News

ಆಗಸ್ಟ್-ಸೆಪ್ಟೆಂಬರಲ್ಲೂ ಉತ್ತಮ ಮಳೆ

01 August, 2020 2:21 PM IST By:

ಮುಂಗಾರು ಹಂಗಾಮಿನ ಎರಡನೇ ಭಾಗದಲ್ಲೂ ದೇಶಾದ್ಯಂತ ಉತ್ತಮ ಮಳೆ (Rain) ಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಾಲ್ಕು ತಿಂಗಳ ಮುಂಗಾರು ಋುತುವಿನ ಎರಡನೇ ಅವಧಿಯ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ವಾಡಿಕೆ ಪ್ರಮಾಣದ ಮಳೆಯಾಗಲಿದೆ.

ಸಾಮಾನ್ಯವಾಗಿ ಶೇ. 96 ರಿಂದ 100 ಪ್ರಮಾಣದಲ್ಲಿ ಮಳೆ ಬಿದ್ದರೆ ಅದನ್ನು ವಾಡಿಕೆಯ ಮಳೆ ಎಂದು ವ್ಯಾಖ್ಯಾನಿಸಲಾಗುತ್ತದೆ.. ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ (August-setember) ನೈರುತ್ಯದಿಂದ ಬೀಸುವ ಮುಂಗಾರು ಮಾರುತಗಳು ದೀರ್ಘಕಾಲಿನ ಸರಾಸರಿಯ ಶೇ. 104 ರಷ್ಟು ಮಳೆಯಾಗಲಿದೆ ಎಂದು ಇಲಾಖೆ ಅಂದಾಜಿಸಿದೆ. ದೇಶಾದ್ಯಂತ ಆಗಸ್ಟ್‌ ಪೂರ್ತಿ ಶೇ.97ರಷ್ಟು ಮಳೆಯಾಗಲಿದೆ.

ಭಾರತದಲ್ಲಿ ಜೂನ್ 1 ರಿಂದ ಸೆ. 20ರ ಅವಧಿಯಲ್ಲಿ ಭಾರತದಲ್ಲಿ ಮುಂಗಾರು ಹಂಗಾಮು (Rainfall season) ಎಂದು ಗುರುತಿಸಲಾಗುತ್ತದೆ. ಆಗಸ್ಟ್ – ಸೆಪ್ಟೆಂಬರ್  ಎರಡನೇ ಭಾಗವಾಗಿರುತ್ತದೆ. ಈಗಾಗಲೇ ದೇಶದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ವಲಯ ಸಂತಸದಲ್ಲಿದೆ. ಈಶಾನ್ಯ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳು ಪ್ರವಾಹಕ್ಕೆ ತತ್ತರಿಸಿದ್ದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಇತರೆಡೆ ಉತ್ತಮ ಮಳೆಯಾಗಿದೆ.