News

ಕಾಲ್ನಡಿಗೆ ಬಳಿಕ ಆಯಾಸವಾಗಿ ಮಲಗಿದರು;ನಿದ್ರೆಯಲ್ಲಿದ್ದ ಕಾರ್ಮಿಕರ ಪ್ರಾಣ ಕಸಿದ ರೈಲು

09 May, 2020 1:23 PM IST By:

ವಿಶಾಖಪಟ್ಟಣಂ ಗ್ಯಾಸ್ ದುರಂತ ಮಾಸುವ ಮುನ್ನವೇ ಇದೀಗ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ರೈಲ್ವೆ ಅಪಘಾತವಾಗಿ 16 ಜನ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಲಾಕ್ಡೌನನಿಂದಾಗ ಊಟಕ್ಕೂ ಪರದಾಡುತ್ತಿದ್ದ ಕೂಲಿ ಕಾರ್ಮಿಕರು, ಬಸನಲ್ಲಿ, ಲಾರಿಯಲ್ಲಿ, ಟ್ರಕ್ಸ್ನಲ್ಲಿ ಹೋಗಿ ಸಿಕ್ಕಿಬಿದ್ದದ್ದರಿಂದ ಇವರು ಕಾಲ್ನಡಿಗೆಯಲ್ಲಿ ಹೋಗಲು ನಿರ್ಧರಿಸಿದ್ದಾರೆ. ರಸ್ತೆ ಮಾರ್ಗಕ್ಕೆ ಹೋಗದೆ ರೈಲು ಹಳಿಯನ್ನೇ ಮಾರ್ಗವಾಗಿ ಮಾಡಿಕೊಂಡು ಹೊರಟು ಸುಸ್ತಾಗಿದ್ದಾಗ ಔರಂಗಾಬಾದ್‍ನ ನಗರದ ರೈಲು ಹಳಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಜನ ಮೃತಪಟ್ಟಿದ್ದು, ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾವನಪ್ಪಿದ ವಲಸೆ ಕಾರ್ಮಿಕರ ಚಿಂತಾಜನಕ ಕಥೆ ಕೇಳಿದ್ರೆ ಕರಳು ಒಂದು ಸಲ ಚರುಕ್ ಅನ್ನದೆ ಇರದು. ಮನೆಗೆ ಸೇರುವ ಆಸೆಯಲ್ಲಿ ಹೊರಟವರ ಜೀವ ಬಾರದ ಲೋಕಕ್ಕೆ ಹೋಗಿಬಿಟ್ಟಿದೆ. ರೈಲು ದುರಂತದಲ್ಲಿ ಸಾವನಪ್ಪಿದ ಎಲ್ಲಾ ಕಾರ್ಮಿಕರು ಮಧ್ಯಪ್ರದೇಶದವರಾಗಿದ್ದು ಹೊಟ್ಟೆಪಾಡಿನ ದುಡಿಮೆಗಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಆದ್ರೆ ಕಳೆದ ಫೆಬ್ರವರಿಯಲ್ಲಿ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆ ಅಲ್ಲೇ ಸಿಕ್ಕಿಹಾಕಿಕೊಂಡಿದ್ದರು.

ಮನೆಗೆ ಬರಲಾಗದೆ, ಕೆಲಸವು ಇಲ್ಲದೆ ಸಮಸ್ಯೆಯಲ್ಲಿದ್ದರು. ಆದ್ರೆ ಮೊನ್ನೆ ಲಾಕ್ಡೌನ್ ಕೊಂಚ ಸಡಿಲಗೊಂಡ ಹಿನ್ನೆಲೆ ಒಟ್ಟಿಗೆ ಕೆಲಸ ಮಾಡುತ್ತಿದ್ದ ಈ ಎಲ್ಲಾ ಕಾರ್ಮಿಕರು ಏನು ಬೇಕಾದರೂ ಆಗಲಿ ಒಂದು ಸಲ ಊರಿಗೆ ತಲುಪಿಡೋಣ ಅಂತ ಮೇ.5ರಂದು ಕಾಲ್ನಡಿಗೆ ಮೂಲಕ ಹೊರಟೇ ಬಿಟ್ಟರು. ರೈಲು ಸಂಚಾರವೇ ಬಂದ್ ಇದೆ, ನಮಗೇನು ಆಗಲ್ಲ, ಇಲ್ಲೇ ವಿಶ್ರಾಂತಿ ಪಡೆಯೋಣವೆಂದು ಎಲ್ಲರೂ ಮಲಗಿಕೊಂಡಿದ್ದಾರೆ. ಆದರೆ ಯಮಸ್ವರೂಪಿಯಾಗಿ ಬಂದ ಗೂಡ್ಸ್ ರೈಲು ಸುಮಾರು 16 ಜನರ ಜೀವವನ್ನೇ ಕಿತ್ತುಕೊಂಡು ಬಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಹಲವು ಗಣ್ಯರು ಈ ದುರಂತಕ್ಕೆ ಕಂಬನಿ ಮಿಡಿದಿದ್ದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ನಿಡೋದಾಗಿ ಘೋಷಿಸಿದ್ದಾರೆ.