ಹಾಲು ಉತ್ಪಾದನೆ ಮಾಡುವ ರೈತರಿಗಿಲ್ಲದೆ ಸಂತಸದ ಸುದ್ದಿ. ಆಗಸ್ಟ್ ತಿಂಗಳಲ್ಲಿ ರೈತರಿಗೆ ಪ್ರತಿ ಲೀಟರ್ ಹಾಲಿನ 5 ರೂಪಾಯಿ ನೀಡಬೇಕಿದ್ದ ಹಣವನ್ನು ರೈತರ ಖಾತಿಗೆ ಜಮೆ ಮಾಡಲಾಗಿದೆ.
ಹೌದು, ಪ್ರತಿ ಲೀಟರ್ ಹಾಲಿಗೆ 5 ರೂಪಾಯಿಯಂತೆ ಕಳೆದ ಸಾಲಿನ ಆಗಸ್ಟ್ ತಿಂಗಳಲ್ಲಿ ನೀಡಬೇಕಿದ್ದ ಹಾಲಿನ ಸಹಾಯಧನ ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಧಾರ್ ಜೋಡಣೆಯಾದ ಎಲ್ಲಾ ಹಾಲು ಉತ್ಪಾಕರ ರೈತರ ಖಾತೆಗೆ ಜನವರಿ 27 ರಂದು ಜಮೆ ಮಾಡಲಾಗಿದೆ. ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮೆಯಾಗದೆ ಇದ್ದರ ಮೊತ್ತ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.