹಿಡಿಸಿತ್ತು. ಹೀಗಾಗಿ ಅವರು “ಧೂಮ್‌ವಾಲಾ ಧೋನಿ’ ಎನಿಸಿದರು.

ಎಂಎಸ್ ಧೋನಿ ಅವರು 350 ಏಕದಿನ ಪಂದ್ಯಗಳನ್ನಾಡಿದ್ದು ಪಂದ್ಯವೊಂದರಲ್ಲಿ 183 ರನ್ ಬಾರಿದ್ದಾರೆ. ಇನ್ನು ಮಹತ್ವದ ಐಸಿಸಿ ಟೂರ್ನಿಗಳಾದ ಏಕದಿನ ವಿಶ್ವಕಪ್ (World cup), ಟಿ20 ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ ಗೆಲ್ಲಿಸಿಕೊಟ್ಟ ಕೀರ್ತಿ ಧೋನಿಯವರದ್ದಾಗಿದೆ.

2017ರಲ್ಲಿ ಧೋನಿ ತಮ್ಮ ನಾಯಕ ಸ್ಥಾನಕ್ಕೆ ವಿದಾಯ ಘೋಷಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಟೀಂ ಇಂಡಿಯಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು.