News

ಮೋದಿಗೆ ತಲೆಬಿಸಿಯಾದ ಈರುಳ್ಳಿ ಬೆಲೆ, ಕಾರಣವೇನು ?

11 January, 2024 2:59 PM IST By: Hitesh
ಈರುಳ್ಳಿ ಬೆಲೆ ದುಬಾರಿ

Onion Price ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಬರೋಬ್ಬರಿ ಒಂದು ತಿಂಗಳ ಅವಧಿ ನಿಷೇಧ ಹೇರಿದೆ.

ಇದರಿಂದ ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾಗುವ ಸಾಧ್ಯತೆ ಇದೆ.

ಈಚೆಗಷ್ಟೇ ಈರುಳ್ಳಿ ಬೆಲೆ ದುಬಾರಿಯಾಗಿ ಜನ ಪರದಾಡುವಂತಾಗಿತ್ತು.

ರೈತರಿಗೂ ಈರುಳ್ಳಿಯಿಂದ ನಿರೀಕ್ಷಿತವಾದ ಲಾಭವೇನು ಸಿಕ್ಕಿರಲಿಲ್ಲ. ಇದೀಗ ವಿವಿಧ ಕಾರಣಗಳಿಂದ ಈರುಳ್ಳಿ ಮತ್ತೆ

ದುಬಾರಿಯಾಗುವ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿವೆ.   

Onion Update News ಈರುಳ್ಳಿ ರಫ್ತು ನಿಷೇಧ ರೈತರಿಗೆ ಅತೃಪ್ತಿ; ಹಣಕಾಸಿನ ಸಮಸ್ಯೆಗೆ ಕಾರಣವಾಗಿದೆ.  

ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿ ಒಂದು ತಿಂಗಳಿಗೂ ಹೆಚ್ಚು ಸಮಯ ಆಗಿದೆ.

ಇದೇ ವೇಳೆ ರೈತರು 1200 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.

ಇದರಿಂದ ಈರುಳ್ಳಿ ಬೆಳೆಯುವ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈರುಳ್ಳಿ ಉತ್ಪಾದಿಸುವ ರೈತರು ರಫ್ತಿನಿಂದಾಗಿ ಭಾರಿ ನಷ್ಟ ಅನುಭವಿಸಿದ್ದಾರೆ.

ಇದರಿಂದ ಕೆಲ ಪ್ರದೇಶಗಳಲ್ಲಿ ಈರುಳ್ಳಿ ಬೆಳೆಗಾರರು ನೇರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕರ್ನಾಟಕದಲ್ಲಿ ಈಚೆಗೆ ಈರುಳ್ಳಿ ಬೆಲೆಯು ಭಾರೀ ಏರಿಕೆ (Onion Prices Rise) ಕಂಡಿತ್ತು.

ಇದಾದ ನಂತರದಲ್ಲಿ ಬೆಳ್ಳುಳ್ಳಿ ಬೆಲೆಯೂ ಏರಿಕೆಯಾಗಿದ್ದು ವರದಿ ಆಗಿತ್ತು.  

ಈರುಳ್ಳಿ ರಫ್ತು ನಿಷೇಧ ಯಾವಾಗ ಮಾಡಲಾಯಿತು ಮತ್ತು ಏಕೆ  ?

ಕೇಂದ್ರ ಸರ್ಕಾರವು ಬೆಲೆಯನ್ನು ನಿಯಂತ್ರಿಸುವ ಉದ್ದೇಶದಿಂದ 2023ರ ಡಿಸೆಂಬರ್ 8 ರಂದು ಈರುಳ್ಳಿ ರಫ್ತು (onion export ban) ನಿಷೇಧಿಸಿತು.

ಈರುಳ್ಳಿ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು.  

ಇದಾದ ಬಳಿಕ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಲೆಯ ಹತೋಟಿಗೆ ಬಂದಿದೆ.

ಆದರೆ, ಇದು ನೇರವಾಗಿ ರೈತರ ಮೇಲೆ ಪರಿಣಾಮ ಬೀರಿದೆ. ಇದು ಈರುಳ್ಳಿ ಬೆಳೆಗಾರರ ​​ಎಲ್ಲಾ  ಆರ್ಥಿಕ ಲೆಕ್ಕಾಚಾರಗಳನ್ನು ಹಾಳುಮಾಡಿದೆ.  

ರಫ್ತು ನಿಷೇಧಿಸುವ ನಿರ್ಧಾರ ತೆಗೆದುಕೊಂಡ ಈರುಳ್ಳಿ ಬೆಲೆ ಇಳಿಕೆ ಕಂಡಿದೆ.

ಈರುಳ್ಳಿ ಬೆಲೆ ಏರಿಕೆಯನ್ನು ತಪ್ಪಿಸುವ ಉದ್ದೇಶದಿಂದ ರಫ್ತು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಈ ಕ್ರಮವು ಬೆಲೆ ಇಳಿಕೆಗೆ ಕಾರಣವಾಗಿತ್ತು. ಇದೀಗ ಈರುಳ್ಳಿ  ಬೆಲೆ ಅರ್ಧದಷ್ಟು ಕುಸಿದಿದೆ ಎನ್ನುತ್ತಾರೆ

ಈರುಳ್ಳಿ ಉತ್ಪಾದಕ ರೈತ ಸಂದೀಪ್ ಮಗರ್.

 Onion Price ಈರುಳ್ಳಿ ರಫ್ತು ನಿಷೇಧದಿಂದಾಗಿ ನನಗೆ ಸುಮಾರು 3 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.

ಪ್ರತಿ ರೈತರ ಬಳಿ ಸರಾಸರಿ 200ರಿಂದ 250 ಕ್ವಿಂಟಲ್ ಬೇಸಿಗೆ ಈರುಳ್ಳಿ ದಾಸ್ತಾನು ಉಳಿದಿದೆ.

ಈರುಳ್ಳಿ ಮಾರಾಟದಿಂದ ರೈತರಿಗೆ 5 ಲಕ್ಷ ರೂ ಸಿಗಬೇಕಿತ್ತು. ಆದರೆ, ಅಲ್ಲಿ ಅವರಿಗೆ ಸಿಕ್ಕಿದ್ದು ಅದರಲ್ಲಿ ಅರ್ಧದಷ್ಟು ಅಂದರೆ 2.5 ಲಕ್ಷ ರೂ.

ಇದರಿಂದ ನನಗೂ ಸುಮಾರು 3 ಲಕ್ಷ ರೂಪಾಯಿ ಆರ್ಥಿಕ ನಷ್ಟವಾಗಿದೆ. ಇದು ನನ್ನ ಉದಾಹರಣೆ.  

ಎಲ್ಲಾ ಈರುಳ್ಳಿ ಉತ್ಪಾದಕ ರೈತರ ಸ್ಥಿತಿಯೂ ಇದೇ ಆಗಿದೆ.

ಜತೆಗೆ ಈ ವರ್ಷ ಈರುಳ್ಳಿ ಉತ್ಪಾದನೆಯೂ ಕಡಿಮೆಯಾಗಿದೆ. ಆದರೆ, ಈರುಳ್ಳಿಗೆ ಬೆಲೆ ಸಿಗುತ್ತಿಲ್ಲ.  

ಬೇಸಿಗೆ ಈರುಳ್ಳಿಯನ್ನು ದೀರ್ಘಕಾಲ ಸಂಗ್ರಹಿಸಲಾಗುವುದಿಲ್ಲ. ಹೀಗಾಗಿ ರೈತರಿಗೆ ಸದ್ಯ ಸಿಗುತ್ತಿರುವ ದರವೇ ಸಿಗುತ್ತಿದೆ.

ಈರುಳ್ಳಿಯನ್ನು ಅದೇ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಈರುಳ್ಳಿ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಬೇಸಿಗೆ ಈರುಳ್ಳಿಯನ್ನು ಸಂಗ್ರಹಿಸಿದರೂ, ನಾವು ಅದನ್ನು 15 ದಿನಗಳವರೆಗೆ ಸಂಗ್ರಹಿಸಬಹುದು.

ಇದರ ನಂತರ ಈರುಳ್ಳಿ ಮತ್ತೆ ಮೊಳಕೆಯೊಡೆಯಲು ಪ್ರಾರಂಭಿಸಿತು.

ಇದರಿಂದ ಈರುಳ್ಳಿಯ ಗುಣಮಟ್ಟ ಕಡಿಮೆಯಾಗಿ ಬೆಲೆಯೂ ಕುಸಿಯುತ್ತಿದೆ.

ಇದರಿಂದ ರೈತರು ಈಗಿರುವ ಬೆಲೆಗೆ ಈರುಳ್ಳಿ ಮಾರಾಟ ಮಾಡಬೇಕಾಗಿದೆ.

