News

MFOI 2024: ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ -2024, ಈಗಲೇ ನೋಂದಾಯಿಸಿ!

28 December, 2023 5:33 PM IST By: Hitesh
ರೈತರಿಗೆ ಸಿಹಿ ಸುದ್ದಿ

ಕೃಷಿ ಜಾಗರಣ ಸಂಸ್ಥೆ ಆಯೋಜಿಸುತ್ತಿರುವ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2024ಕ್ಕೆ ನೋಂದಣೆ ಈಗಾಗಲೇ ಪ್ರಾರಂಭವಾಗಿದೆ.

ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ ವಿನೂತನ ಆಲೋಚನೆಯ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ಕ್ಕೆ ಅದ್ಭುತವಾದ

ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯು “ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2024”ಕ್ಕೆ ಭರ್ಜರಿ ಸಿದ್ಧತೆಯನ್ನು ಪ್ರಾರಂಭಿಸಿದೆ.  

ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ ಪ್ರಶಸ್ತಿ 2024ಕ್ಕೆ ರೈತರು ಈಗ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಮಿಲಿಯನೇರ್‌ ಫಾರ್ಮರ್‌ ಪ್ರಶಸ್ತಿಗಳನ್ನು ಪಡೆಯಲು ನಿಮ್ಮ ಹೆಸರನ್ನು ಈಗಲೇ ನೋಂದಾಯಿಸಿ!

(MFOI) ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2024ರಲ್ಲಿ 100ಕ್ಕೂ ಹೆಚ್ಚು ವಿಭಾಗಗಳನ್ನು ಹೊಂದಿದೆ

ಎಂದು ಹೇಳಲು ನಾವು ಹರ್ಷಿಸುತ್ತೇವೆ. ಈ ಬಾರಿಯ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾದಲ್ಲೂ ದೇಶದ ವಿವಿಧ ರಾಜ್ಯಗಳಿಂದ

ಸಾವಿರಾರು ಜನ ರೈತರು ಭಾಗವಹಿಸಲಿದ್ದಾರೆ.  

ದೇಶದ ವಿವಿಧ ರಾಜ್ಯಗಳಿಂದ ರೈತ ಪ್ರಶಸ್ತಿ ನಾಮನಿರ್ದೇಶನ ಪ್ರಕ್ರಿಯೆ ಅಧಿಕೃತವಾಗಿ ಇದೀಗ ಪ್ರಾರಂಭವಾಗಿದೆ.  

ಮಹೀಂದ್ರಾ ಟ್ರಾಕ್ಟರ್ ಪ್ರಾಯೋಜಿಸಿರುವ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ 2024ರ ಎರಡನೇ

ಆವೃತ್ತಿಗೆ ಕೃಷಿ ಜಾಗರಣ ನಾಮನಿರ್ದೇಶನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ರ ಪ್ರಶಸ್ತಿಗಳ ಅದ್ಭುತ ಯಶಸ್ಸಿನ ನಂತರ, MFOI ನಂತಹ ಕಾರ್ಯಕ್ರಮವನ್ನು

ಆಯೋಜಿಸುವಂತಹ ಯಾವುದೇ ವಲಯದಲ್ಲಿ ಹಿಂದೆಂದೂ ನೋಡಿರದ ಉನ್ನತ ಮಟ್ಟದ ಶ್ರೇಷ್ಠತೆಯನ್ನು ಕೃಷಿ ಭರವಸೆ ನೀಡುತ್ತದೆ. 

ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾದ ಶ್ರೀಮಂತರ ರೈತ ಪ್ರಶಸ್ತಿ ವಿಜೇತರು

ನೋಂದಣಿ ಮಾಡಿಕೊಳ್ಳುವುದು ಹೇಗೆ ?

ರೈತರು ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2024ಕ್ಕೆ ಸುಲಭವಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು  www.millionairefarmer.in ಕ್ಲಿಕ್ ಮಾಡಿದರೆ, ಸಂಪೂರ್ಣ ಮಾಹಿತಿ ಸಿಗಲಿದೆ.

ರೈತರು ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.  

MFOI ಪ್ರಶಸ್ತಿ ಪ್ರದಾನ 2024ರಲ್ಲಿ ಯಾವಾಗ ?

