News

ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023 ಪ್ರಶಸ್ತಿ ಪ್ರದಾನ ಅದ್ಧೂರಿ ಶುಭಾರಂಭ!

06 December, 2023 10:37 AM IST By: Hitesh
ರೈತರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಸಂಪಾದಕ ಎಂ ಸಿ ಡೊಮಿನಿಕ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ ಡೊಮಿನಿಕ್‌

ಕೃಷಿಜಾಗರಣವು ರೈತರು ಸಹ ಶ್ರೀಮಂತರಾಗಬಹುದು. ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದನ್ನು ನಂಬುತ್ತದೆ. ದೇಶಕ್ಕೆ ಅನ್ನ ನೀಡುವ ಕೈಗಳನ್ನು ಗುರುತಿಸುವ ಪ್ರಯತ್ನ ನಮ್ಮದಾಗಿದೆ. ಇದೇ ಕಾರಣಕ್ಕಾಗಿ ಮಿಲಿಯೇನರ್‌ ಫಾರ್ಮರ್‌ ಆಫ್‌ ಇಂಡಿಯಾ 2023ಅನ್ನು ಆಯೋಜಿಸಲಾಗಿದೆ. ಇದಕ್ಕೆ ಮಹೀಂದ್ರ ಟ್ರಾಕ್ಟರ್ಸ್‌ ಮುಖ್ಯ ಪ್ರಾಯೋಜಿಕತ್ವ ವಹಿಸಿದ್ದು, ಹಲವು ಸಂಸ್ಥೆಗಳು ಸಹಕಾರ ನೀಡಿವೆ. RFOI ಅಂದರೆ ರಿಚೆಸ್ಟ್‌ ಫಾರ್ಮರ್‌ ಆಫ್‌ ಇಂಡಿಯಾ ಹಾಗೂ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ರನ್ನು ನಾವು ಪರಿಚಯಿಸಿದ್ದೇವೆ. ರೈತರಿಗೆ ಪ್ರಶಸ್ತಿ ನೀಡುವ ಕೃಷಿ ಜಾಗರಣದ ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನುವುದು ನಮ್ಮ ಹೆಮ್ಮೆ.

ಎಂ.ಸಿ ಡೊಮಿನಿಕ್‌ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ ಡೊಮಿನಿಕ್‌.

 

ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಹಲವು ಶ್ರೀಮಂತ ರೈತರ ಸಮಾಗಮ ಇದಾಗಿದೆ. 

ಮಹೀಂದ್ರಾ ಟ್ರಾಕ್ಟರ್ಸ್ ಪ್ರಾಯೋಜಿಸಿದ ಭಾರತದ ಮಿಲಿಯನೇರ್ ಫಾರ್ಮರ್ಸ್ ಅವಾರ್ಡ್ಸ್ 2023 (Millionaire Farmers of India Awards 2023 sponsored by Mahindra Tractors)

ದೇಶದಲ್ಲೇ ಮೊದಲ ಬಾರಿ ಕೃಷಿ ಜಾಗರಣದಿಂದ ರೈತರನ್ನು ಗೌರವಿಸಿ, ಸನ್ಮಾನಿಸುವ ವಿನೂತನ ಪ್ರಯತ್ನವಾಗಿದೆ.  

ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು ಹಾಗೂ ಶ್ರೀಮಂತರಾಗಬಹುದು ಎನ್ನುವುದು ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾದ

ಎಂ. ಸಿ. ಡೊಮಿನಿಕ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್ ಶೈನಿ ಡೊಮಿನಿಕ್‌ ಅವರ ಆಶಯ. ಅವರ ಆಶಯದಂತೆಯೇ MFOI ಎನ್ನುವ ಮಹಾಕುಂಭವನ್ನು ಆಯೋಜಿಸಲಾಗಿದೆ.  

ದೇಶದ ಮೂಲೆ ಮೂಲೆಯಿಂದ ಬಂದ ರೈತರ ಸಮಾಗಮ!

ಕೃಷಿ ಜಾಗರಣ ಇದೇ ಮೊದಲ ಬಾರಿ ದೇಶದ ಎಲ್ಲ ರಾಜ್ಯಗಳಿಂದಲೂ ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023 ಮಹೀಂದ್ರ

ಟ್ರಾಕ್ಟರ್ಸ್‌ನ ಪ್ರಾಯೋಜಕತ್ವದ ಮೂಲಕ ಪ್ರಶಸ್ತಿ ಪ್ರದಾನ ಮಾಡುತ್ತಿದೆ.

ಹಲವು ವಿಭಾಗದಲ್ಲಿ ಪ್ರಶಸ್ತಿ ಪ್ರದಾನ

ಕೃಷಿ ಜಾಗರಣದಿಂದ ಈ ವಿನೂತನ ಪ್ರಯತ್ನವನ್ನು ಪ್ರಾರಂಭಿಸಲಾಗಿದ್ದು, ಹಲವು ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಮೊದಲ ದಿನ ಅದ್ಧೂರಿ ಪ್ರಾರಂಭ

ಕೃಷಿ ಜಾಗರಣದ ಮೊದಲ ದಿನದ ಬೆಳವಣಿಗೆಗೆ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಿಂದ ಸಾವಿರಾರು

ಜನ ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ಕರ್ನಾಟಕದ ಕಾರವಾರ, ಉಡುಪಿ, ಹಾವೇರಿ, ಗದಗ, ತುಮಕೂರು ಸೇರಿದಂತೆ

ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ರೈತರು ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.