ಸದ್ಯ ಪ್ರತಿ ಕ್ವಿಂಟಾಲ್‌ಗೆ ಸರಾಸರಿ 1500 ರಿಂದ 1600 ರೂ. ಇದಲ್ಲದೇ ಜಿಲ್ಲೆಯಲ್ಲಿ ಈಗ ನೀರಿಗೆ ಹಾಹಾಕಾರ ಉಂಟಾಗಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ರೈತರು ಬರಗಾಲಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಜನವರಿ 12 ರಂದು ನಾಸಿಕ್‌ನಲ್ಲಿ ಪ್ರಧಾನಿ ಮೋದಿ

ಈರುಳ್ಳಿ ಬೆಲೆಯು ಇದೀಗ ಪ್ರಧಾನಿ ನರೇಂದ್ರ ಮೋದಿಗೂ ತಟ್ಟಿದೆ.

ಕರ್ನಾಟಕದ ನೆರೆಯ ರಾಜ್ಯವಾದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯನ್ನು ಈರುಳ್ಳಿ ಉತ್ಪಾದಿಸುವ ರೈತರ ಜಿಲ್ಲೆ ಎಂದು ಕರೆಯಲಾಗುತ್ತದೆ.

ಆದರೆ ಈರುಳ್ಳಿ ರಫ್ತು ನಿಷೇಧದ ಕೇಂದ್ರ ಸರ್ಕಾರದ ನಿರ್ಧಾರದಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜನವರಿ 12 ರಂದು ನಾಸಿಕ್‌ಗೆ ಬರಲಿದ್ದಾರೆ. ಹೀಗಾಗಿ ನಾಸಿಕ್‌ನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರಧಾನಿ ಮೋದಿಯವರು ಶಿರಸಿಗೆ ಹೋದಾಗಲೂ ಈರುಳ್ಳಿಯ ವಿಚಾರವೇ ಬಿಸಿಯಾಗಿತ್ತು.

ಆದರೆ, ಮೋದಿ ಶಿರಸಿಗೆ ಭೇಟಿ ನೀಡುವ ಎರಡು ದಿನ ಮುಂಚಿತವಾಗಿಯೇ ಮಾರುಕಟ್ಟೆ ಸಮಿತಿಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗತೊಡಗಿತು.

ಈಗ ಪ್ರಧಾನಿ ಮೋದಿ ಜನವರಿ 12 ರಂದು ಪ್ರವಾಸಕ್ಕೆ ಬರುತ್ತಿದ್ದಾರೆ.

ಮಾರುಕಟ್ಟೆ ಸಮಿತಿಯಲ್ಲಿ ಈರುಳ್ಳಿ ಬೆಲೆ ಕೊಂಚ ಏರಿಕೆಯಾಗಲಾರಂಭಿಸಿದೆ

ಎಂದು ರೈತರು ಮಾಹಿತಿ ನೀಡುತ್ತಿದ್ದಾರೆ. ಆದರೆ ಮೋದಿ ನಾಸಿಕ್ ಭೇಟಿ ಬಳಿಕ ಮಾರುಕಟ್ಟೆ ಸಮಿತಿಯಲ್ಲಿ ಮತ್ತೆ

ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.

 ಕರ್ನಾಟಕದಲ್ಲಿ ಬರ; ಧಾನ್ಯಗಳ ಬೆಲೆಯೂ ಏರಿಕೆ ಸಾಧ್ಯತೆ

ರಾಜ್ಯದಲ್ಲಿ ಕಂಡು ಕೇಳರಿಯದ ಬರ ಆವರಿಸಿದೆ. ಬರದಿಂದ ರಾಜ್ಯದಲ್ಲಿ ರೈತರು ಹಾಗೂ ಜನ ಸಂಕಷ್ಟದಲ್ಲಿ ಇದ್ದಾರೆ.

ಬರದಿಂದ ಮುಂದಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ನೀರು ಪೂರೈಕೆ ಮಾಡುವುದರಲ್ಲಿಯೂ ಏರುಪೇರಾಗುವ ಸಾಧ್ಯತೆ ಇದೆ.

ಇದೀಗ ಧಾನ್ಯಗಳು ಹಾಗೂ ಈರುಳ್ಳಿ ಸೇರಿದಂತೆ ವಿವಿಧ ತರಕಾರಿಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.

ಹಿಂಗಾರಿನಲ್ಲೂ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ.