ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ ಹೆಮ್ಮೆಯ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023 ಕುರಿತು ಇದೀಗ ಒಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಡಿಸೆಂಬರ್ 6 ರಂದು ದೆಹಲಿಯ ಪುಸಾ ಮೈದಾನದಲ್ಲಿ ಮ MFOI ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅದೇ ದಿನ, ಅವರು MFOI ಕಿಸಾನ್ ಭಾರತ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದು ಭಾರತದಾದ್ಯಂತ ಪ್ರಯಾಣಿಸಲು ಮತ್ತು ರೈತರ ಖ್ಯಾತಿಯನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಲು ಶ್ರಮ ವಹಿಸುತ್ತಿದೆ. MFOI ಕಿಸಾನ್ ಭಾರತ್ ಯಾತ್ರೆಯು ಎಲ್ಲಾ ರೈತರಿಗೆ ಆಧುನಿಕ ಕೃಷಿ ಚಟುವಟಿಕೆಗಳು ಮತ್ತು ಪ್ರಗತಿಪರ ರೈತರು ಅನುಸರಿಸುವ ಕೃಷಿ-ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.
26,000 ಕಿಲೋಮೀಟರ್ ದೂರ, 4520 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಯಾತ್ರೆಯು ಭಾರತದಾದ್ಯಂತ ಸಂಚರಿಸಲು ಮತ್ತು ಲಕ್ಷಕ್ಕೂ ಹೆಚ್ಚು ರೈತರಿಗೆ ಮಿಲಿನೇಯರ್ ರೈತರ ಯಶಸ್ಸಿನ ಹಾದಿಯನ್ನು ತೋರಿಸಲು ಯೋಜಿಸಲಾಗಿದೆ.
ಇನ್ನು ಭಾರತದ ನಂಬರ್ 1 ಟ್ರ್ಯಾಕ್ಟರ್ ಕಂಪನಿ ಮಹೀಂದ್ರಾ ಟ್ರಾಕ್ಟರ್ಸ್ MFOI 2023 ಈವೆಂಟ್‌ಗೆ ಮುಖ್ಯ ಮತ್ತು ಶೀರ್ಷಿಕೆ ಪ್ರಾಯೋಜಕರಾಗಿ ಸೇರಿಕೊಂಡಿದೆ. . ಕಳೆದ ಜುಲೈನಲ್ಲಿ ದೆಹಲಿಯ ಚಾಣಕ್ಯಪುರಿಯಲ್ಲಿರುವ ಅಶೋಕ್ ಹೋಟೆಲ್‌ನಲ್ಲಿ ನಡೆದ MFOI ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಲೋಗೋ ಮತ್ತು ಟ್ರೋಫಿಯನ್ನು ಅನಾವರಣಗೊಳಿಸುವ ಭವ್ಯ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಪರ್ಶೋತ್ತಮ್ ರೂಪಾಲಾ ವಹಿಸಿದ್ದರು.
ದೇಶಾದ್ಯಂತ ರೈತರು / ಮೀನುಗಾರರು / ಜಾನುವಾರು ಪಾಲಕರು / ಇತರೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು 16 ವಿಭಾಗಗಳಲ್ಲಿ ಭಾರತದಾದ್ಯಂತ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. MFOI ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ, ಕೃಷಿ ಪ್ರದರ್ಶನವನ್ನು ಡಿಸೆಂಬರ್ 6, 7 ಮತ್ತು 8 ರಂದು ದೆಹಲಿಯ ಪುಸಾ ಮೈದಾನದಲ್ಲಿ ಆಯೋಜಿಸಲಾಗಿದೆ.
ಕೃಷಿ ಉದ್ಯಮಿಗಳ ಮಳಿಗೆಗಳು, ಕೃಷಿ ವಿಜ್ಞಾನಿಗಳ ನೇತೃತ್ವದ ವಿಚಾರ ಸಂಕಿರಣಗಳು, ಅನುಭವಿ ರೈತರೊಂದಿಗೆ ಚರ್ಚೆಗಳಂತಹ ವಿವಿಧ ಕಾರ್ಯಕ್ರಮಗಳು ಇರುವುದರಿಂದ ಸಂದರ್ಶಕರಾಗಿ ಭಾಗವಹಿಸಲು ಬಯಸುವವರು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಅದರ ಲಿಂಕ್ ಈ ಕೆಳಗೆ ನೀಡಲಾಗಿದೆ.