MFOI ಅವಾರ್ಡ್ಸ್ 2023 ರ ಮೊದಲ ಯಶಸ್ಸಿನ ನಂತರ, ಈಗ MFOI ಪ್ರಶಸ್ತಿಗಳು 2024 ಅನ್ನು ಕೃಷಿ ಜಾಗರಣ ಮಾಧ್ಯಮವು ಆಯೋಜಿಸುತ್ತಿದೆ.

ಕರ್ನಾಟಕದ ಕೋಲಾರದ ಪ್ರಗತಿಪರ ರೈತ ಮಹಿಳೆ ಎ.ವಿ ರತ್ನಮ್ಮ ಅವರಿಗೆ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ ಪ್ರಶಸ್ತಿ ಪ್ರದಾನ

2023ರ ಮೊದಲ ಅಧಿವೇಶನದಲ್ಲಿ MFOI ಅನ್ನು ಮೂರು ದಿನಗಳವರೆಗೆ ಆಯೋಜಿಸಲಾಗಿತ್ತು.

ಇದೀಗ 2024ರಲ್ಲಿ  MFOI ಪ್ರಶಸ್ತಿ ಪ್ರದಾನ ಹಾಗೂ ಕಾರ್ಯಕ್ರಮವನ್ನು ಐದು ದಿನಗಳವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ.

ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ ಪ್ರಶಸ್ತಿ ಪ್ರದಾನ 2024ರ ದಿನಾಂಕವು ಡಿಸೆಂಬರ್ 1 ರಿಂದ ಡಿಸೆಂಬರ್ 5 ರವರೆಗೆ ನಡೆಯಲಿದೆ.

ಇಲ್ಲಿ, ರೈತರಿಗೆ ಪ್ರಶಸ್ತಿ ಪ್ರದಾನ ಮಾತ್ರವಲ್ಲದೇ ಅವರ ಪ್ರತಿ ಪಯಾಣವನ್ನು MFOI ವೇದಿಕೆಯಲ್ಲಿ ಅನಾವರಣಗೊಳಿಸಲಾಗುತ್ತದೆ.

ಅಲ್ಲದೇ ದೇಶದ ದೊಡ್ಡ ರೈತರ ಜ್ಞಾನವು ಸಣ್ಣ ರೈತರೊಂದಿಗೆ ತಮ್ಮ ಅನುಭವವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  

ರೈತರು, ಕೃಷಿ ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ಉದ್ಯಮದ ನಾಯಕರು ಒಳನೋಟಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು

ಚರ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಭವಿಷ್ಯದಲ್ಲಿ ಭಾರತದ ಕೃಷಿ ಕ್ಷೇತ್ರವನ್ನು ಮುನ್ನಡೆಸುವ ಅವಕಾಶಗಳನ್ನು ಅನ್ವೇಷಿಸಲು ಒಟ್ಟುಗೂಡುತ್ತಾರೆ.

MFOI ಪ್ರಶಸ್ತಿ 2023ಗೆ ಅದ್ಧೂರಿ ಪ್ರತಿಕ್ರಿಯೆ  

MFOI ಪ್ರಶಸ್ತಿ 2023ಗೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಕೃಷಿ ಉತ್ಸಾಹಿಗಳು, ಉದ್ಯಮದ ಮುಖಂಡರು, ಜಾಗತಿಕ

ರಾಯಭಾರಿಗಳು ಮತ್ತು ಗುಜರಾತ್‌ನ ರಾಜ್ಯಪಾಲ ಆಚಾರ್ಯ ದೇವವ್ರತ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಕೇಂದ್ರ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ,  ಪರ್ಶೋತ್ತಮ್ ರೂಪಾಲಾ, ಭಾರತದ ಮಾಜಿ ಮುಖ್ಯ

ನ್ಯಾಯಮೂರ್ತಿ ಮತ್ತು ಕೇರಳದ ಮಾಜಿ ರಾಜ್ಯಪಾಲರಾದ ಪಿ ಸದಾಶಿವಂ ಸೇರಿದಂತೆ ಹಲವರು ಇದ್ದರು.