News

ಈ ಊರಲ್ಲಿ ಮಂಗಗಳಿಗೂ ಇದೆ ಜಮೀನು !

19 October, 2022 3:07 PM IST By: KJ Staff

ಮಂಗಗಳನ್ನು ನಮ್ಮಲ್ಲಿ ಹಲವರು ಆಂಜನೇಯನಸ್ವಾಮಿ ದೇವರ ಸ್ವರೂಪ ಎಂದು ನಂಬುತ್ತಾರೆ. ಅಲ್ಲದೇ ಪೂಜಿಸುತ್ತಾರೆ.

ವಿಶೇಷವಾದ ಭಕ್ತಿ, ಗೌರವ ಸಮರ್ಪಣೆ ಮಾಡುವುದನ್ನೂ ಸಹ ನಾವು ನೋಡಬಹುದು.

ಮಂಗಗಳ ಹೆಸರಿನಲ್ಲಿ ಜಮೀನು ಮಾಡುವುದನ್ನು ಕೇಳಿದ್ದೀರ. ಹೌದು ಮಂಗಗಳಿಗೂ ಜಮೀನು ಇರುವುದು ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ಉಪ್ಲಾ ಗ್ರಾಮದಲ್ಲಿ.

ಕೇಂದ್ರೀಯ ಉಗ್ರಾಣಗಳಲ್ಲಿ 227 ಲಕ್ಷ ಮೆಟ್ರಿಕ್ ಟನ್ ಗೋಧಿ, 205 ಲಕ್ಷ ಮೆಟ್ರಿಕ್ ಟನ್ ಅಕ್ಕಿ !

ಮಹಾರಾಷ್ಟ್ರದ ಉಪ್ಪಾ ಒಂದಲ್ಲ ಎರಡಲ್ಲ ಬರೋಬ್ಬರಿ 32 ಎಕರೆ ಜಮೀನು ಮಂಗಗಳ ಹೆಸರಿನಲ್ಲಿ ನೋಂದಣಿಗೊಂಡಿದ್ದು, ಈ ಮೂಲಕ ಅವುಗಳು ವಿಶೇಷ ಗೌರವಕ್ಕೆ ಪಾತ್ರವಾಗಿವೆ. 

ಇತ್ತೀಚಿನ ದಿನಗಳಲ್ಲಿ ಭೂ ಜನರ ಭೂ ದಾಖಲೆಗಳೇ ನಿಖರವಾಗಿರುವುದಿಲ್ಲ. 
ಇಂತಹ ಸಂದರ್ಭದಲ್ಲಿ ಮಂಗಗಳ ಹೆಸರಿನಲ್ಲಿ ಭೂ ದಾಖಲೆ ಸೃಷ್ಟಿ ಆಗಿರುವುದು ಸಹಜವಾಗಿಯೇ ಅಚ್ಚರಿ ಮೂಡಿಸುತ್ತದೆ.

ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, ಸರ್ಕಾರ 50% ಸಬ್ಸಿಡಿ

 

ಇದು ಅಚ್ಚರಿಯಾದರೂ ನಿಜ. ಭೂ ದಾಖಲೆಗಳ ಪ್ರಕಾರ ಜಮೀನು ಮಂಗಗಳ ಹೆಸರಿನಲ್ಲಿರುವುದು ಸ್ಪಷ್ಟವಾಗಿದೆ. ಆದರೆ ಪ್ರಾಣಿಗಳ ಹೆಸರಿನಲ್ಲಿ ಯಾರು,

ಯಾವಾಗ ಈ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ  ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.    

ವಿಶೇಷವೆಂದರೆ ಮಂಗಗಳನ್ನು ಈ ಭಾಗದಲ್ಲಿ ಗ್ರಾಮದಲ್ಲಿ ನಡೆಯುವ ಎಲ್ಲಾ ಆಚರಣೆಗಳ ಅವಿಭಾಜ್ಯ ಅಂಗವಾಗಿದ್ದವು. ಈ ರೀತಿ ಜಮೀನು ಮಂಗಗಳ ಹೆಸರಿನಲ್ಲಿ ದಾಖಲಾಗಿರುವುದಕ್ಕೆ ಅದೂ ಸಹ ಕಾರಣವಾಗಿರುವ ಸಾಧ್ಯತೆ ಇದೆ. 

ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, ಸರ್ಕಾರ 50% ಸಬ್ಸಿಡಿ

 

 

 

ಅಲ್ಲದೇ ಗ್ರಾಮದಲ್ಲಿ ಮದುವೆ ಸಮಾರಂಭಗಳು ನಡೆದಾಗ ಮೊದಲಿಗೆ ಮಂಗಗಳಿಗೆ ಉಡುಗೊರೆ ನೀಡಿದ ಬಳಿಕ ಸಮಾರಂಭ ನಡೆಸಲಾಗುತ್ತಿತ್ತು.

ಈ ಪದ್ಧತಿಯನ್ನು ಈಗ ಎಲ್ಲರೂ ಅನುಸರಿಸುತ್ತಿಲ್ಲ. ಆದರೆ, ಕೆಲವರು ಇಂದಿಗೂ ಮಂಗಗಳಿಗೆ ವಿಶೇಷ ಆತಿಥ್ಯ ನೀಡುವುದಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.  

ಮಂಗಗಳ ಹೆಸರಿನಲ್ಲಿರುವ ಜಮೀನಿನಲ್ಲಿ ಅರಣ್ಯ ಇಲಾಖೆಯವರು ತೋಟಗಾರಿಕೆ ನಡೆಸಿದ್ದಾರೆ. ಈ ಜಾಗದಲ್ಲಿದ್ದ ಮನೆಯೊಂದು ಈಗ ಕುಸಿದು ಬಿದ್ದಿದೆ.