ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆಗೆ ಇಂತಿಷ್ಟೇ ಜನರು ಪಾಲ್ಗೊಳ್ಳಬೇಕೆಂಬ ಕಟ್ಟುನಿಟ್ಟಿನ ನಿಯಮ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಮಧುರೈ ನಲ್ಲಿ ಜೋಡಿ ವಿನೂತನವಾಗಿ ಮದುವೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿದೆ.
ವಿಮಾನವೊಂದನ್ನು ಬಾಡಿಗೆ ಪಡೆದು ಆಗಸದಲ್ಲೇ ವಿವಾಹವಾಗಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣ ಅವರ ಮೇಲೆ ದೂರು ಸಹ ದಾಖಲಾಗಿದೆ.
ಕೋವಿಡ್ ಮಾರ್ಗಸೂಚಿ ಇರುವ ಹಿನ್ನೆಲೆಯಲ್ಲಿ ಮಧುರೈ ನ ರಾಕೇಶ್ ಮತ್ತು ದಕ್ಷಿಣ ಅವರು ಮೇ 23 ರಂದು ಸ್ಪೈಸ್ ಜೆಟ್ ವಿಮಾನವೊಂದನ್ನು ಸುಮಾರು 2 ಗಂಟೆಗಳ ಕಾಲ ಬಾಡಿಗೆ ಪಡೆದು ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಆದರೆ ಈ ಸಮಯದಲ್ಲಿ ಕೋವಿಡ್ -19 ಮಾರ್ಗಸೂಚಿಗಳನ್ನು ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡುವ ನಿಮಯಗಳನ್ನೇಲ್ಲಾ ಗಾಳಿಗೆ ತೂರಿದ್ದಾರೆ ಎಂಬುದರ ಕುರಿತು ಮೂಲಗಳು ತಿಳಿಸಿವೆ. ಈ ಕುರಿತು ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಮದುವೆ ಅನ್ನೋದು ವಿಶೇಷ ಕ್ಷಣ. ಈ ಕ್ಷಣದಲ್ಲಿ ಕುಟುಂಬಸ್ಥರು ಬಂಧು-ಬಳಗ ಆಪ್ತರು ಪಾಲ್ಗೊಳ್ಳಬೇಕು ಎನ್ನುವುದು ನಮ್ಮ ಆಸೆ ಆಗಿತ್ತು ಆದರೆ ತಮಿಳುನಾಡಿನಲ್ಲಿ ಕೋವಿಡ್ ಕಟ್ಟುನಿಟ್ಟಿನ ನಿಯಮ ಇರುವ ಹಿನ್ನೆಲೆಯಲ್ಲಿ ಮದುವೆ ಮಾಡಿಕೊಳ್ಳುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ವಿಮಾನ ಬಾಡಿಗೆಗೆ ಪಡೆದು ಆಕಾಶದಲ್ಲಿ ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳಬೇಕಾಯಿತು ಎಂದು ನವ ದಂಪತಿ ಹೇಳಿದ್ದಾರೆ.
ಮಧುರೈ ನಿಂದ ಬೆಂಗಳೂರು ವರೆಗೆ ಪ್ರಯಾಣ:
ಮಧುರೆ ಮೂಲದ ಈ ಜೋಡಿಗಳು ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ಪಡೆದು ಮಧುರೈನಿಂದ ಬೆಂಗಳೂರಿಗೆ ಬಂದು ಹೋಗುವ ತನಕ ಆಕಾಶದಲ್ಲಿ ಮದುವೆಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ಅಪರೂಪದ ಮದುವೆಯ ವಿಮಾನದಲ್ಲಿ 161 ಮಂದಿ, ಕುಟುಂಬದ ಸದಸ್ಯರು ಬಂಧು ಮಿತ್ರರು ಆಪ್ತರು ಇದ್ದರು ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.ದಂಪತಿ ವಿಮಾನ ಏರುವುದಕ್ಕೂ ಮುನ್ನ ಮಧುರೈನ ಪ್ರಸಿದ್ಧ ಮೀನಾಕ್ಷಿ ದೇವಾಲಯಕ್ಕೆ ಭೇಟಿ ನೀಡಿ ಅಮ್ಮನ ಆಶೀರ್ವಾದ ಪಡೆದು ಆನಂತರ ಆಕಾಶದಲ್ಲಿ ಮದುವೆಯಾಗಿದ್ದಾರೆ.
ವಿಮಾನದಲ್ಲಿ ಕೋವಿಡ್ ನಿಯಮ ಪಾಲಿಸದ ಕಾರಣಕ್ಕಾಗಿ ಸ್ಪೈಸ್ ಜೆಟಿ ವಿಮಾನ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.